ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆದಾಯ ಸಂಗ್ರಹವು 2021ರ ಏಪ್ರಿಲ್ನಲ್ಲಿ ಸಾರ್ವಕಾಲಿಕ ದಾಖಲೆಯನ್ನು ಮಾಡಿದೆ. ಆ ಮೂಲಕ ಮತ್ತೊಂದು ಎತ್ತರವನ್ನು ತಲುಪಿಕೊಂಡಿದೆ. 1,41,384 ಕೋಟಿ ರೂಪಾಯಿ ಒಟ್ಟು ಮೊತ್ತ ಸಂಗ್ರಹ ಆಗಿದೆ. ಅದರಲ್ಲಿ ಸಿಜಿಎಸ್ಟಿ 27,837 ಕೋಟಿ ರೂ., ಎಸ್ಜಿಎಸ್ಟಿ 35,621 ಕೋಟಿ ರೂ., ಐಜಿಎಸ್ಟಿ 68,481 ಕೋಟಿ ರೂಪಾಯಿ ಸಂಗ್ರಹ ಆಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಿಂದ ತಿಳಿದುಬಂದಿದೆ. ಅಂದಹಾಗೆ 2021ರ ಏಪ್ರಿಲ್ ತಿಂಗಳ ಜಿಎಸ್ಟಿ ಸಂಗ್ರಹ ಮೊತ್ತವು ಮಾರ್ಚ್ ತಿಂಗಳ ದಾಖಲೆಯನ್ನೂ ಮೀರಿದೆ. “ಜಿಎಸ್ಟಿ ಆದಾಯದ ಕಳೆದ ಆರು ತಿಂಗಳ ಚೇತರಿಕೆ ಟ್ರೆಂಡ್ ಗಮನಿಸುವುದಾದರೆ, 2021ರ ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್ನಲ್ಲಿ ಶೇ 14ರಷ್ಟು ಹೆಚ್ಚು ಆದಾಯ ಬಂದಿದೆ,” ಎನ್ನಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಸೇವೆಗಳ ಆಮದು ಸೇರಿಸಿಕೊಂಡು ದೇಶೀಯ ವಹಿವಾಟಿನಿಂದ ಕಳೆದ ತಿಂಗಳಿಗಿಂತ ಶೇ 21ರಷ್ಟು ಹೆಚ್ಚಿಗೆ ಆದಾಯ ಬಂದಿದೆ. ಕಳೆದ 7 ತಿಂಗಳಿಂದ ಸತತವಾಗಿ ಜಿಎಸ್ಟಿ ಆದಾಯ 1 ಲಕ್ಷ ಕೋಟಿ ರೂಪಾಯಿ ದಾಟುತ್ತಿರುವುದು ಮಾತ್ರವಲ್ಲ, ಏರಿಕೆ ಕಾಣುತ್ತಲೇ ಸಾಗುತ್ತಿದೆ ಎಂದು ಸರ್ಕಾರವು ತಿಳಿಸಿದೆ. ಜಿಎಸ್ಟಿ, ಆದಾಯತೆರಿಗೆ, ಕಸ್ಟಮ್ಸ್ ಐಟಿ ವ್ಯವಸ್ಥೆ ಹೀಗೆ ವಿವಿಧ ಮೂಲಗಳಿಂದ ತೀವ್ರವಾದ ಡೇಟಾ ವಿಶ್ಲೇಷಣೆ ಮಾಡಿರುವುದು, ನಕಲಿ ಬಿಲ್ಲಿಂಗ್ಗಳ ಮೇಲೆ ಕಣ್ಗಾವಲು ಇಟ್ಟಿರುವುದು ಮತ್ತು ಪರಿಣಾಮಕಾರಿ ತೆರಿಗೆ ಆಡಳಿತದಿಂದ ಜಿಎಸ್ಟಿ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ.
ಕಳೆದ ಏಳು ತಿಂಗಳಲ್ಲಿ ಜಿಎಸ್ಟಿ ಆದಾಯ ಸಂಗ್ರಹ ಮಾಹಿತಿ ಹೀಗಿದೆ:
2020 ಅಕ್ಟೋಬರ್: 1,05,155 ಕೋಟಿ
2020 ನವೆಂಬರ್: 1,04,963 ಕೋಟಿ
2020 ಡಿಸೆಂಬರ್: 1,15,174 ಕೋಟಿ
2021 ಜನವರಿ: 1,19,875 ಕೋಟಿ
2021 ಫೆಬ್ರವರಿ: 1,13,148 ಕೋಟಿ
2021 ಮಾರ್ಚ್: 1,23,902 ಕೋಟಿ
2021 ಏಪ್ರಿಲ್: 1,41,384 ಕೋಟಿ
✅The gross GST revenue collected in the month of April’ 2021 is at a record high of Rs. 1,41,384 crore
✅The GST revenues during April 2021 are the highest since the introduction of GST
(1/2)
Read more➡️ https://t.co/GymAhrdw5Y pic.twitter.com/jN6ER9kJP8— Ministry of Finance (@FinMinIndia) May 1, 2021
ಇದನ್ನೂ ಓದಿ: ಜಿಎಸ್ಟಿ ವಂಚನೆಯ ₹ 20,124 ಕೋಟಿ ಕೇಂದ್ರ ಸರ್ಕಾರದಿಂದ ಪತ್ತೆ: ನಿರ್ಮಲಾ ಸೀತಾರಾಮನ್
(2021 April month GST collection for government stands at 1.41 lakh crore rupees. By this made all time high collection record)