ಗುರುಗ್ರಾಮ: ರಸ್ತೆಯ ಬದಿಯಲ್ಲಿ ಬಿದ್ದಿದ್ದ ಟ್ರಾಲಿ ಬ್ಯಾಗ್​ನಲ್ಲಿತ್ತು ಮಹಿಳೆ ಶವ

ರಸ್ತೆ ಬದಿಯಲ್ಲಿ ಬಿದ್ದಿದ್ದ ಟ್ರಾಲಿ ಬ್ಯಾಗ್​ನಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಫರಿದಾಬಾದ್ ರಸ್ತೆಯಲ್ಲಿರುವ ಘಟನಾ ಸ್ಥಳವನ್ನು ಪೊಲೀಸರ ಅಪರಾಧ ಸ್ಥಳ, ಬೆರಳಚ್ಚು ಮತ್ತು ಶ್ವಾನ ದಳ ತಂಡಗಳು ಪರಿಶೀಲಿಸಿದವು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶವವನ್ನು ಬೇರೆ ಸ್ಥಳದಿಂದ ತಂದು ಇಲ್ಲಿ ಎಸೆದಿರುವುದು ತಿಳಿದುಬಂದಿದೆ.ಅಶೋಕ್ ರಸ್ತೆಯ ಮೂಲಕ ಹಾದುಹೋಗುವಾಗ, ರಸ್ತೆಯ ಬದಿಯಲ್ಲಿ ಬಿದ್ದಿದ್ದ ಟ್ರಾಲಿ ಬ್ಯಾಗ್‌ನಿಂದ ಕೆಟ್ಟ ವಾಸನೆ ಬರುತ್ತಿತ್ತು ಎಂದು ಹೇಳಿದರು.

ಗುರುಗ್ರಾಮ: ರಸ್ತೆಯ ಬದಿಯಲ್ಲಿ ಬಿದ್ದಿದ್ದ ಟ್ರಾಲಿ ಬ್ಯಾಗ್​ನಲ್ಲಿತ್ತು ಮಹಿಳೆ ಶವ
ಸಾಂದರ್ಭಿಕ ಚಿತ್ರ
Image Credit source: People matters

Updated on: May 05, 2025 | 7:38 AM

ಗುರುಗ್ರಾಮ, ಮೇ 05: ಗುರುಗ್ರಾಮ-ಫರೀದಾಬಾದ್ ರಸ್ತೆಯ ಶಿವ ನಾಡರ್ ಶಾಲೆ(School)ಯ ಬಳಿಯ ರಸ್ತೆಯಲ್ಲಿ ಟ್ರಾಲಿ ಬ್ಯಾಗ್​ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಹಿಳೆಯ ತಲೆಯ ಮೇಲೆ ಆಳವಾದ ಗಾಯಗಳಿದ್ದವು. ಮುಖದಲ್ಲಿ ರಕ್ತದ ಕಲೆಗಳಿವೆ. ಆಕೆ ಕಪ್ಪು ಜೀನ್ಸ್​ ಮತ್ತು ಹಸಿರು ಟಾಪ್ ಧರಿಸಿದ್ದಳು. ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮಹಿಳೆ ಯಾರೆಂದು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಹತ್ತಿರದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮಹಿಳೆಯ ವಯಸ್ಸು 30-35 ವರ್ಷಗಳು. ಅವಳ ಬಟ್ಟೆಗಳಿಂದ ಅವಳು ಒಳ್ಳೆಯ ಕುಟುಂಬದವಳು ಎಂದು ತೋರುತ್ತದೆ.

ಸುಶಾಂತ್ ಲೋಕ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಕರಂಬೀರ್ ಮಾತನಾಡಿ, ರಸ್ತೆ ಬದಿಯಲ್ಲಿ ಟ್ರಾಲಿ ಬ್ಯಾಗ್​ ಬಿದ್ದಿತ್ತು, ಅದರಿಂದ ಕೆಟ್ಟ ವಾಸನೆ ಬರುತ್ತಿತ್ತು. ಅಶೋಕ್​ ಕುಮಾರ್ ಎಂಬುವವರು ಕೂಡಲೇ ನಮಗೆ ಮಾಹಿತಿ ನೀಡಿದ್ದರು. ಅಶೋಕ್ ರಸ್ತೆಯ ಮೂಲಕ ಹಾದುಹೋಗುವಾಗ, ರಸ್ತೆಯ ಬದಿಯಲ್ಲಿ ಬಿದ್ದಿದ್ದ ಟ್ರಾಲಿ ಬ್ಯಾಗ್‌ನಿಂದ ಕೆಟ್ಟ ವಾಸನೆ ಬರುತ್ತಿತ್ತು ಎಂದು ಹೇಳಿದರು.

ಇದನ್ನೂ ಓದಿ
ಮೀರತ್​ ಕೊಲೆ ಪ್ರಕರಣ: ಮುಸ್ಕಾನ್​ ಸೌರಭ್​ನನ್ನು ತುಂಡು ತುಂಡಾಗಿ ಕತ್ತರಿಸಿದ
ನದಿಗೆ ಶವವಿದ್ದ ಸೂಟ್​ಕೇಸ್​ ಎಸೆಯಲು ಹೋಗಿ ಸಿಕ್ಕಿಬಿದ್ದ ಅಮ್ಮ-ಮಗಳು
ಸೂಟ್‌ಕೇಸ್‌ನಲ್ಲಿ ತುಂಡಾಗಿ ಕತ್ತರಿಸಿದ ಮಹಿಳೆಯ ಶವ ಪತ್ತೆ

ಅವರು ಚೀಲವನ್ನು ಮುಟ್ಟಿದಾಗ, ಅದರಲ್ಲಿ ಶವ ಏನಾದರೂ ಇದ್ದರೆ ಎನ್ನುವ ಅನುಮಾನ ಉಂಟಾಗಿತ್ತು. ಚೀಲವನ್ನು ತೆರೆದಾಗ ಒಳಗೆ ಒಬ್ಬ ಮಹಿಳೆಯ ಮೃತ ದೇಹ ಕಂಡುಬಂದಿತ್ತು, ಅದನ್ನು ನೋಡಿ ಬೆಚ್ಚಿಬಿದ್ದು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಚೀಲವನ್ನು ತೆರೆದಾಗ ಅದರೊಳಗೆ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಆತನ ತಲೆಯನ್ನು ಜಜ್ಜಿ ಕೊಲೆ ಮಾಡಿ, ಟ್ರಾಲಿ ಬ್ಯಾಗಿನಲ್ಲಿ ನೀಟಾಗಿ ತುಂಬಿಸಲಾಗಿತ್ತು.

ಮಹಿಳೆಯ ಬಲಗೈಯಲ್ಲಿ ಆಕೆಯ ಹೆಸರಿನ ಹಚ್ಚೆ ಕೂಡ ಹಾಕಿಸಿಕೊಂಡಿದ್ದು, ಅದನ್ನು ಕೊಲೆಗಾರರು ಅಳಿಸಲು ಪ್ರಯತ್ನಿಸಿದ್ದಾರೆ. ಆ ಮಹಿಳೆಯ ದೇಹದ ಮೇಲೆ ಇನ್ನೂ ಎರಡು ಹಚ್ಚೆಗಳಿದ್ದವು. ಪ್ರಾಥಮಿಕ ತನಿಖೆಯ ಪ್ರಕಾರ ಕೊಲೆ ಬೇರೆಡೆ ನಡೆದಿರಬಹುದು ಮತ್ತು ನಂತರ ಶವವನ್ನು ಚೀಲದಲ್ಲಿ ಹಾಕಿ ಇಲ್ಲಿ ಎಸೆದು ವಿಲೇವಾರಿ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಇಂದೋರ್​-ಋಷಿಕೇಶ: ಎರಡು ರೈಲಿನೊಳಗೆ ಮಹಿಳೆಯ ದೇಹದ ತುಂಡರಿಸಿದ ಭಾಗಗಳು ಪತ್ತೆ

ಗುರುಗ್ರಾಮ ಪೊಲೀಸರು ಮೃತ ವ್ಯಕ್ತಿಯನ್ನು ಗುರುತಿಸಿದವರಿಗೆ 25,000 ರೂ. ಬಹುಮಾನ ಘೋಷಿಸಿದ್ದಾರೆ. ಇದಲ್ಲದೆ, ಜನರು ಕಾಣೆಯಾದ ಪ್ರಕರಣಗಳನ್ನು ಸಹ ತನಿಖೆ ಮಾಡಲಾಗುತ್ತಿದೆ. ಸುಶಾಂತ್ ಲೋಕ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಫರಿದಾಬಾದ್ ರಸ್ತೆಯಲ್ಲಿರುವ ಘಟನಾ ಸ್ಥಳವನ್ನು ಪೊಲೀಸರ ಅಪರಾಧ ಸ್ಥಳ, ಬೆರಳಚ್ಚು ಮತ್ತು ಶ್ವಾನ ದಳ ತಂಡಗಳು ಪರಿಶೀಲಿಸಿದವು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶವವನ್ನು ಬೇರೆ ಸ್ಥಳದಿಂದ ತಂದು ಇಲ್ಲಿ ಎಸೆದಿರುವುದು ತಿಳಿದುಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ