ನೀವು ಒಂದೆರಡು ದಿನಗಳವರೆಗೆ ಮಾಂಸ ತಿನ್ನದೇ ಇರಬಹುದು: ಅರ್ಜಿದಾರರಿಗೆ ಗುಜರಾತ್ ಹೈಕೋರ್ಟ್
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಎಎಂಸಿ, ನಗರದ ಏಕೈಕ ಕಸಾಯಿಖಾನೆಯನ್ನು ಆಗಸ್ಟ್ 24 ಮತ್ತು 31 ರ ನಡುವೆ ಮತ್ತು ಸೆಪ್ಟೆಂಬರ್ 4 ಮತ್ತು 9 ರ ನಡುವೆ ಹಬ್ಬಗಳ ಕಾರಣದಿಂದ ಮುಚ್ಚಲು ಆದೇಶಿಸಿದೆ.

ದೆಹಲಿ: ಜೈನರ ಹಬ್ಬದ ಪ್ರಯುಕ್ತ ಅಹಮದಾಬಾದ್‌ನಲ್ಲಿ (Ahmedabad) ಕಸಾಯಿಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚಿರುವುದನ್ನು ವಿರೋಧಿಸಿ ಗುಜರಾತ್ ಹೈಕೋರ್ಟ್ನಲ್ಲಿ (Gujarat High Court) ಪ್ರಶ್ನಿಸಿದ ಅರ್ಜಿದಾರರಿಗೆ, ನೀವು ಕೆಲವು ದಿನಗಳ ಕಾಲ ಮಾಂಸಾಹಾರ ಸೇವಿಸದೇ ಇರಬಹುದು ಎಂದು ಹೇಳಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಎಎಂಸಿ, ನಗರದ ಏಕೈಕ ಕಸಾಯಿಖಾನೆಯನ್ನು ಆಗಸ್ಟ್ 24 ಮತ್ತು 31 ರ ನಡುವೆ ಮತ್ತು ಸೆಪ್ಟೆಂಬರ್ 4 ಮತ್ತು 9 ರ ನಡುವೆ ಹಬ್ಬಗಳ ಕಾರಣದಿಂದ ಮುಚ್ಚಲು ಆದೇಶಿಸಿದೆ. ಆದಾಗ್ಯೂ, ಅರ್ಜಿದಾರರಾದ ಕುಲ್ ಹಿಂದ್ ಜಮಿಯತ್-ಅಲ್ ಖುರೆಶ್ ಆಕ್ಷನ್ ಕಮಿಟಿ ಗುಜರಾತ್, ಎಎಂಸಿ ಆದೇಶವು ಜನರ ಆಹಾರದ ಹಕ್ಕನ್ನು “ನಿರ್ಬಂಧಿಸುತ್ತದೆ” ಎಂದು ಹೈಕೋರ್ಟ್‌ಗೆ ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಸಂದೀಪ್ ಭಟ್, ‘ಒಂದು ಅಥವಾ ಎರಡು ದಿನ ಮಾಂಸಾಹಾರ ಸೇವನೆ ಮಾಡದೇ ಇರಬಹುದು ಎಂದಿದ್ದಾರೆ. ಸಮಿತಿಯನ್ನು ಪ್ರತಿನಿಧಿಸಿದ ಡ್ಯಾನಿಶ್ ಖುರೇಷಿ ರಜಾವಾಲಾ, ವಿಷಯವು ತನ್ನನ್ನು ತಾನು ನಿರ್ಬಂಧಿಸಿಕೊಳ್ಳುವುದರ ಬಗ್ಗೆ ಅಲ್ಲ, ಆದರೆ ಮೂಲಭೂತ ಹಕ್ಕುಗಳ ಬಗ್ಗೆ ಹೇಳಿದರು.
ಈಗ ಅಹಮದಾಬಾದ್ ನಗರದಲ್ಲಿ ಒಂದೇ ಒಂದು ಕಸಾಯಿಖಾನೆ ಇದೆ ಮತ್ತು ಅದನ್ನು ಜೈನರ ಹಬ್ಬ ಪರ್ಯುಶನ್ ಸಂದರ್ಭದಲ್ಲಿ ಮುಚ್ಚಲಾಗಿದೆ. ಆಗಸ್ಟ್ 23 ರಂದು ಎಎಂಸಿ ಕಮಿಷನರ್ ಮುಂದೆ ಸೂಕ್ತ ಪ್ರಾತಿನಿಧ್ಯವನ್ನು ನೀಡಲಾಯಿತು ಎಂದು ಅರ್ಜಿದಾರರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ವಿಚಾರಣೆಯ ನಂತರ ನ್ಯಾಯಮೂರ್ತಿ ಭಟ್ ಅವರು ಪ್ರಕರಣವನ್ನು ಸೆಪ್ಟೆಂಬರ್ 2 ಕ್ಕೆ ಮುಂದೂಡಿದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಮಾಂಸಾಹಾರಿ ಆಹಾರದ ಕೈಗಾಡಿಗಳನ್ನು ಬೀದಿಗಳಿಂದ ತೆಗೆದುಹಾಕಲು ಗುಜರಾತ್ ಪ್ರಯತ್ನಿಸುತ್ತಿದೆ ಎಂದು ಅರ್ಜಿದಾರರೊಬ್ಬರು ದೂರಿದ್ದು, ಇದು ನಿಜವೇ ಎಂದು ನ್ಯಾಯಾಲಯ ಎಂದು ರಾಜ್ಯ ಸರ್ಕಾರವನ್ನು ಕೇಳಿತ್ತು. ಆದಾಗ್ಯೂ ಈ ಆರೋಪವನ್ನು ರಾಜ್ಯ ಸರ್ಕಾರ ನಿರಾಕರಿಸಿತ್ತು.




