ದೆಹಲಿ: ಉತ್ತರ ಪ್ರದೇಶದ ಲಖನೌನಲ್ಲಿ 45ನೇ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಕೊರೊನಾ ಲಸಿಕೆ ಸಂಬಂಧಿತ ಔಷಧಗಳ ಮೇಲೆ ಜಿಎಸ್ಟಿ ವಿನಾಯಿತಿಯನ್ನು ಡಿಸೆಂಬರ್ 31ರವರೆಗೆ ಮುಂದುವರಿಸಲು ನಿರ್ಧರಿಸಲಾಯಿತು. ಕಬ್ಬಿಣ, ಮ್ಯಾಂಗನೀಸ್, ತಾಮ್ರ, ನಿಕಲ್, ಕೋಬಾಲ್ಟ್, ಅಲ್ಯೂಮಿನಿಯಂ, ಸೀಸ, ಸತು, ತವರ, ಕ್ರೋಮಿಯಂ – ಅದಿರು ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 5 ರಿಂದ ಶೇಕೆಡಾ 18 ಕ್ಕೆ ಹೆಚ್ಚಿಸಲು ಜಿಎಎಸ್ಟಿ ಕೌನ್ಸಿಲ್ ಅನುಮೋದನೆ ನೀಡಿತು.
ತೆಂಗಿನ ಎಣ್ಣೆ ಮೇಲೆ ಜಿಎಸ್ಟಿ ವಿಧಿಸುವ ವಿಚಾರವಾಗಿ ಹೆಚ್ಚಿನ ಅಧ್ಯಯನಕ್ಕೆ ಪ್ರಸ್ತಾವನೆಯನ್ನು ಜಿಎಸ್ಟಿ ಮಂಡಳಿ ತಡೆ ಹಿಡಿಯಿತು. ಒಂದು ಲೀಟರ್ಗಿಂತ ಕಡಿಮೆ ತೆಂಗಿನ ಎಣ್ಣೆಗೆ ಕೂದಲಿಗೆ ಹಚ್ಚುವ ಎಣ್ಣೆ ಎಂದು ವರ್ಗಿಕರಿಸಿ ಶೇಕಡಾ 18 ಜಿಎಸ್ಟಿ, ಒಂದು ಲೀಟರ್ಗಿಂತ ಹೆಚ್ಚಿನ ತೆಂಗಿನ ಎಣ್ಣೆಗೆ ಶೇಕಡಾ 5 ಜಿಎಸ್ಟಿ ವಿಧಿಸಲು ಮಂಡಳಿ ನಿರ್ಧರಿಸಿತು. ಹಣ್ಣಿನ ಜ್ಯೂಸ್‌ಗಳ ಮೇಲೆ ಶೇ.12ರಷ್ಟು ಪರಿಹಾರದೊಂದಿಗೆ ಜಿಎಸ್‌ಟಿ ಶೇಕಡಾ 28ಕ್ಕೆ ಏರಿಸಲು ನಿರ್ಣಯಿಸಲಾಯಿತು.
ಆಂಫೋಟೆರಿಸಿನ್, ಟೋಸಿಲಿಜುಮಾಬ್ ಮೇಲೆ ಜಿಎಸ್ಟಿ ವಿಧಿಸಿಲ್ಲ. ರೆಮ್ಡಿಸಿವಿರ್, ಹೆಪರಿನ್ ಮೇಲೆ ಶೇ. 5ರಷ್ಟು ಜಿಎಸ್‌ಟಿ, ಇಟೋಲಿಜುಮಾಬ್, ಪೋಸಕೋಜೋಲ್, ಪವಿಪಿರವಿರ್, ಕಾಸಿರಿವಿಮಬ್, ಇಂಡಿವಿಮಬ್, ಡಿಯೋಕ್ಸಿ ಡಿ ಗ್ಲೂಕೋಸ್ ಮೇಲಿನ ಜಿಎಸ್‌ಟಿ ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲು ನಿರ್ಣಯಿಸಲಾಯಿತು.
ಇದನ್ನೂ ಓದಿ:
ಪೆಟ್ರೋಲ್ ಡೀಸೆಲ್ಗಳನ್ನು ಜಿಎಸ್ಟಿ ಅಡಿ ತರಬಾರದು: ಸಿದ್ದರಾಮಯ್ಯ ಆಗ್ರಹ
ಹಪ್ಪಳ ಮತ್ತು ಜಿಎಸ್ಟಿ: ವೈರಲ್ ಆಯ್ತು ಉದ್ಯಮಿ ಹರ್ಷ್ ಗೋಯೆಂಕ ಟ್ವೀಟ್, ಫ್ಯಾಕ್ಟ್ಚೆಕ್ ಮಾಡಿದ ತೆರಿಗೆ ಇಲಾಖೆ
(GST Council 45th meeting announcement here is the decision in Kannada)