AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರು ಪ್ರತಿಷ್ಠಾಪನೆಯಾಗುತ್ತಾ ಘಜ್ನಿ ಕೈಗೆ ಸಿಕ್ಕಿ ತುಂಡಾಗಿದ್ದ ಸೋಮನಾಥ ದೇವಾಲಯದ ಪ್ರಾಚೀನ ಶಿವಲಿಂಗ?

ಮೊಹಮ್ಮದ್ ಘಜ್ನಿ ಕೆಡವಿದ್ದ ಗುಜರಾತ್​ನ ಸೋಮನಾಥ ದೇವಾಲಯದ ಪ್ರಾಚೀನ ಶಿವಲಿಂಗದ ಅವಶೇಷಗಳು ತನ್ನ ಬಳಿ ಇದೆ ಎಂದು ಅರ್ಚಕರಾದ ಸೀತಾರಾಮ ಶಾಸ್ತ್ರಿ ಹೇಳಿದ್ದಾರೆ. ಹೀಗಾಗಿ ಈ ಶಿವಲಿಂಗ ದೇವಾಲಯದಲ್ಲಿ ಮರು ಪ್ರತಿಷ್ಠಾಪನೆಯಾಗುತ್ತಾ ಎನ್ನುವ ಕುತೂಹಲ ಮೂಡಿದೆ. ಶಾಸ್ತ್ರಿ ತಾವು ವಿಡಿಯೋವೊಂದನ್ನು ಮಾಡಿದ್ದಾರೆ, ಅದಲ್ಲಿ ಕಳೆದ 21 ವರ್ಷಗಳಿಂದ ಪವಿತ್ರ ಲಿಂಗದ ತುಣುಕುಗಳನ್ನು ಸಂರಕ್ಷಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಮರು ಪ್ರತಿಷ್ಠಾಪನೆಯಾಗುತ್ತಾ ಘಜ್ನಿ ಕೈಗೆ ಸಿಕ್ಕಿ ತುಂಡಾಗಿದ್ದ ಸೋಮನಾಥ ದೇವಾಲಯದ ಪ್ರಾಚೀನ ಶಿವಲಿಂಗ?
ಸೀತಾರಾಮ್ ಶಾಸ್ತ್ರಿImage Credit source: Asianet news
ನಯನಾ ರಾಜೀವ್
|

Updated on: Feb 13, 2025 | 10:25 AM

Share

11ನೇ ಶತಮಾನದಲ್ಲಿ ಮೊಹಮ್ಮದ್ ಘಜ್ನಿ ಕೆಡವಿದ್ದ ಗುಜರಾತ್​ನ ಸೋಮನಾಥ ದೇವಾಲಯದ ಪ್ರಾಚೀನ ಶಿವಲಿಂಗದ ಅವಶೇಷಗಳು ತನ್ನ ಬಳಿ ಇದೆ ಎಂದು ಅರ್ಚಕರಾದ ಸೀತಾರಾಮ ಶಾಸ್ತ್ರಿ ಹೇಳಿದ್ದಾರೆ. ಹೀಗಾಗಿ ಈ ಶಿವಲಿಂಗ ದೇವಾಲಯದಲ್ಲಿ ಮರು ಪ್ರತಿಷ್ಠಾಪನೆಯಾಗುತ್ತಾ ಎನ್ನುವ ಕುತೂಹಲ ಮೂಡಿದೆ.

ಶಾಸ್ತ್ರಿ ತಾವು ವಿಡಿಯೋವೊಂದನ್ನು ಮಾಡಿದ್ದಾರೆ, ಅದಲ್ಲಿ ಕಳೆದ 21 ವರ್ಷಗಳಿಂದ ಪವಿತ್ರ ಲಿಂಗದ ತುಣುಕುಗಳನ್ನು ಸಂರಕ್ಷಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈಗ ಅವುಗಳನ್ನು ಸೋಮನಾಥ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಬಯಸುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಅವರು ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಅವರನ್ನು ಭೇಟಿಯಾಗಿದ್ದಾರೆ. ಅವರು ಈ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಶಿವಲಿಂಗವನ್ನು ನಾನು 21 ವರ್ಷಗಳ ಹಿಂದೆ ಪಡೆದುಕೊಂಡಿದ್ದೆ, ಇದಕ್ಕೂ ಮೊದಲು, ನನ್ನ ಚಿಕ್ಕಪ್ಪ ಅವುಗಳನ್ನು ಇಟ್ಟುಕೊಂಡಿದ್ದರು. ಅವರು ಅವುಗಳನ್ನು ನನಗೆ ಕೊಟ್ಟು ಗುಜರಾತ್‌ನ ಸೋಮನಾಥ ದೇವಾಲಯದಲ್ಲಿ ಕನಿಷ್ಠ ಎರಡನ್ನಾದರೂ ಸ್ಥಾಪಿಸಲು ಆದೇಶಿಸಿದರು. ಇದು ಸೋಮನಾಥನ ನಿಜವಾದ ಪ್ರತಿಮೆ. ಇದು 1,000 ವರ್ಷಗಳನ್ನು ಕಳೆದಿದೆ. ಇದನ್ನು ನನ್ನ ಚಿಕ್ಕಪ್ಪನಿಗೆ ಅವರ ಗುರು ಪ್ರಣವೇಂದ್ರ ಸರಸ್ವತಿ ಜಿ ನೀಡಿದರು. ಅದರ ನಂತರ, ನನ್ನ ಚಿಕ್ಕಪ್ಪ ಇದನ್ನು 60 ವರ್ಷಗಳ ಕಾಲ ಪೂಜಿಸಿದರು.

ಮತ್ತಷ್ಟು ಓದಿ: ಶಿವಲಿಂಗದಲ್ಲಿ ಕೆತ್ತನೆ ಮಾಡಿರುವ ಕಲ್ಲು ನಾಗರದ ತಲೆ ಮೇಲೆ ಬೆಳೆದ ಕೂದಲು; ಪವಾಡ ಕಣ್ತುಂಬಿಕೊಳ್ಳಲು ಬಂದ ಜನ

ಈ ಶಿವಲಿಂಗವನ್ನು ನಾಶಮಾಡಲು ಆಕ್ರಮಣಕಾರರು ಹಲವಾರು ದಾಳಿಗಳನ್ನು ನಡೆಸಿದರು. ದೇವಾಲಯವನ್ನು ಸಹ ಲೂಟಿ ಮಾಡಲಾಯಿತು. ಸೋಮನಾಥ ದೇವಾಲಯವನ್ನು ಪ್ರವೇಶಿಸಲು ಸುಮಾರು 50,000 ಜನರನ್ನು ಕೊಂದನು. ಅವನು ದೇವಾಲಯವನ್ನು ಅಲಂಕರಿಸಿದ ಎಲ್ಲಾ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿದನು ಮತ್ತು ಶಿವಲಿಂಗವನ್ನು ನಾಶಪಡಿಸಿದನು.

ಶಿವಲಿಂಗವನ್ನು ನಾಶಪಡಿಸಿದ ಕೂಡಲೇ ಅವುಗಳ ಅವಶೇಷಗಳನ್ನು ತೆಗೆದುಕೊಂಡ ಸಂತರು ಮತ್ತೆ ಪೂಜಿಸಲು ಆರಂಭಿಸಿದ್ದರು. ನಿಜವಾದ ಸೋಮನಾಥ ಶಿವಲಿಂಗವನ್ನು ಸೋಮನಾಥ ದೇವಾಲಯದಲ್ಲಿ ಸ್ಥಾಪಿಸಲಾಗುವುದು; ಇದು ನಮ್ಮ ಸಂಕಲ್ಪ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ