Gujarat Rains: ಅಂಡರ್ಪಾಸ್ನಲ್ಲಿ ಮಳೆ ನೀರು ತುಂಬಿ ಬಸ್ ಮೇಲೆ ನಿಂತ ದಂಪತಿ; ಹಗ್ಗ ಹಾಕಿ ರಕ್ಷಿಸಿದ ಜನರು
ಗುಜರಾತ್ ಜೊತೆಗೆ ರಾಜಸ್ಥಾನದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ನದಿಗಳು, ಚರಂಡಿಗಳು ಉಕ್ಕಿ ಹರಿಯುತ್ತಿದ್ದು, ಅನೇಕ ನಗರಗಳು ಮತ್ತು ಹಳ್ಳಿಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉದ್ಭವಿಸಿದೆ. ಗುಜರಾತ್‌ನ ಪ್ರವಾಹದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಬರ್ಕಾಂತ: ದೇಶದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಅನೇಕ ಜನರು ನೀರಿನಲ್ಲಿ ಮುಳುಗಿದ್ದಾರೆ, ಅನೇಕ ಜನರನ್ನು ರಕ್ಷಿಸಲಾಗಿದೆ ಮತ್ತು ಅವರ ಜೀವಗಳನ್ನು ಉಳಿಸಲಾಗಿದೆ. ಗುಜರಾತ್‌ನ ಸಬರ್‌ಕಾಂತದಲ್ಲಿರುವ ಹಮೀರ್‌ಗಢ್ ಅಂಡರ್‌ಪಾಸ್‌ನ ವಿಡಿಯೋವೊಂದು ಈಗ ವೈರಲ್ ಆಗಿದ್ದು, ಬಸ್ ಮೇಲೆ ನಿಂತು ಸಹಾಯಕ್ಕಾಗಿ ಕಿರುಚುತ್ತಿದ್ದ ಮಹಿಳೆ ಮತ್ತು ಪುರುಷನನ್ನು ರಕ್ಷಣೆ ಮಾಡಲಾಗಿದೆ.
ಭಾರೀ ಮಳೆಯಿಂದಾಗಿ ಗುಜರಾತ್‌ನ ಸಬರ್‌ಕಾಂತದಲ್ಲಿರುವ ಅಂಡರ್ಪಾಸ್ನಲ್ಲಿ ಬಸ್ ಸಿಲುಕಿಕೊಂಡಿದ್ದು, ಬಸ್ನೊಳಗಿದ್ದ ಜನರು ಬಸ್ಸಿನ ಮೇಲೆ ಹತ್ತಿ ನಿಂತು ಸಹಾಯಕ್ಕಾಗಿ ಮೊರೆಯಿಡುವುದನ್ನು ವಿಡಿಯೋ ಮಾಡಲಾಗಿದೆ. ಬಸ್ ಮೇಲೆ ನಿಂತಿದ್ದ ಪುರುಷ ಮತ್ತು ಮಹಿಳೆಯನ್ನು ಸ್ಥಳೀಯರು ಹಗ್ಗದ ಸಹಾಯದಿಂದ ಮೇಲೆಕ್ಕೆ ಎತ್ತಿ ರಕ್ಷಿಸಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋವನ್ನು ಪಿಟಿಐ ಶೇರ್ ಮಾಡಿಕೊಂಡಿದೆ.
VIDEO | Locals help a couple stranded on the roof of a bus after it submerged under water near Hamirgarh underpass after heavy rainfall in Gujarat’s Sabarkantha.
(Full video available on PTI Videos – https://t.co/dv5TRARJn4) pic.twitter.com/IHAwTxeyUf
— Press Trust of India (@PTI_News) July 29, 2024
ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಇಂದಿನಿಂದ ಕಡಿಮೆಯಾಗಲಿದೆ ಮಳೆಯ ಪ್ರಮಾಣ
ಇಂದು ಗುಜರಾತಿನ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದ್ದು, ಸಬರ್ಕಾಂತ, ನಾಡಿಯಾಡ್, ಮೊಡಸಾ ಮತ್ತು ಮಹಿಸಾಗರದಲ್ಲಿ ಬಹುತೇಕ ಪ್ರದೇಶಗಳು ಜಲಾವೃತವಾಗಿದೆ. ಮೊಡಸಾದಲ್ಲಿ ಎರಡು ಹೌಸಿಂಗ್ ಸೊಸೈಟಿಗಳು ಜಲಾವೃತಗೊಂಡಿದ್ದು, ಪ್ರಯಾಣಿಕರು ಸಂಚಾರ ಅಸ್ತವ್ಯಸ್ತಗೊಂಡಿದ್ದಾರೆ. ದಕ್ಷಿಣ ಗುಜರಾತ್‌ನಲ್ಲಿ ಗ್ರಾಮಗಳು ಮುಳುಗಡೆಯಾಗಿದ್ದರಿಂದ 2,500ಕ್ಕೂ ಹೆಚ್ಚು ಜನರನ್ನು ಅವರ ಮನೆಗಳಿಂದ ಸ್ಥಳಾಂತರಿಸಲಾಗಿದೆ. ನವಸಾರಿಯಲ್ಲಿ, 2,200 ಜನರನ್ನು ಸ್ಥಳಾಂತರಿಸಲಾಯಿತು ಮತ್ತು ತಾಪಿ ಜಿಲ್ಲೆಯಲ್ಲಿ 500 ಜನರನ್ನು ಸ್ಥಳಾಂತರಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ