AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Big Diwali Sale: ಭರ್ಜರಿ ಬೇಡಿಕೆ: ಗ್ರಾಹಕರಿಗಾಗಿ ಮತ್ತೊಮ್ಮೆ ದೀಪಾವಳಿ ಸೇಲ್ ಆಯೋಜಿಸಲು ಮುಂದಾದ ಫ್ಲಿಪ್​ಕಾರ್ಟ್

ಗ್ರಾಹಕರಿಗಾಗಿ ಮತ್ತೊಮ್ಮೆ ಫ್ಲಿಪ್​ಕಾರ್ಟ್ ದೀಪಾವಳಿ ಸೇಲ್‌ ನಡೆಸಲು ಮುಂದಾಗಿದೆ. ಸೇಲ್‌ ಅಕ್ಟೋಬರ್ 28 ರಿಂದ ನವೆಂಬರ್ 3, 2021 ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

Flipkart Big Diwali Sale: ಭರ್ಜರಿ ಬೇಡಿಕೆ: ಗ್ರಾಹಕರಿಗಾಗಿ ಮತ್ತೊಮ್ಮೆ ದೀಪಾವಳಿ ಸೇಲ್ ಆಯೋಜಿಸಲು ಮುಂದಾದ ಫ್ಲಿಪ್​ಕಾರ್ಟ್
Flipkart Big Diwali Sale
TV9 Web
| Edited By: |

Updated on: Oct 25, 2021 | 3:27 PM

Share

ಫ್ಲಿಪ್​ಕಾರ್ಟ್ (Flipkart) ಇತ್ತೀಚಷೆಗಷ್ಟೆ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (Big Billion Days sale) ಆಫರ್‌ ಮಿಸ್‌ ಮಾಡಿಕೊಂಡವರಿಗೆ ಅಕ್ಟೋಬರ್ 17 ರಿಂದ ಬಿಗ್ ದೀಪಾವಳಿ ಸೇಲ್‌ (Flipkart Big Diwali Sale) ಆಯೋಜಿಸಿತ್ತು. ಈ ಸೇಲ್‌ ಅಕ್ಟೋಬರ್ 23ಕ್ಕೆ ಮುಕ್ತಾಯಗೊಂಡಿದೆ. ಆದರೆ, ಗ್ರಾಹಕರಿಗಾಗಿ ಮತ್ತೊಮ್ಮೆ ಫ್ಲಿಪ್​ಕಾರ್ಟ್ ದೀಪಾವಳಿ ಸೇಲ್‌ ನಡೆಸಲು ಮುಂದಾಗಿದೆ. ಸೇಲ್‌ ಅಕ್ಟೋಬರ್ 28 ರಿಂದ ನವೆಂಬರ್ 3, 2021 ರವರೆಗೆ ನಡೆಯಲಿದೆ ಎಂದು ತಿಳಿಸಿದೆ. ಇದರಲ್ಲಿ ಮೊಬೈಲ್‌ಗಳು (Smartphone), ಟ್ಯಾಬ್ಲೆಟ್‌ಗಳು, ಸ್ಮಾರ್ಟ್​​ ಟಿವಿಗಳು (Smart TV) ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಕೆಲವು ರೋಮಾಂಚಕಾರಿ ಡೀಲ್‌ಗಳನ್ನು ಪಡೆಯಬಹುದಾಗಿದೆ.

ಫ್ಲಿಪ್‌ಕಾರ್ಟ್ SBI ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, SBI ಡೆಬಿಟ್ ಕಾರ್ಡ್ ಬಳಸಿ ಮಾಡಿದ ಖರೀದಿಗಳ ಮೇಲೆ 10% ಡಿಸ್ಕೌಂಟ್‌ ನೀಡಲಿದೆ. ಜೊತೆಗೆ ಎಸ್‌ಬಿಐ ಬ್ಯಾಂಕ್‌ ಅಪ್ಲಿಕೇಶನ್ Yono SBI ಮೂಲಕ ಪಾವತಿಸುವವರಿಗೂ ಬಿಗ್‌ ಡಿಸ್ಕೌಂಟ್‌ ದೊರೆಯಲಿದೆ.

ದೀಪಾವಳಿ ಸೇಲ್‌ನಲ್ಲಿ ಪ್ರಮುಖವಾಗಿ ಐಫೋನ್‌ಗಳು, ಮೊಟೊರೊಲಾ ಮತ್ತು ಶವೋಮಿ ಫೋನ್‌ಗಳ ಮೇಲೆ ಭಾರಿ ಡೀಲ್‌ಗಳನ್ನು ನೀಡುವುದಾಗಿ ಹೇಳಿದೆ. ಆಯ್ದ ಉತ್ಪನ್ನಗಳ ಮೇಲೆ 80% ಡಿಸ್ಕೌಂಟ್‌ ನೀಡುವುದಾಗಿ ತನ್ನ ಸೇಲ್‌ ಪೇಜ್‌ನಲ್ಲಿ ಹೇಳಿಕೊಂಡಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳು, ಡೆಸ್ಕ್‌ಟಾಪ್‌ಗಳು, ಪವರ್ ಬ್ಯಾಂಕ್‌ಗಳು, ಹೆಡ್‌ಫೋನ್‌ಗಳು, ಸ್ಪೀಕರ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ 80% ಡಿಸ್ಕೌಂಟ್‌ ಸಿಗಲಿದೆ.

ಅಂತೆಯೆ ಸ್ಮಾರ್ಟ್‌ಟಿವಿಗಳು ಮತ್ತು ಉಪಕರಣಗಳ ಮೇಲೆ 75% ರಷ್ಟು ರಿಯಾಯಿತಿಯನ್ನು ನೀಡಿದೆ. ಇನ್ನು ಐಫೋನ್ 12 ಮೇಲೆ ಫ್ಲಿಪ್‌ಕಾರ್ಟ್ ಬಿಗ್‌ ಡೀಲ್‌ಗಳನ್ನು ನೀಡುತ್ತಿದೆ. ಪ್ರಸ್ತುತ, ಐಫೋನ್‌ 12 64GB ಸ್ಟೋರೇಜ್ ಮಾದರಿಗೆ 60,199 ರೂಗಳಲ್ಲಿ ಲಭ್ಯವಿದೆ. ಆದರೆ 128GB ಮಾದರಿಯು 66,199ರೂ.ಗಳಿಗೆ ದೊರೆಯಲಿದೆ. ಇದಲ್ಲದೆ ಐಫೋನ್ 12 ಮಿನಿ 64GB ಮಾದರಿಗೆ 45,199ರೂ.ಬೆಲೆಗೆ ಲಭ್ಯವಿದೆ. ಬಿಗ್ ದೀಪಾವಳಿ ಸೇಲ್‌ ಸಮಯದಲ್ಲಿ ಈ ಎರಡೂ ಮಾದರಿಗಳ ಮೇಲೆ ಇನ್ನು ಹೆಚ್ಚಿನ ರಿಯಾಯಿತಿಗಳನ್ನು ನಿರೀಕ್ಷಿಸಬಹುದಾಗಿದೆ.

ಇದರ ಜೊತೆಗೆ ಶವೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೂ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಆಫರ್‌ ನೀಡಲಾಗುತ್ತಿದೆ. ರೆಡ್‌ಮಿ 9 ಪ್ರೈಮ್‌, ರೆಡ್‌ಮಿ 9i Sport, ರೆಡ್‌ಮಿ 9ಪವರ್‌, ರೆಡ್‌ಮಿ 9ಪ್ರೈಮ್‌, ರೆಡ್‌ಮಿ 8A ಡ್ಯುಯೆಲ್‌, ಮತ್ತು ರೆಡ್‌ಮಿ ನೋಟ್‌ 9 ಸ್ಮಾರ್ಟ್‌ಫೋನ್‌ಗಳಿಗೆ ದೀಪಾವಳಿ ಸೇಲ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ದೊರೆಯಲಿದೆ. ಮೋಟೋ G40, ಮೋಟೋ G60, ಮೊಟೊರೊಲಾ E7 ಪವರ್ ಮತ್ತು ಮೋಟೋ G40 ಫ್ಯೂಷನ್ ಮೇಲೆ ಫ್ಲಿಪ್‌ಕಾರ್ಟ್ ರಿಯಾಯಿತಿಗಳನ್ನು ಪಡೆಯುವ ಸಾಧ್ಯತೆಯಿದೆ.

WhatsApp: ವಾಟ್ಸ್​ಆ್ಯಪ್​ನಿಂದ ಬಹುಬೇಡಿಕೆಯ ಫೀಚರ್: ಸ್ಟೇಟಸ್​ನಲ್ಲಿ ವಿಶೇಷ ಆಯ್ಕೆಯ ಹೊಸ ಅಪ್ಡೇಟ್

(Flipkart Big Diwali Sale on Flipkart starts October 28 to November 3 2021)

Follow Us
Web contact
Web contact

TV9 Kannada

Read More
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಎಲೆಕ್ಟ್ರಿಕ್ ಕಾರಿನ ಭೀಕರ ಅಪಘಾತದ ವಿಡಿಯೋ ವೈರಲ್
ಎಲೆಕ್ಟ್ರಿಕ್ ಕಾರಿನ ಭೀಕರ ಅಪಘಾತದ ವಿಡಿಯೋ ವೈರಲ್
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ