AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakhimpur Kheri Violence: ‘ಸಾಕ್ಷಿಗಳಿಗೆ ಸರಿಯಾದ ರಕ್ಷಣೆ ಒದಗಿಸಿ, ಇನ್ನೊಂದು ಸ್ಥಿತಿ ವರದಿ ಸಲ್ಲಿಸಿ’-ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸೂಚನೆ

ಸಾಕ್ಷಿಗಳಿಗೆ ಸೂಕ್ತವಾಗಿ ಭದ್ರತೆ ಒದಗಿಸಲಾಗಿದೆ ಎಂದು ಹರೀಶ್ ಸಾಳ್ವೆ ಕೋರ್ಟ್​ಗೆ ತಿಳಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಎನ್​.ವಿ.ರಮಣ, ಅವರ ರಕ್ಷಣೆಗಾಗಿ ಸಿಸಿಟಿವಿ ಕ್ಯಾಮರಾಗಳನ್ನು ಬಳಸಿಕೊಳ್ಳಬೇಕು. ಹೋಂ ಗಾರ್ಡ್​​ಗಳ ನೇಮಕ ಆಗಬೇಕು ಎಂದೂ ಹೇಳಿದ್ದಾರೆ. 

Lakhimpur Kheri Violence: ‘ಸಾಕ್ಷಿಗಳಿಗೆ ಸರಿಯಾದ ರಕ್ಷಣೆ ಒದಗಿಸಿ, ಇನ್ನೊಂದು ಸ್ಥಿತಿ ವರದಿ ಸಲ್ಲಿಸಿ’-ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸೂಚನೆ
ಸುಪ್ರೀಂ ಕೋರ್ಟ್
TV9 Web
| Edited By: |

Updated on:Oct 26, 2021 | 3:40 PM

Share

ಲಖಿಂಪುರ ಖೇರಿ ಹಿಂಸಾಚಾರ (Lakhimpur Kheri Violence)ಪ್ರಕರಣದ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಸುಪ್ರೀಂಕೋರ್ಟ್ (Supreme Court)​​ ಇಂದು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಕ್ಟೋಬರ್​​ ಪ್ರಾರಂಭದಲ್ಲಿ ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟಿದ್ದರು. ಅದಾದ ಬಳಿಕ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಸೇರಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.  

ಲಖಿಂಪುರ ಖೇರಿ ಹಿಂಸಾಚಾರ ಕೇಸ್​ನ್ನು ಸುಮೊಟೊ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​. ವಿ.ರಮಣ ನೇತೃತ್ವದ, ನ್ಯಾ.ಸೂರ್ಯಕಾಂತ್​ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ, ಘಟನೆಯ ಸಾಕ್ಷಿಗಳ ಹೇಳಿಕೆಗಳು ತ್ವರಿತವಾಗಿ ದಾಖಲಾಗುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದೆ. ಘಟನೆ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿರುವ ಸ್ಥಿತಿ ವರದಿ (Status Report)ಯನ್ನು ನ್ಯಾಯಾಲಯ ಸಮಗ್ರವಾಗಿ ಪರಿಶೀಲನೆ ಮಾಡಿದೆ. ಒಬ್ಬ ಆರೋಪಿಯನ್ನು ಹೊರತು ಪಡಿಸಿ ಉಳಿದೆಲ್ಲ ಆರೋಪಿಗಳನ್ನು ಯಾಕಾಗಿ ಪೊಲೀಸ್​ ಕಸ್ಟಡಿಯಲ್ಲೇ ಇಡಲಾಗಿದೆ ಎಂದು ಎನ್​.ವಿ.ರಮಣ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ಯುಪಿ ಸರ್ಕಾರದ ಅಡಿಶನಲ್​ ಅಡ್ವೋಕೇಟ್​ ಜನರಲ್ ಗರಿಮಾ ಪ್ರಶಾದ್​, ಸಾಕ್ಷಿಗಳ ಹೇಳಿಕೆಗಳನ್ನು ಇನ್ನೂ ರೆಕಾರ್ಡ್​ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ನಂತರ ಹಿರಿಯ ವಕೀಲ ಹರೀಶ್ ಸಾಳ್ವೆ ಕೋರ್ಟ್​ಗೆ ಮಾಹಿತಿ ನೀಡಿ, ಒಟ್ಟು 68 ಸಾಕ್ಷಿದಾರರಲ್ಲಿ 30 ಮಂದಿಯ ಹೇಳಿಕೆಗಳನ್ನು ದಾಖಲಿಸಲಾಗಿದೆ. ಅದರಲ್ಲೂ 23 ಮಂದಿ ಕಣ್ಣಾರೆ ಘಟನೆಯನ್ನು ನೋಡಿದವರಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸುಪ್ರೀಂಕೋರ್ಟ್​ ಈ ಬಗ್ಗೆ ಕೂಡ ಅನುಮಾನ ವ್ಯಕ್ತಪಡಿಸಿತು. ಅಷ್ಟು ದೊಡ್ಡ ಮಟ್ಟದ ಪ್ರತಿಭಟನಾ ಮೆರವಣಿಗೆ ನಡೆಯುತ್ತಿತ್ತು..ಅದರಲ್ಲಿ ಕೇವಲ 23 ಮಂದಿ ಮಾತ್ರ ಘಟನೆಯ ಪ್ರತ್ಯಕ್ಷದರ್ಶಿಗಳು ಇದ್ದಾರಾ ಎಂದು ಸಿಜೆಐ ಎನ್​.ವಿ.ರಮಣ ಪ್ರಶ್ನಿಸಿದರು.  ಹಾಗೇ, ಆರೋಪಿಗಳನ್ನು ಸರಿಯಾಗಿ ಗುರುತಿಸಬೇಕಾದ ಅಗತ್ಯವಿದೆ ಎಂಬುದನ್ನೂ ಒತ್ತಿಹೇಳಿದರು.

ಇನ್ನು ಸಾಕ್ಷಿಗಳಿಗೆ ಸೂಕ್ತವಾಗಿ ಭದ್ರತೆ ಒದಗಿಸಲಾಗಿದೆ ಎಂದು ಹರೀಶ್ ಸಾಳ್ವೆ ಕೋರ್ಟ್​ಗೆ ತಿಳಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಎನ್​.ವಿ.ರಮಣ, ಅವರ ರಕ್ಷಣೆಗಾಗಿ ಸಿಸಿಟಿವಿ ಕ್ಯಾಮರಾಗಳನ್ನು ಬಳಸಿಕೊಳ್ಳಬೇಕು. ಹೋಂ ಗಾರ್ಡ್​​ಗಳ ನೇಮಕ ಆಗಬೇಕು ಎಂದೂ ಹೇಳಿದ್ದಾರೆ.  ಇನ್ನು ನಾಲ್ವರು ರೈತರನ್ನು ಹೊರತು ಪಡಿಸಿ, ಒಬ್ಬ ಪತ್ರಕರ್ತ, ಬಿಜೆಪಿ ಕಾರ್ಯಕರ್ತ ಸೇರಿ ಇನ್ನೂ ನಾಲ್ವರು ಮೃತಪಟ್ಟ ಬಗ್ಗೆ ಇನ್ನೊಂದು ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹಾಗೇ, ನವೆಂಬರ್​ 8ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಇದನ್ನೂ ಓದಿ: ಶಾಲೆಗೆ ಚಕ್ಕರ್ ಕೂಲಿಗೆ ಹಾಜರ್; ಟಿವಿ9 ವರದಿ ಪ್ರಸಾರವಾದ ಬೆನ್ನೆಲೆ ಎಚ್ಚೆತ್ತ ಅಧಿಕಾರಿಗಳು

Redmi Note 11 Series: ಅಬ್ಬಾ… ಎಂಥಾ ಫೀಚರ್ಸ್: ರೆಡ್ಮಿ ನೋಟ್​ನಲ್ಲಿ 11ನೇ ಸರಣಿಯ ​ಫೋನ್ ಲಾಂಚ್​ಗೆ ಡೇಟ್ ಫಿಕ್ಸ್

Published On - 3:39 pm, Tue, 26 October 21

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!