ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: ಐವರು ಕೊರೊನಾ ಸೋಂಕಿತರು ಬಲಿ..
ಗುಜರಾತ್ ರಾಜ್ಕೋಟ್ನ ಉದಯ ಶಿವಾನಂದ ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು ದುರ್ಘಟನೆಯಲ್ಲಿ ಐವರು ಕೊರೊನಾ ಸೋಂಕಿತರು ಮೃತಪಟ್ಟ ಘಟನೆ ನಡೆದಿದೆ.
ಗುಜರಾತ್ನ ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ರಾಜ್ಕೋಟ್ನ ಉದಯ ಶಿವಾನಂದ ಆಸ್ಪತ್ರೆಯ ICUನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ವೇಳೆ ಆಸ್ಪತ್ರೆಯಲ್ಲಿ 33 ಕೊರೊನಾ ಸೋಂಕಿತರಿದ್ದರು ಈ ಪೈಕಿ ಐವರು ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ.
ಸದ್ಯ ಅಗ್ನಿಶಾಮಕ ಸಿಬ್ಬಂದಿ ಕಿಟಕಿ ಮೂಲಕ ಉಳಿದವರನ್ನ ರಕ್ಷಿಸಿದ್ದಾರೆ. ಈ ಹಿಂದೆಯೂ ಗುಜರಾತ್ನ ಕೆಲವು ಆಸ್ಪತ್ರೆಗಳಲ್ಲಿ ಇಂತಹ ಅವಘಡಗಳು ಸಂಭವಿಸಿದ್ದವು. ಆಗಸ್ಟ್.6ರಂದು ಅಹಮದಾಬಾದ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹಾಗೂ ಆಗಸ್ಟ್.25ರಂದು ಜಾಮ್ನಗರ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿತ್ತು. ಈ ರೀತಿ ಕೊರೊನಾ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿವೆ.
Published On - 7:09 am, Fri, 27 November 20