Morbi bridge collapse: ಕೇಬಲ್ ಸೇತುವೆ ಕುಸಿದು ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕೆ

ಗುಜರಾತ್​ನಲ್ಲಿ ಸಂಭವಿಸಿದ ಕೇಬಲ್ ಸೇತುವೆ ಕುಸಿತ ದುರಂತದಲ್ಲಿ ಸಾವುನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಮೃತರ ಸಂಖ್ಯೆ 90ರಿಂದ 141ಕ್ಕೆ ಏರಿಕೆಯಾಗಿದೆ.

Morbi bridge collapse: ಕೇಬಲ್ ಸೇತುವೆ ಕುಸಿದು ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕೆ
ಗಜರಾತ್​ನಲ್ಲಿ ಕೇಬಲ್ ಸೇತುವೆ ಕುಸಿತದು ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕೆImage Credit source: Twitter @HasanSafin
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 31, 2022 | 11:59 AM

ಗಾಂಧಿನಗರ: ಗುಜರಾತ್‌ನ ಮೊರ್ಬಿ (Morbi) ಯದಲ್ಲಿ ಸಂಭವಿಸಿದ ಕೇಬಲ್ ಸೇತುವೆ ಕುಸಿತ (Cable bridge collapse) ದುರಂತದಲ್ಲಿ ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಸದ್ಯ ಮೃತರ ಸಂಖ್ಯೆ 90ರಿಂದ 141ಕ್ಕೆ ಏರಿಕೆಯಾಗಿದೆ. ಇನ್ನೂ ಹಲವರು ನದಿಯಲ್ಲಿ ಸಿಲುಕಿರುವ ಅನುಮಾನ ವ್ಯಕ್ತವಾಗಿದ್ದು, ಇವರ ಶೋಧಕಾರ್ಯ ಹಾಗೂ ರಕ್ಷಣಾ ಕಾರ್ಯ ಮುಂದುವರಿದೆ. ಸ್ಥಳದಲ್ಲಿ ಸೇನೆ, ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್​ ಬೀಡುಬಿಟ್ಟಿದೆ.

ಏನಿದು ದುರಂತ?

ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಭಾನುವಾರ ಕುಸಿದು ಬಿದ್ದು ದೊಡ್ಡ ದುರಂತ ಸಂಭವಿಸಿದೆ. ಸೇತುವೆ ಮೇಲಿದ್ದ ಹಲವರು ನದಿಗೆ ಬಿದ್ದಿದ್ದಾರೆ. ವರದಿಗಳ ಪ್ರಕಾರ ಗುಜರಾತ್ ಸೇತುವೆ ದುರಂತದಲ್ಲಿ ಈವರೆಗೆ ಬಂದ ಮಾಹಿತಿ ಪ್ರಕಾರ 30 ಮಕ್ಕಳು ಸೇರಿದಂತೆ 90 ಜನರು ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ 150ರ ಸಮೀಪ ತಲುಪಿದೆ.

ಮೋರ್ಬಿಯಲ್ಲಿರುವ ಕೇಬಲ್ ಸೇತುವೆಯು ಐತಿಹಾಸಿಕವಾದದ್ದು. ಕಳೆದ ವಾರ ಅದನ್ನು ನವೀಕರಿಸಲಾಗಿತ್ತು. ನವೀಕರಣದ ನಂತರ, ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ದಿನದಂದು ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಕ್ಟೋಬರ್ 30ರಂದು ಸಂಜೆ ಛಾತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸೇತುವೆ ಮೇಲೆ ಬಹಳಷ್ಟು ಜನರು ಜಮಾಯಿಸಿದ್ದರು. ಕುಸಿದಾಗ ಸೇತುವೆ ಮೇಲೆ ಸುಮಾರು 500 ಜನರು ಇದ್ದರು ಎನ್ನಲಾಗಿದ್ದು, ಭಾರ ಹೆಚ್ಚಾಗಿದ್ದಕ್ಕೆ ಸೇತುವೆ ಕುಸಿದಿದೆ ಎಂದು ತಿಳಿದುಬಂದಿದೆ. ಅದಾಗ್ಯೂ ಘಟನೆಗೆ ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 am, Mon, 31 October 22

ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ