ಗರ್ಭಿಣಿ ಆತ್ಮಹತ್ಯೆ, ಆಕೆಯ ಕೈಲಿದ್ದ ಬರಹದಿಂದ ಪ್ರೇಮಿಗೆ ಸಿಕ್ತು ಜಾಮೀನು
ಗರ್ಭಿಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರೇಮಿಗೆ ಗ್ವಾಲಿಯರ್ ಹೈಕೋರ್ಟ್ ಜಾಮೀನು ನೀಡಿದೆ. ಆಕೆಯ ಕೈಲಿದ್ದ ಬರಹದಿಂದ ನಿಜವಾದ ಆರೋಪಿಗಳು ಯಾರೆಂದು ತಿಳಿದ ಹಿನ್ನೆಲೆಯಲ್ಲಿ ಆಕೆಯ ಪ್ರೇಮಿಯನ್ನು ಬಿಡುಗಡೆ ಮಾಡಲಾಗಿದೆ.
ಗರ್ಭಿಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರೇಮಿಗೆ ಗ್ವಾಲಿಯರ್ ಹೈಕೋರ್ಟ್ ಜಾಮೀನು ನೀಡಿದೆ. ಆಕೆಯ ಕೈಲಿದ್ದ ಬರಹದಿಂದ ನಿಜವಾದ ಆರೋಪಿಗಳು ಯಾರೆಂದು ತಿಳಿದ ಹಿನ್ನೆಲೆಯಲ್ಲಿ ಆಕೆಯ ಪ್ರೇಮಿಯನ್ನು ಬಿಡುಗಡೆ ಮಾಡಲಾಗಿದೆ.
ಗರ್ಭಿಣಿಯ ಮರಣೋತ್ತರ ಪರೀಕ್ಷೆ ಸಮಯದಲ್ಲಿ ಆಕೆಯ ಅಂಗೈನಲ್ಲಿ ಏನೋ ಬರೆದಿರುವುದು ಕಂಡಿದ್ದಾರೆ. ಆಕೆಯು ತನ್ನ ಸಹೋದರರಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾಳೆ.
ಇದಾದ ಬಳಿಕ ನ್ಯಾಯಮೂರ್ತಿ ಸುನೀತಾ ಯಾದವ್ ಅವರು ಸಂಪೂರ್ಣ ಪ್ರಕರಣದ ವಿಚಾರಣೆ ನಡೆಸಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರು.
ವಿದಿಶಾ ಜಿಲ್ಲೆಯ ದೀಪನಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜೂನ್ 6 ರಂದು ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕ ಮೃತ ಮಹಿಳೆ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಮಹಿಳೆ ಕೊಲೆ ಕೇಸ್: ಮೃತಳೊಂದಿಗೆ ಸಂಪರ್ಕದಲ್ಲಿದ್ದ ಓರ್ವನ ಮೇಲೆ ಶಂಕೆ, ತಾಯಿ ದೂರಿನನ್ವಯ ಎಫ್ಐಆರ್
ಆರೋಪಿ ಅಮಿತ್ ಸಾಹು ಜೂನ್ 4 ರಂದು ತನ್ನ ಮನೆಗೆ ಬಂದು ತನ್ನ ಮಗಳನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದ, ಆದರೆ ಮಗಳು ಒಪ್ಪದಿದ್ದಾಗ ಅಮಿತ್ ಸಹೋದರ ಸಹೋದರಿಯರಿಗೆ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದ ಎಂದು ಮೃತನ ತಾಯಿ ದೂರಿನಲ್ಲಿ ತಿಳಿಸಿದ್ದರು.
ಮಾನಸಿಕ ಹಿಂಸೆಯಿಂದ ಬೇಸತ್ತು ಮಗಳು ಆತ್ಮಹತ್ಯೆ ಹೆಜ್ಜೆ ಇಟ್ಟಿದ್ದಾಳೆ ಎಂದಿದ್ದರು ಹೀಗಾಗಿ ಮೃತಳ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದರು. ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಕೈ ಮೇಲೆ ಬರೆದಿದ್ದ ಬರಹವನ್ನು ವೈದ್ಯರು ಫೋಟೊ ತೆಗೆದುಕೊಂಡಿದ್ದರು. ಡೆತ್ನೋಟ್ನಲ್ಲಿ ಎಲ್ಲಿಯೂ ಅಮಿತ್ ಸಾಹು ಹೆಸರಿರಲಿಲ್ಲ, ಆದರೆ ತನ್ನ ಸಾವಿಗೆ ತನ್ನ ಸಹೋದರರೇ ಕಾರಣ ಎಂದು ಬರೆದಿದ್ದಳು.
ಅಮಿತ್ ಮನೆಗೆ ಬಂದು ಹೋದಾಗಿನಿಂದ ಅಣ್ಣಂದಿರುವ ತನಗೆ ಹಿಂಸೆ ನೀಡುತ್ತಿದ್ದರು ಆ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿರುವುದಾಗಿ ಬರೆದಿದ್ದಳು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ