Kumbh Mela: 1.6 ಲಕ್ಷ ಟೆಂಟ್, 1.5 ಲಕ್ಷ ಶೌಚಾಲಯ, 67,000 ಎಲ್ಇಡಿ ಲೈಟ್; ಕುಂಭಮೇಳಕ್ಕೆ ಯೋಗಿ ಸರ್ಕಾರದಿಂದ ಭಾರೀ ಸಿದ್ಧತೆ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಜನವರಿ 13ರಂದು ಮಹಾ ಕುಂಭಮೇಳ ಪ್ರಾರಂಭವಾಗಲಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕುಂಭ ಮೇಳಕ್ಕೆ ಭಾರೀ ಸಿದ್ಧತೆ ನಡೆದಿದೆ. ಇದಕ್ಕಾಗಿ 1.6 ಲಕ್ಷ ಟೆಂಟ್‌ಗಳು, 1.5 ಲಕ್ಷ ಟಾಯ್ಲೆಟ್ಗಳು, 15,000 ನೈರ್ಮಲ್ಯ ಕೆಲಸಗಾರರು, 67,000 ಎಲ್ಇಡಿ ಲೈಟ್ಗಳು, 2000 ಸೋಲಾರ್ ಲೈಟ್ಗಳು, 7 ಬಸ್ ಸ್ಟಾಂಡ್ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಕುಂಭ ಮೇಳ ಅತ್ಯಂತ ವಿಶೇಷವಾಗಿರಲಿದೆ.
ಪ್ರಯಾಗ್‌ರಾಜ್: ಉತ್ತರ ಪ್ರದೇಶ ಸರ್ಕಾರವು ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳ 2025ಕ್ಕಾಗಿ ಅದ್ದೂರಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ವರ್ಷ ನಡೆಯುವ ಕುಂಭಮೇಳದಲ್ಲಿ ಜಗತ್ತಿನಾದ್ಯಂತ 40 ಕೋಟಿ ಭಕ್ತರು ಆತಿಥ್ಯ ವಹಿಸುವ ನಿರೀಕ್ಷೆಯಿದೆ. ಈ 45 ದಿನಗಳ ಉತ್ಸವವು ಜನವರಿ 13ರಿಂದ ಫೆಬ್ರವರಿ 26ರವರೆಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಹಲವಾರು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.
IRCTCಯ “ಮಹಕುಂಭ ಗ್ರಾಮ” ಐಷಾರಾಮಿ ಟೆಂಟ್ ಸಿಟಿಯಂತಹ ಸೂಪರ್ ಡೀಲಕ್ಸ್ ವಸತಿಗಳನ್ನು ಒಳಗೊಂಡಂತೆ ಮಹಾಕುಂಭ ನಗರವನ್ನು ಸಾವಿರಾರು ಟೆಂಟ್‌ಗಳು ಮತ್ತು ಆಶ್ರಯಗಳೊಂದಿಗೆ ತಾತ್ಕಾಲಿಕ ನಗರವಾಗಿ ಪರಿವರ್ತಿಸಲಾಗುತ್ತಿದೆ. ಇದು ಆಧುನಿಕ ಸೌಕರ್ಯಗಳೊಂದಿಗೆ ಡೀಲಕ್ಸ್ ಟೆಂಟ್‌ಗಳು ಮತ್ತು ವಿಲ್ಲಾಗಳನ್ನು ನೀಡುತ್ತದೆ. 92 ರಸ್ತೆಗಳ ನವೀಕರಣ ಮತ್ತು 17 ಪ್ರಮುಖ ರಸ್ತೆಗಳ ಅಗಲೀಕರಣ ಮುಕ್ತಾಯದ ಹಂತದಲ್ಲಿದೆ.
ಇದನ್ನೂ ಓದಿ: ಮಹಾಕುಂಭ ಮೇಳ ನಡೆಯುವ ಪ್ರದೇಶವನ್ನು ಹೊಸ ಜಿಲ್ಲೆಯಾಗಿ ಘೋಷಿಸಿದ ಉತ್ತರ ಪ್ರದೇಶ ಸರ್ಕಾರ
3,308 ಪಾಂಟೂನ್‌ಗಳನ್ನು ಬಳಸಿಕೊಂಡು 30 ಪಾಂಟೂನ್ ಸೇತುವೆಗಳ ನಿರ್ಮಾಣ ನಡೆಯುತ್ತಿದೆ. ಅವುಗಳಲ್ಲಿ 28 ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಈ ಸೇತುವೆಗಳು ಕುಂಭ ಮೇಳದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳೀಯ ನಿವಾಸಿಗಳು, ಸಂತರು ಮತ್ತು ಆಡಳಿತಾಧಿಕಾರಿಗಳಿಗೆ ಸಂಚಾರವನ್ನು ಸುಗಮಗೊಳಿಸುತ್ತದೆ. ಪ್ರಯಾಗರಾಜ್‌ನಲ್ಲಿ ಮಹಾಕುಂಭ ಜನವರಿ 13ರಂದು ಪ್ರಾರಂಭವಾಗುತ್ತದೆ. ಭಾರತೀಯ ರೈಲ್ವೆ 3,000 ವಿಶೇಷ ರೈಲುಗಳನ್ನು ನಿರ್ವಹಿಸಲಿದೆ.
Devotees are lucky for 2 reasons. This time MahaKumbh is after 144 yrs & will be host under BJP State Govt in UP.
Amenities at Prayagraj-
1.6 Lakh tents 1.5 Lakh toilets 15000 sanitary workers 67000 LED lights 2000 Solar lights 7 Riverfront roads 7 Bus stands
What more can… pic.twitter.com/sGDF4sh1Rn
— BhikuMhatre (@MumbaichaDon) January 1, 2025
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಜನವರಿ 13ರಂದು ಮಹಾ ಕುಂಭಮೇಳ ಪ್ರಾರಂಭವಾಗಲಿದೆ. 3,000 ವಿಶೇಷ ರೈಲುಗಳ ಕಾರ್ಯಾಚರಣೆ ಸೇರಿದಂತೆ ಭಕ್ತರ ಒಳಹರಿವಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೇ ಸಮಗ್ರ ವ್ಯವಸ್ಥೆಗಳನ್ನು ಪ್ರಕಟಿಸಿದೆ. ಈ ಪೈಕಿ 560 ರೈಲುಗಳು ರಿಂಗ್ ರೈಲು ಮಾರ್ಗಗಳಲ್ಲಿ ಸಂಚರಿಸಲಿವೆ. ಭಾರತೀಯ ರೈಲ್ವೆಯು 15 ದಿನಗಳ ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಲು ಅನುಮತಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: ನನ್ನ ಹೆಂಡತಿ ಗರ್ಭಿಣಿ; ಒಂದೇ ಕಾರಣ ನೀಡಿ ಮಹಾಕುಂಭ ಮೇಳದ ಕರ್ತವ್ಯದಿಂದ ರಜೆ ಕೇಳಿದ 700 ಪೊಲೀಸರು
ಭಾರತೀಯ ರೈಲ್ವೆಯು 10,000 ಸಾಮಾನ್ಯ ಮತ್ತು 3,000 ವಿಶೇಷ ರೈಲುಗಳನ್ನು ನಡೆಸಲು ಯೋಜಿಸಿದೆ. ಪ್ರಯಾಗ್‌ರಾಜ್ ಜಂಕ್ಷನ್‌ನಲ್ಲಿ ಆಮ್ಲಜನಕ ಸಿಲಿಂಡರ್‌ಗಳು, ಕಾನ್ಸೆಂಟ್ರೇಟರ್‌ಗಳು, ಇಸಿಜಿ ಯಂತ್ರಗಳು, ಗ್ಲುಕೋಮೀಟರ್‌ಗಳು, ನೆಬ್ಯುಲೈಜರ್‌ಗಳು ಮತ್ತು ಸ್ಟ್ರೆಚರ್‌ಗಳನ್ನು ಒಳಗೊಂಡ 6 ಹಾಸಿಗೆಗಳ ವೀಕ್ಷಣಾ ಕೊಠಡಿಯನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ, 1,186 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಲ್ಲಿ 116 ಎಐ ತಂತ್ರಜ್ಞಾನದಿಂದ ಚಾಲಿತವಾಗಿದೆ.
ಮಹಾಕುಂಭ ಮೇಳ ಫೆಬ್ರವರಿ 26ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತದೆ. ಈ ಮೇಳ ನಡೆಯುವ ಪ್ರದೇಶವನ್ನು 1.6 ಲಕ್ಷ ಟೆಂಟ್‌ಗಳು, 1.5 ಲಕ್ಷ ಶೌಚಾಲಯಗಳು ಮತ್ತು 15,000 ನೈರ್ಮಲ್ಯ ಕಾರ್ಯಕರ್ತರೊಂದಿಗೆ ಸಿದ್ಧಪಡಿಸಲಾಗಿದೆ. 1,250 ಕಿಮೀ ಉದ್ದದ ಪೈಪ್‌ಲೈನ್ ನೀರಿನ ಪೂರೈಕೆಯನ್ನು ಒದಗಿಸಲಾಗುತ್ತದೆ. 67,000 ಎಲ್ಇಡಿ ದೀಪಗಳು, 2,000 ಸೌರ ದೀಪಗಳ ವ್ಯವಸ್ಥೆ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ