ಇದೊಂದು ಪವಾಡ!; 9 ದಿನಗಳ ಬಳಿಕ ರಾಜಸ್ಥಾನದ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕಿಯ ರಕ್ಷಣೆ
ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ ಆಟವಾಡುವಾಡುತ್ತಾ 3 ವರ್ಷದ ಬಾಲಕಿಯೊಬ್ಬಳು ಡಿಸೆಂಬರ್ 23ರಂದು ತಮ್ಮ ತೋಟದಲ್ಲಿದ್ದ ಕೊಳವೆ ಬಾವಿಗೆ ಬಿದ್ದಿದ್ದಳು. ಈ ಬಗ್ಗೆ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಆ ಗ್ರಾಮಸ್ಥರು ಮತ್ತು ಆ ಮಗುವಿನ ಕುಟುಂಬಸ್ಥರು ಮಗುವಿನ ಪ್ರಾಣ ಉಳಿಯಲೆಂದು ಹೊರದಿರುವ ಹರಕೆಗಳಿಲ್ಲ, ಬೇಡದ ದೇವರಿಲ್ಲ. ಅವರೆಲ್ಲರ ಪ್ರಾರ್ಥನೆಗೆ ಕೊನೆಗೂ ದೇವರು ಅಸ್ತು ಎಂದಿದ್ದಾನೆ. ಪವಾಡವೆಂಬಂತೆ 9 ದಿನಗಳ ಸತತ ಪ್ರಯತ್ನದ ನಂತರ ಇಂದು ಆ 3 ವರ್ಷದ ಮಗುವನ್ನು ಸುರಕ್ಷಿತವಾಗಿ ಕೊಳವೆ ಬಾವಿಯಿಂದ ಹೊರಗೆ ತೆಗೆಯಲಾಗಿದೆ.
ಜೈಪುರ: ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ 9 ದಿನಗಳ ಹಿಂದೆ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಚೇತನಾ ಎಂಬ ಮಗುವನ್ನು ಕೊನೆಗೂ ಇಂದು ರಕ್ಷಿಸಲಾಗಿದೆ. ಡಿಸೆಂಬರ್ 23ರಂದು ಆ ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ತೋಟದಲ್ಲಿದ್ದ ಕೊಳವೆ ಬಾವಿಯೊಳಗೆ ಬಿದ್ದಿದ್ದಳು. ಆಕೆ ಕೊಳವೆ ಬಾವಿಗೆ ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣ ಆರಂಭಿಸಲಾಗಿತ್ತು. ಆದರೆ, ಆ ಕಾರ್ಯಾಚರಣೆ ಅತ್ಯಂತ ಕಠಿಣವಾಗಿತ್ತು. ಚೇತನಾ ಡಿಸೆಂಬರ್ 23ರಿಂದ 150 ಅಡಿ ಆಳದ ಬೋರ್‌ವೆಲ್‌ನಲ್ಲಿ ಸಿಲುಕಿಕೊಂಡಿದ್ದಳು. ಕೂಡಲೇ NDRF ಮತ್ತು SDRF ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಆ ಕೊಳವೆ ಬಾವಿಗೆ ಸಮಾನಾಂತರ ಸುರಂಗ ಕೊರೆಯಲು ತಂಡಗಳು ಹಗಲಿರುಳು ಶ್ರಮಿಸಿದ್ದವು.
ರಾಜಸ್ಥಾನ ರಾಜ್ಯದಲ್ಲಿಯೇ ಸುದೀರ್ಘವಾದ ರಕ್ಷಣಾ ಕಾರ್ಯಾಚರಣೆಗಳಲ್ಲಿ ಇದು ಕೂಡ ಒಂದು. ಈ ಕಾರ್ಯಾಚರಣೆ 160 ಗಂಟೆಗಳ ಕಾಲ ನಡೆಯಿತು. ಆ ಮಗುವಿನ ಕುಟುಂಬಸ್ಥರು ತಮ್ಮ ಮಗುವನ್ನು ಜೀವಸಹಿತ ಉಳಿಸಿಕೊಡಿ ಎಂದು ಜಿಲ್ಲಾಡಳಿತ, ಪೊಲೀಸರ ಎದುರು ಗೋಗರೆದಿದ್ದರು. ಜಿಲ್ಲಾಡಳಿತ ಕಾರ್ಯಾಚರಣೆಯಲ್ಲಿ ನಿರ್ಲಕ್ಷ್ಯ ಮಾಡಿದೆ ಎಂದು ಅವರು ಹತಾಷೆಯಿಂದ ಆರೋಪಿಸಿದ್ದರು. ಮತ್ತೊಂದೆಡೆ ಆಡಳಿತವು ಇದು ಕಠಿಣ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಹೇಳಿಕೊಂಡಿತ್ತು. ಹೀಗಾಗಿ, ಮಗು 9 ದಿನಗಳ ಬಳಿಕ ಬದುಕಿ ಮೇಲೆ ಬರುತ್ತದೆ ಎಂಬ ನಂಬಿಕೆಯೇ ಜನರಲ್ಲಿ ಇರಲಿಲ್ಲ. ಆದರೆ, ಆ ಮಗುವಿನ ಅದೃಷ್ಟ ಚೆನ್ನಾಗಿತ್ತು. ಕೇವಲ 3 ವರ್ಷದ ಮಗು 9 ದಿನಗಳ ಕಾಲ 150 ಅಡಿ ಆಳದ ಕೊಳವೆ ಬಾವಿಯಲ್ಲಿ ಆಹಾರವಿಲ್ಲದೆ ಬದುಕುಳಿದಿದೆ.
VIDEO | Rajasthan: Here’s what Medical Officer Dr Chetanya Rawat said about the death of 3-year-old Chetna, who lost her life after being trapped in a borewell for 10 days in Kotputli.
“She was brought in and immediately moved to the emergency room, where a special bed was set… pic.twitter.com/u5ci0QQQDO
— Press Trust of India (@PTI_News) January 1, 2025
ಇದನ್ನೂ ಓದಿ: ರಾಜಸ್ಥಾನ: 700 ಅಡಿ ಆಳದ ಕೊಳವೆಬಾವಿಗೆ ಬಿದ್ದ ಮೂರು ವರ್ಷದ ಮಗು
ರಾಜಸ್ಥಾನದ ಕೊಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ಸರುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಯಾಲಿ ಧಾನಿಯಲ್ಲಿರುವ ತನ್ನ ತಂದೆಯ ಕೃಷಿ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಚೇತನಾ ಬೋರ್‌ವೆಲ್‌ಗೆ ಬಿದ್ದಿದ್ದಳು. ಆರಂಭದಲ್ಲಿ ರಿಂಗ್ ಸಹಾಯದಿಂದ ಬಾಲಕಿಯನ್ನು ಬೋರ್‌ವೆಲ್‌ನಿಂದ ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾದವು. ಹಲವು ದಿನಗಳಿಂದ ಸತತ ಪ್ರಯತ್ನ ನಡೆಸಿದರೂ ಫಲ ಸಿಗದ ಕಾರಣ ಇಂದು ಬೆಳಗ್ಗೆ ಸ್ಥಳಕ್ಕೆ ಬಂದು ಸಮಾನಾಂತರ ಹೊಂಡ ತೋಡಲಾಯಿತು. ಬಳಿಕ ಮಗುವನ್ನು ಕಾಪಾಡಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ