ಗುರುಗ್ರಾಮ: ಮೊಬೈಲ್ ಕದ್ದಿದ್ದು ಇವನೇ ಎಂದು ಹಿಡಿದುಕೊಟ್ಟಿದ್ದಕ್ಕೆ 7 ವರ್ಷದ ಬಾಲಕನ ಕೊಲೆ
ಏಳು ವರ್ಷದ ಬಾಲಕನನ್ನು ಅಪ್ರಾಪ್ತ ಬಾಲಕನೊಬ್ಬ ಕೊಲೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಮೊಬೈಲ್(Mobile) ಕದ್ದಿದ್ದು ಇವನೇ ಎಂದು ಕದ್ದವನನ್ನು ಹಿಡಿದುಕೊಟ್ಟಿದ್ದಕ್ಕೆ ಕೋಪಗೊಂಡ ಅಪ್ರಾಪ್ತ ಬಾಲಕ 7 ವರ್ಷದ ಬಾಲಕನನ್ನು ಕೊಲೆ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದಾನೆ. ವರದಿಗಳ ಪ್ರಕಾರ, ಆರೋಪಿಯು ಮೊಬೈಲ್ ಕದ್ದಿದ್ದ ಅದನ್ನು ಈ ಬಾಲಕ ನೋಡಿದ್ದಷ್ಟೇ ಅಲ್ಲದೆ, ಆತನೇ ಕದ್ದಿದ್ದಾನೆಂದು ಹಿಡಿದುಕೊಟ್ಟಿದ್ದ, ಆ ಅಪ್ರಾಪ್ತ ಬಾಲಕ ತನಗೆ ಅವಮಾನ ಮಾಡಿದವನ ಮೇಲೆ ಸೇಡು ತೋರಿಸಿಕೊಳ್ಳಲು ಎರಡು ತಿಂಗಳಿನಿಂದ ಹೊಂಚು ಹಾಕಿದ್ದ.

ಗುರುಗ್ರಾಮ, ಜುಲೈ 23: ಏಳು ವರ್ಷದ ಬಾಲಕನನ್ನು ಅಪ್ರಾಪ್ತ ಬಾಲಕನೊಬ್ಬ ಕೊಲೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಮೊಬೈಲ್(Mobile) ಕದ್ದಿದ್ದು ಇವನೇ ಎಂದು ಕದ್ದವನನ್ನು ಹಿಡಿದುಕೊಟ್ಟಿದ್ದಕ್ಕೆ ಕೋಪಗೊಂಡ ಅಪ್ರಾಪ್ತ ಬಾಲಕ 7 ವರ್ಷದ ಬಾಲಕನನ್ನು ಕೊಲೆ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದಾನೆ. ವರದಿಗಳ ಪ್ರಕಾರ, ಆರೋಪಿಯು ಮೊಬೈಲ್ ಕದ್ದಿದ್ದ ಅದನ್ನು ಈ ಬಾಲಕ ನೋಡಿದ್ದಷ್ಟೇ ಅಲ್ಲದೆ, ಆತನೇ ಕದ್ದಿದ್ದಾನೆಂದು ಹಿಡಿದುಕೊಟ್ಟಿದ್ದ, ಆ ಅಪ್ರಾಪ್ತ ಬಾಲಕ ತನಗೆ ಅವಮಾನ ಮಾಡಿದವನ ಮೇಲೆ ಸೇಡು ತೋರಿಸಿಕೊಳ್ಳಲು ಎರಡು ತಿಂಗಳಿನಿಂದ ಹೊಂಚು ಹಾಕಿದ್ದ.
ಕಳ್ಳತನದ ಬಗ್ಗೆ ಆ ಬಾಲಕ ತನ್ನ ತಂದೆ ಬಳಿ ಹೇಳಿದ್ದ, ಕೂಡಲೇ ಮೊಬೈಲ್ ವಶಪಡಿಸಿಕೊಂಡು ಕ್ಷಮೆಯಾಚಿಸುಂತೆ ಮಾಡಲಾಗಿತ್ತು. ಅಂದಿನಿಂದ ಆ ಬಾಲಕನ ಮೇಲೆ ಆರೋಪಿಗೆ ದ್ವೇಷವಿತ್ತು. ಜುಲೈ 19ರಂದು ಬಾಲಕನ ತಾಯಿ ಸಂಜೆ 7 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಮಗ ಕಾಣಿಸದಿದ್ದಾಗ ಮಕ್ಕಳೊಂದಿಗೆ ಆಟವಾಡುತ್ತಿರಬಹುದು ಎಂದುಕೊಂಡಿದ್ದರು.
ಬಾಲಕನ ತಂದೆ ರಾತ್ರಿ 8 ಗಂಟೆಗೆ ಕೆಲಸಕ್ಕೆ ಹೋದರು.ಮರುದಿನ ಬೆಳಗ್ಗೆ ಜುಲೈ 20ರಂದು ಬಸ್ ನಿಲ್ದಾಣದ ಬಳಿ ಬಾಲಕನ ಶವ ಪತ್ತೆಯಾಗಿದೆ. ಎದೆ ಮತ್ತು ಹಣೆಯ ಮೇಲೆ ಗಾಯದ ಗುರುತುಗಳಿದ್ದವು. ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಮತ್ತಷ್ಟು ಓದಿ: ಕೈತಪ್ಪಿ ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಪೊಲೀಸರ ಪ್ರಕಾರ ಆರಂಭಿಕ ತನಿಖೆಯಲ್ಲಿ ಆರೋಪಿ ಕೊಲೆಯನ್ನು ಒಪ್ಪಿಕೊಂಡಿದ್ದಾನೆ, ಫೋನ್ ಕದ್ದಿದ್ದು ನಾನೇ ಎಂದು ಬಾಲಕ ಎಲ್ಲರ ಮುಂದೆ ಹೇಳಿದ್ದಕ್ಕೆ ಕೋಪಗೊಂಡಿದ್ದಾಗಿ ಹೇಳಿದ್ದಾನೆ. ಬಾಲಕನನ್ನು ಮನೆಗೆ ಕರೆದು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಬಾಲಕನಿಗೆ 18,20 ಬಾರಿ ಇರಿದಿದ್ದಾರೆ. ದಾಳಿಯ ನಂತರ ಆರೋಪಿ ಪರಾರಿಯಾಗಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




