ಗುಜರಾತ್: 540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ

ಯುವತಿಯೊಬ್ಬಳು 540 ಅಡಿ ಆಳದ ಬೋರ್​ವೆಲ್​ಗೆ ಬಿದ್ದಿರುವ ಘಟನೆ ಗುಜರಾತ್​ನ ಕಛ್​ನಲ್ಲಿ ನಡೆದಿದೆ. 540 ಅಡಿ ಆಳದ ಕೊಳವೆಬಾವಿಯಲ್ಲಿ ಬಾಲಕಿ 490 ಅಡಿ ಆಳದಲ್ಲಿ ಸಿಲುಕಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭುಜ್ ತಾಲೂಕಿನ ಕಂಡೆರೈ ಗ್ರಾಮದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ. ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಮ್ಲಜನಕ ಪೂರೈಸಲಾಗುತ್ತಿದೆ.

ಗುಜರಾತ್: 540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ
ಬೋರ್​ವೆಲ್​Image Credit source: NDTV
Follow us
ನಯನಾ ರಾಜೀವ್
|

Updated on: Jan 07, 2025 | 9:10 AM

ಗುಜರಾತ್​ನ ಕಛ್ ಜಿಲ್ಲೆಯಲ್ಲಿ 18 ವರ್ಷದ ಯುವತಿಯೊಬ್ಬಳು 540 ಅಡಿ ಆಳದ ಬೋರ್​ವೆಲ್​ಗೆ ಬಿದ್ದಿರುವ ಘಟನೆ ನಡೆದಿದೆ. ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಗಡಿ ಭದ್ರತಾ ಪಡೆ ತಂಡಗಳು ಸ್ಥಳದಲ್ಲಿವೆ. ರಕ್ಷಣಾ ತಂಡ ಬಾಲಕಿಯ ಮೇಲೆ ನಿಗಾ ಇರಿಸಿದ್ದು, ಆಕೆಗೆ ಆಮ್ಲಜನಕ ಒದಗಿಸಿದೆ.

540 ಅಡಿ ಆಳದ ಕೊಳವೆಬಾವಿಯಲ್ಲಿ ಬಾಲಕಿ 490 ಅಡಿ ಆಳದಲ್ಲಿ ಸಿಲುಕಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭುಜ್ ತಾಲೂಕಿನ ಕಂಡೆರೈ ಗ್ರಾಮದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ.

ಅಧಿಕಾರಿಗಳ ಪ್ರಕಾರ, ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ರಕ್ಷಣಾ ತಂಡವು ಆಕೆಗೆ ಸರಿಯಾದ ಆಮ್ಲಜನಕ ಪೂರೈಕೆಯನ್ನು ಮಾಡುತ್ತಿದೆ.

ರಾಜಸ್ಥಾನ ಬೋರ್‌ವೆಲ್ ಪ್ರಕರಣ ರಾಜ್ಯದ ಸುದೀರ್ಘ ರಕ್ಷಣಾ ಕಾರ್ಯಾಚರಣೆಯಲ್ಲಿ, 10 ದಿನಗಳ ನಂತರ ಮೂರು ವರ್ಷದ ಬಾಲಕಿಯನ್ನು ಬೋರ್‌ವೆಲ್‌ನಿಂದ ರಕ್ಷಿಸಲಾಗಿತ್ತು.

ರಾಜಸ್ಥಾನದಲ್ಲಿ 150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಚೇತನಾ ಅವರನ್ನು ಜನವರಿ 1 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಹೊರಗೆ ತರಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವಾಗ, ಅವರು ಸಾವನ್ನಪ್ಪಿದ್ದಳು.ಡಿಸೆಂಬರ್ 23 ರಂದು ಸರುಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಯಾಲಿ ಧಾನಿಯಲ್ಲಿರುವ ತನ್ನ ತಂದೆಯ ಕೃಷಿ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಮಗು ಬೋರ್‌ವೆಲ್‌ಗೆ ಬಿದ್ದಿತ್ತು.

ಮತ್ತಷ್ಟು ಓದಿ: ಇದೊಂದು ಪವಾಡ!; 9 ದಿನಗಳ ಬಳಿಕ ರಾಜಸ್ಥಾನದ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕಿಯ ರಕ್ಷಣೆ

ಆರಂಭದಲ್ಲಿ ರಿಂಗ್ ಸಹಾಯದಿಂದ ಬಾಲಕಿಯನ್ನು ಬೋರ್‌ವೆಲ್‌ನಿಂದ ಹೊರತೆಗೆಯಲು ಪ್ರಯತ್ನಿಸಲಾಯಿತು ಆದರೆ ಎಲ್ಲಾ ಪ್ರಯತ್ನಗಳು ವಿಫಲವಾದವು. ನಂತರ ಸ್ಥಳಕ್ಕೆ ಪೈಲಿಂಗ್ ಯಂತ್ರ ತಂದು ಸಮಾನಾಂತರ ಹೊಂಡ ತೋಡಲಾಯಿತು.

ಡಿಸೆಂಬರ್ 2024 ರಲ್ಲಿ ಮಧ್ಯಪ್ರದೇಶದ ಗುನಾ ಜಿಲ್ಲೆಯಿಂದ ಇದೇ ರೀತಿಯ ಪ್ರಕರಣ ವರದಿಯಾಗಿದೆ, ಅಲ್ಲಿ 10 ವರ್ಷದ ಬಾಲಕನನ್ನು ಬೋರ್‌ವೆಲ್‌ನಿಂದ ರಕ್ಷಿಸಲಾಗಿತ್ತು. ಆದರೆ ಅಷ್ಟರೊಳಗೆ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಗುನಾ ಜಿಲ್ಲಾ ಕೇಂದ್ರದಿಂದ 50 ಕಿಮೀ ದೂರದಲ್ಲಿರುವ ರಾಘೋಗಢ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಿಪ್ಲಿಯಾ ಗ್ರಾಮದಲ್ಲಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಬಾಲಕ ಸುಮಿತ್ ಮೀನಾ ಬೋರ್‌ವೆಲ್‌ನ ತೆರೆದ ಶಾಫ್ಟ್‌ಗೆ ಜಾರಿದ್ದ. ಬೆಳಗ್ಗೆ 9.30ರ ಸುಮಾರಿಗೆ ಹೊರಗೆ ತೆಗೆದಾಗ ಸಾವನ್ನಪ್ಪಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ