ಲಿವ್-ಇನ್ ಸಂಗಾತಿಯ ಕೊಂದು ಜೈಲು ಸೇರಿದ್ದ ವ್ಯಕ್ತಿ ಅಲ್ಲೇ ಹೃದಯಾಘಾತದಿಂದ ಸಾವು
ಲಿವ್-ಇನ್ ಸಂಗಾತಿಯ ಕೊಂದು ಜೈಲು ಸೇರಿದ್ದ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುಜರಾತ್ನ ಸೌರಾಷ್ಟ್ರದಲ್ಲಿ ನಡೆದಿದೆ. ನರೇಂದ್ರ ಸಿಂಗ್ ಧ್ರುವೇಲ್ ಮಧ್ಯಪ್ರದೇಶ ಮೂಲದವನಾಗಿದ್ದು, ಪ್ರೇಯಸಿಯನ್ನು ಕೊಂದು ಜೈಲುಪಾಲಾಗಿದ್ದ, ಜೈಲಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.ಸೌರಾಷ್ಟ್ರದ ಸೆರಾಮಿಕ್ ಕಾರ್ಖಾನೆಯ ಕಾರ್ಮಿಕ ವಸತಿಗೃಹದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಇಬ್ಬರು ಮೂರು ತಿಂಗಳಿನಿಂದ ವಾಸವಾಗಿದ್ದರು.

ಸೌರಾಷ್ಟ್ರ, ಡಿಸೆಂಬರ್ 01: ಲಿವ್-ಇನ್ ಸಂಗಾತಿ(Live-in Partner)ಯ ಕೊಂದು ಜೈಲು ಸೇರಿದ್ದ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುಜರಾತ್ನ ಸೌರಾಷ್ಟ್ರದಲ್ಲಿ ನಡೆದಿದೆ. ನರೇಂದ್ರ ಸಿಂಗ್ ಧ್ರುವೇಲ್ ಮಧ್ಯಪ್ರದೇಶ ಮೂಲದವನಾಗಿದ್ದು, ಪ್ರೇಯಸಿಯನ್ನು ಕೊಂದು ಜೈಲುಪಾಲಾಗಿದ್ದ, ಜೈಲಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಸೌರಾಷ್ಟ್ರದ ಸೆರಾಮಿಕ್ ಕಾರ್ಖಾನೆಯ ಕಾರ್ಮಿಕ ವಸತಿಗೃಹದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಇಬ್ಬರು ಮೂರು ತಿಂಗಳಿನಿಂದ ವಾಸವಾಗಿದ್ದರು. ಒಂದು ದಿನ, ಇಬ್ಬರ ನಡುವೆ ಜಗಳವಾಗಿತ್ತು. ಆ ವ್ಯಕ್ತಿ ತನ್ನ ಗೆಳತಿ ಪುಷ್ಪಾದೇವಿ ಮರಾವಿಯನ್ನು ಮರದ ಕೋಲು ಮತ್ತು ಬೆಲ್ಟ್‌ನಿಂದ ಹೊಡೆಯಲು ಪ್ರಾರಂಭಿಸಿದ್ದ. ಮರಾವಿಯ ದೇಹದ ಮೇಲೆ ಗಂಭೀರ ಗಾಯಗಳಾಗಿದ್ದವು. ಇದಲ್ಲದೆ, ಆ ವ್ಯಕ್ತಿ ಮಹಿಳೆಯ ಮುಖವನ್ನು ಕಚ್ಚಿದ್ದ ಎಂದು ಆರೋಪಿಸಲಾಗಿದೆ. ಸ್ವಲ್ಪ ಸಮಯದಲ್ಲೇ ಮಹಿಳೆ ಸಾವನ್ನಪ್ಪಿದ್ದಳು.
ಘಟನೆಯ ಬಗ್ಗೆ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮರಣೋತ್ತರ ಪರೀಕ್ಷೆಯ ವರದಿಯು ಮಹಿಳೆ ತೀವ್ರ ಗಾಯಗಳು ಮತ್ತು ದೈಹಿಕ ನೋವಿನಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ಪೊಲೀಸರು ಧ್ರುವೇಲ್‌ನನ್ನು ಬಂಧಿಸಿದಾಗ, ಅವನು ತಾನು ಮಾಡಿದ ಅಪರಾಧವನ್ನು ಆತ ಒಪ್ಪಿಕೊಂಡಿದ್ದ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆಯಲಾಯಿತು.
ಮತ್ತಷ್ಟು ಓದಿ: ಏನೋ ಕಚ್ಚಿದೆ ಎಂದು ಲಿವ್ ಇನ್ ಸಂಗಾತಿಯನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾದ ಗೆಳೆಯ, ಆಕೆ ಸಾವು
ಆದರೆ, ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆತನಿಗೆ ಎದೆನೋವು ತೀವ್ರವಾಗಿತ್ತು. ಪೊಲೀಸ್ ಸಿಬ್ಬಂದಿ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆರಂಭಿಕ ತಪಾಸಣೆಯ ನಂತರ ವೈದ್ಯರು ಆತ ಮೃತಪಟ್ಟಿದ್ದಾನೆಂದು ಘೋಷಿಸಿದರು.
ಮತ್ತೊಂದು ಘಟನೆ ಪತ್ನಿಯ ಕೊಂದು ಶವದ ಜತೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಪತಿ ವ್ಯಕ್ತಿಯೊಬ್ಬ ಪತ್ನಿಯ ಕೊಲೆ(Murder) ಮಾಡಿ ಶವದ ಜತೆ ಸೆಲ್ಫಿ ತೆಗೆದು ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ತೀವ್ರ ಕಳವಳ ಹುಟ್ಟುಹಾಕಿದೆ. ಕೊಯಮತ್ತೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಪ್ರಿಯಾ, ತನ್ನ ಪತಿ ಬಾಲಮುರುಗನ್ ಅವರಿಂದ ಬೇರ್ಪಟ್ಟಿದ್ದರು. ಅವರು ಭಾನುವಾರ ಮಧ್ಯಾಹ್ನ ಆಕೆಯ ಪತಿ ಬಟ್ಟೆಯಲ್ಲಿ ಅಡಗಿಸಿಕೊಂಡು ಹಾಸ್ಟೆಲ್‌ಗೆ ಬಂದಿದ್ದ.
ಭೇಟಿಯಾದ ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ವಾಗ್ವಾದ ನಡೆಯಿತು. ಹಠಾತ್ ದಾಳಿಯಲ್ಲಿ, ಬಾಲಮುರುಗನ್ ಕತ್ತಿ ಹೊರತೆಗೆದು ಹಾಸ್ಟೆಲ್‌ನಲ್ಲಿ ಆಕೆಯನ್ನು ಕಡಿದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಆಘಾತಕಾರಿ ಸಂಗತಿಯೆಂದರೆ, ನಂತರ ಅವನು ಆಕೆಯ ದೇಹದೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು ತನ್ನ ವಾಟ್ಸಾಪ್ ಸ್ಟೇಟಸ್ ಆಗಿ ಅಪ್‌ಲೋಡ್ ಮಾಡಿ, ಆಕೆ ತನಗೆ ದ್ರೋಹ ಮಾಡಿದ್ದಾಳೆಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Mon, 1 December 25




