Redmi Note 11 Series: ಅಬ್ಬಾ… ಎಂಥಾ ಫೀಚರ್ಸ್: ರೆಡ್ಮಿ ನೋಟ್​ನಲ್ಲಿ 11ನೇ ಸರಣಿಯ ​ಫೋನ್ ಲಾಂಚ್​ಗೆ ಡೇಟ್ ಫಿಕ್ಸ್

Redmi Note 11 launch on October 28: ರೆಡ್ಮಿ ನೋಟ್ 11 ಸರಣಿ ಇದೇ ಅಕ್ಟೋಬರ್ 28 ರಂದು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಇದರಲ್ಲಿ ರೆಡ್ಮಿ ನೋಟ್ 11, ರೆಡ್ಮಿ ನೋಟ್ 11 ಪ್ರೊ ಮತ್ತು ರೆಡ್ಮಿ ನೋಟ್ 11 ಪ್ರೊ ಪ್ಲಸ್ ಫೋನ್ನ್​ಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

Redmi Note 11 Series: ಅಬ್ಬಾ… ಎಂಥಾ ಫೀಚರ್ಸ್: ರೆಡ್ಮಿ ನೋಟ್​ನಲ್ಲಿ 11ನೇ ಸರಣಿಯ ​ಫೋನ್ ಲಾಂಚ್​ಗೆ ಡೇಟ್ ಫಿಕ್ಸ್
Redmi Note 11 series
Follow us
TV9 Web
| Updated By: Vinay Bhat

Updated on: Oct 26, 2021 | 2:36 PM

ಶವೋಮಿ ಕಂಪನಿಯ ರೆಡ್ಮಿ ನೋಟ್ ಸರಣಿಯ ಸ್ಮಾರ್ಟ್​ಫೋನ್​ಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಕಳೆದ ವರ್ಷ ಅತಿ ಹೆಚ್ಚು ಸೇಲ್ ಆದ ಸ್ಮಾರ್ಟ್​ಫೋನ್​ಗಳ ಸಾಲಿನಲ್ಲಿ ರೆಡ್ಮಿ ನೋಟ್ 9 ಮೊದಲ ಸಾಲಿನಲ್ಲಿತ್ತು. ರೆಡ್ಮಿ ನೋಟ್ 2 ಸರಣಿಯಿಂದ ಹಿಡಿದು ಈಗ ರೆಡ್ಮಿ ತನ್ನ ನೋಟ್​ನಲ್ಲಿ 11ನೇ ಆವೃತ್ತಿಯ ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ರೆಡ್ಮಿ ನೋಟ್ 11 ಸರಣಿ ಇದೇ ಅಕ್ಟೋಬರ್ 28 ರಂದು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಇದರಲ್ಲಿ ರೆಡ್ಮಿ ನೋಟ್ 11, ರೆಡ್ಮಿ ನೋಟ್ 11 ಪ್ರೊ ಮತ್ತು ರೆಡ್ಮಿ ನೋಟ್ 11 ಪ್ರೊ ಪ್ಲಸ್ ಸ್ಮಾರ್ಟ್‌ ಫೋನ್ ಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ರೆಡ್ಮಿ ನೋಟ್ 11: ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್‌ 6.5-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇ ಹೊಂದಿರಲಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆಯಂತೆ. ಜೊತೆಗೆ 8GB RAM ಹೊಂದಿರಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇನ್ನು 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ರೆಡ್ಮಿ ನೋಟ್ 11 ಪ್ರೊ: ರೆಡ್ಮಿ ನೋಟ್ 11 ಪ್ರೊ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇ ಹೊಂದಿರಲಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಹೊಂದಿದೆ. ಹಾಗೆಯೇ 8GB RAM ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ HM2 ಪ್ರೈಮರಿ ಸೆನ್ಸರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದೆ. ಮೂರನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ರೆಡ್ಮಿ ನೋಟ್ 11 ಪ್ರೊ: ರೆಡ್ಮಿ ನೋಟ್ 11 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ವಿಶೇಷತೆ ಹೆಚ್ಚು ಕಡಿಮೆ ರೆಡ್ಮಿ ನೋಟ್‌11 ಪ್ರೊ ಮಾದರಿಯಲ್ಲಿಯೇ ಇರಲಿದೆ. ಆದರೆ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಪ್ರೊಸೆಸರ್ ಬಲವನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ.

ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್‌ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ ಸಿಎನ್‌ವೈ 1,199 ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 14,050 ರೂ. ಇರಬಹುದು. ಇನ್ನು ಈ ಫೋನ್‌ 6GB RAM ಮತ್ತು 128 GB ಸ್ಟೋರೇಜ್ ರೂಪಾಂತರದ ಬೆಲೆ CNY 1,399 (ಸುಮಾರು ರೂ. 16,300) ಆಗಿರುತ್ತದೆ. ರೆಡ್ಮಿ ನೋಟ್ 11 ಪ್ರೊ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ಸಿಎನ್‌ವೈ 1,599 (ಅಂದಾಜು 18,700 ರೂ.) ಬೆಲೆ ಹೊಂದಿದೆ. 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ CNY 1,999 (ಅಂದಾಜು 18,700 ರೂ.) ಬೆಲೆ ಹೊಂದಿದೆ. ರೆಡ್ಮಿ ನೋಟ್‌ 11 ಪ್ರೊ ಪ್ಲಸ್‌ 8 GB RAM ಮತ್ತು 128 GB ಸ್ಟೋರೇಜ್ ರೂಪಾಂತರವು CNY 2,199 (ಅಂದಾಜು ರೂ. 25,713) ಬೆಲೆ ಹೊಂದಿದೆ.

Oppo A56 5G: ಮಾರುಕಟ್ಟೆಗೆ ಲಗ್ಗೆಯಿಟ್ಟ ಬಲಿಷ್ಠ ಬ್ಯಾಟರಿ, ಭರ್ಜರಿ ಕ್ಯಾಮೆರಾದ ಒಪ್ಪೋ A56 5G ಸ್ಮಾರ್ಟ್​ಫೋನ್

Flipkart Big Diwali Sale: ಭರ್ಜರಿ ಬೇಡಿಕೆ: ಗ್ರಾಹಕರಿಗಾಗಿ ಮತ್ತೊಮ್ಮೆ ದೀಪಾವಳಿ ಸೇಲ್ ಆಯೋಜಿಸಲು ಮುಂದಾದ ಫ್ಲಿಪ್​ಕಾರ್ಟ್

(Redmi Note 11 series will officially launch on October 28 with Redmi Watch 2)