ಶಶಿ ತರೂರ್​​ನ್ನು ಕತ್ತೆ ಎಂದಿದ್ದಕ್ಕೆ ಕ್ಷಮೆಯಾಚಿಸಿದ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ

TV9 Digital Desk

| Edited By: Rashmi Kallakatta

Updated on: Sep 17, 2021 | 5:26 PM

Shashi Tharoor: ಶಶಿ ತರೂರ್ ಅವರು ರೆಡ್ಡಿಯ ಕ್ಷಮಾಪಣೆಯನ್ನು ಸ್ವೀಕರಿಸಿದ್ದು ಈ ದುರದೃಷ್ಟಕರ ಘಟನೆಯನ್ನು ಮರೆಯುವುದಾಗಿ ಹೇಳಿದ್ದಾರೆ

ಶಶಿ ತರೂರ್​​ನ್ನು ಕತ್ತೆ ಎಂದಿದ್ದಕ್ಕೆ ಕ್ಷಮೆಯಾಚಿಸಿದ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ
ಶಶಿ ತರೂರ್

ಹೈದರಾಬಾದ್: ಶಶಿ ತರೂರ್ ಅವರನ್ನು “ಕತ್ತೆ” ಎಂದು ಕರೆದು ವಿವಾದಕ್ಕೀಡಾದ ನಂತರ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಅವರು ಶುಕ್ರವಾರ ಕ್ಷಮೆ ಕೇಳಿದ್ದಾರೆ. ತರೂರ್ ಅವರು ರೆಡ್ಡಿಯ ಕ್ಷಮಾಪಣೆಯನ್ನು ಸ್ವೀಕರಿಸಿದ್ದು ಈ ದುರದೃಷ್ಟಕರ ಘಟನೆಯನ್ನು ಮರೆಯುವುದಾಗಿ ಹೇಳಿದ್ದಾರೆ. “ನಾನು ಈ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ ಮತ್ತು ನನ್ನ ಹಿರಿಯ ಸಹೋದ್ಯೋಗಿಯನ್ನು ಅತ್ಯುನ್ನತ ಗೌರವದಲ್ಲಿರಿಸುವೆ ಎಂದು ಪುನರುಚ್ಚರಿಸುತ್ತೇನೆ ಎಂದು ತಿಳಿಸಲು ಶಶಿ ತರೂರ್ ಅವರೊಂದಿಗೆ ಮಾತನಾಡಿದ್ದೇನೆ” ಎಂದು ರೆಡ್ಡಿ ಗುರುವಾರ ಟ್ವೀಟ್ ಮಾಡಿದ್ದಾರೆ. “ನನ್ನ ಮಾತುಗಳಿಂದ ಅವರಿಗೆ ಉಂಟಾದ ನೋವಿಗೆ ನಾನು ವಿಷಾದಿಸುತ್ತೇನೆ. ನಾವು ಕಾಂಗ್ರೆಸ್ ಪಕ್ಷದ ಮೌಲ್ಯಗಳು ಮತ್ತು ನೀತಿಗಳಲ್ಲಿ ನಮ್ಮ ನಂಬಿಕೆಯನ್ನು ಇರಿಸಿದ್ದೇವೆ ಎಂದು ರೆಡ್ಡಿ ಹೇಳಿದ್ದಾರೆ.

ರೆಡ್ಡಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ತರೂರ್, ಪಕ್ಷದ ನಾಯಕನಿಂದ ಕರೆಯನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದರು. “ನಾನು ಅವರ ವಿಷಾದದ ಅಭಿವ್ಯಕ್ತಿಯನ್ನು ಸ್ವೀಕರಿಸುತ್ತೇನೆ ಮತ್ತು ಈ ದುರದೃಷ್ಟಕರ ಪ್ರಸಂಗವನ್ನು ಹಿಂದೆ ಸರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ ರೆಡ್ಡಿ ತರೂರ್ ಅವರನ್ನು “ಕತ್ತೆ” ಎಂದು ಕರೆದರು ಮತ್ತು ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಶಿಸಿದರು. ರೆಡ್ಡಿ ಅವರ ಈ ಹೇಳಿಕೆ ವಿವಾದವನ್ನುಂಟುಮಾಡಿದ್ದು ,ಹಿರಿಯ ನಾಯಕನ ಬಗ್ಗೆ ಈ ರೀತಿ ಮಾತನಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

ಈ ಹಿಂದೆ ತಾವು ಹಾಗೆ ಹೇಳಿಲ್ಲ ಎಂದಿದ್ದ ರೆಡ್ಡಿ ತೆಲಂಗಾಣ ಐಟಿ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮರಾವ್ ಸುಳ್ಳು ಹೇಳುತ್ತಿದ್ದಾರೆ ಮತ್ತು ಸುಳ್ಳು ಸುದ್ದಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: India Detectives: ಇಂಡಿಯಾ ಡಿಟೆಕ್ಟಿವ್ಸ್ ಸೀರೀಸ್​ನ ರೋಚಕ ಕಹಾನಿ ಬಿಚ್ಚಿಟ್ಟ ಐಪಿಎಸ್ ಅಧಿಕಾರಿ ಶಶಿಕುಮಾರ್

ಇದನ್ನೂ ಓದಿ: ಬರಾಕ್ ಒಬಾಮಾ 2014ರಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇವಲ ಒಂದು ಲೋಟ ನೀರು ಕುಡಿದಿದ್ದರು!

(Telangana Congress Chief Revanth Reddy apologised to Shashi Tharoor for donkey remark)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada