Gyanvapi Masjid Survey ಅಡ್ವೊಕೇಟ್-ಕಮಿಷನರ್ ಅಜಯ್ ಮಿಶ್ರಾರನ್ನು ಹುದ್ದೆಯಿಂದ ವಜಾಗೊಳಿಸಿದ ವಾರಣಾಸಿ ಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: May 17, 2022 | 6:52 PM

ಸಮಿತಿಯು ನಡೆಸಿದ ಸಮೀಕ್ಷೆ ಮತ್ತು ವೀಡಿಯೊಗ್ರಫಿ ವರದಿಯನ್ನು ಸಲ್ಲಿಸಲು ನ್ಯಾಯಾಲಯವು ಎರಡು ದಿನಗಳ ಕಾಲಾವಕಾಶವನ್ನೂ ನೀಡಿದೆ. ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ಆದೇಶ ಹೊರಡಿಸಿದ್ದಾರೆ.

Gyanvapi Masjid Survey ಅಡ್ವೊಕೇಟ್-ಕಮಿಷನರ್ ಅಜಯ್ ಮಿಶ್ರಾರನ್ನು ಹುದ್ದೆಯಿಂದ ವಜಾಗೊಳಿಸಿದ ವಾರಣಾಸಿ ಕೋರ್ಟ್
ಜ್ಞಾನವಾಪಿ ಮಸೀದಿ
Image Credit source: PTI
Follow us on

ವಾರಣಾಸಿ (Varanasi) ನ್ಯಾಯಾಲಯವು ಅಡ್ವೋಕೇಟ್ -ಕಮಿಷನರ್ ಅಜಯ್ ಕುಮಾರ್ ಮಿಶ್ರಾ (Ajay Kumar Mishra) ಅವರನ್ನು ನ್ಯಾಯಾಲಯ ನೇಮಿಸಿದ ಹುದ್ದೆಯಿಂದ  ವಜಾಗೊಳಿಸಿದೆ. ವಿಶಾಲ್ ಸಿಂಗ್ ಈಗ ವರದಿ ಸಲ್ಲಿಸಲಿದ್ದಾರೆ. ವರದಿ ಸಲ್ಲಿಸಲು ನ್ಯಾಯಾಲಯ ಎರಡು ದಿನಗಳ ಕಾಲಾವಕಾಶ ನೀಡಿದೆ. ಅಡ್ವೊಕೇಟ್-ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಸಹಕರಿಸುತ್ತಿಲ್ಲ ಎಂದು ಅಜಯ್ ಪ್ರತಾಪ್ ಸಿಂಗ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ನ್ಯಾಯಾಲಯ ನೇಮಿಸಿದ ವಿಶೇಷ ಆಯೋಗವು ಜ್ಞಾನವಾಪಿ ಮಸೀದಿಯ (Gyanvapi Mosque) ಸಮೀಕ್ಷಾ ವರದಿಯನ್ನು ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ಕೋರಿತ್ತು. ಬೆಳಗ್ಗೆ ಸಹಾಯಕ ನ್ಯಾಯಾಲಯದ ಕಮಿಷನರ್, ಅಜಯ್ ಪ್ರತಾಪ್ ಸಿಂಗ್, “ಮೇ 14-16 ರಿಂದ ಮೂರು ದಿನಗಳ ಕಾಲ ಸಮೀಕ್ಷೆ ನಡೆಯಿತು, ಕೇವಲ 50 ಪ್ರತಿಶತದಷ್ಟು ವರದಿ ಸಿದ್ಧವಾಗಿದೆ, ಇನ್ನೂ ಪೂರ್ಣಗೊಂಡಿಲ್ಲ, ಆದ್ದರಿಂದ ನಾವು ಅದನ್ನು ಮೊದಲು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಾಗುತ್ತಿಲ್ಲ. ನಾವು ನ್ಯಾಯಾಲಯದಿಂದ 3-4 ದಿನಗಳ ಕಾಲಾವಕಾಶ ಕೋರುತ್ತೇವೆ  ಎಂದು ಹೇಳಿದ್ದಾರೆ. ಇದಲ್ಲದೆ, ಈ ಹಿಂದೆ ವರದಿಯನ್ನು ಸಕಾಲದಲ್ಲಿ ಸಲ್ಲಿಸಲಾಗುವುದು ಎಂದು ಹೇಳಿದ್ದ ವಿಶೇಷ ಆಯುಕ್ತ ವಕೀಲ ವಿಶಾಲ್ ಸಿಂಗ್, ಈ ವಿಷಯದ ಬಗ್ಗೆ ಆಯೋಗದ ವರದಿಯನ್ನು ತಯಾರಿಸಲು ಕನಿಷ್ಠ ಎರಡು ದಿನಗಳ ಕಾಲಾವಕಾಶವನ್ನು ಕೋರಿದ್ದಾರೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ಸಂಕೀರ್ಣದ ಮೂರು ದಿನಗಳ ನ್ಯಾಯಾಲಯದ ಮೇಲ್ವಿಚಾರಣೆಯ ವೀಡಿಯೊಗ್ರಫಿ ಸಮೀಕ್ಷೆ ಸೋಮವಾರ ಮುಕ್ತಾಯವಾಯಿತು.

ಸಮಿತಿಯು ನಡೆಸಿದ ಸಮೀಕ್ಷೆ ಮತ್ತು ವೀಡಿಯೊಗ್ರಫಿ ವರದಿಯನ್ನು ಸಲ್ಲಿಸಲು ನ್ಯಾಯಾಲಯವು ಎರಡು ದಿನಗಳ ಕಾಲಾವಕಾಶವನ್ನೂ ನೀಡಿದೆ. ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ಆದೇಶ ಹೊರಡಿಸಿದ್ದಾರೆ.

ಮಸೀದಿ ಸಂಕೀರ್ಣದೊಳಗಿರುವ ಪ್ರದೇಶವನ್ನು ನಿರ್ಬಂಧಿಸಲು  ಮಾಡಲು ನ್ಯಾಯಾಧೀಶರು ಸೋಮವಾರ ಆದೇಶಿಸಿದ್ದರು.

ಇದನ್ನೂ ಓದಿ
Gyanvapi Mosque Survey ಶಿವಲಿಂಗವನ್ನು ರಕ್ಷಿಸಲು ಸುಪ್ರೀಂ ಆದೇಶ, ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧಗಳಿಲ್ಲ
Gyanvapi Mosque: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯ ಬೆನ್ನಲ್ಲೇ ಚರ್ಚೆಗೆ ಬಂತು ಎಸ್​ಎಲ್ ಭೈರಪ್ಪ ಬರೆದ ಆವರಣ ಕಾದಂಬರಿ
Gyanvapi Mosque: ವಾರಾಣಸಿ ಜ್ಞಾನವಾಪಿ ಮಸೀದಿ ಪ್ರಕರಣ; ಇಂದು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ
Gyanvapi Mosque: ಮಂಗಳವಾರದೊಳಗೆ ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆ ನಡೆಸಲು ಕೋರ್ಟ್​ ಸೂಚನೆ; 12 ಪ್ರಮುಖ ಅಂಶಗಳಿವು

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲ ಗೆಹ್ಲೋಟ್‌ರಿಂದ ಅಂತಿಮ ಮುದ್ರೆ

ಜ್ಞಾನವಾಪಿ ಮಸೀದಿಯು ಹಿಂದೂ ದೇವರ ವಿಗ್ರಹಗಳನ್ನು ಹೊಂದಿದೆ. ಆದ್ದರಿಂದ ಈ ಸ್ಥಳದಲ್ಲಿ ಹಿಂದೂಗಳಿಗೆ ಪೂಜೆ ಮತ್ತು ಪೂಜೆ ಮಾಡಲು ಅವಕಾಶ ನೀಡಬೇ ಎಂದು ಹಿಂದೂ ಪರ ವಾದಿಗಳು ಸಲ್ಲಿಸಿದ ಮೊಕದ್ದಮೆಯಲ್ಲಿ ಸಿವಿಲ್ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಸಮೀಕ್ಷೆ ಬಳಿಕ ಶಿವಲಿಂಗ ಪತ್ತೆಯಾಗಿದ್ದು, ಕೂಡಲೇ ಆ ಪ್ರದೇಶವನ್ನು ನಿರ್ಬಂಧಿಸಬೇಕೆಂದು ಫಿರ್ಯಾದಿ ಹರಿಶಂಕರ್‌ ಜೈನ್‌ ಪರ ವಕೀಲರು ವಾದಿಸಿದ ಬಳಿಕ ಈ ಆದೇಶ ನೀಡಲಾಗಿದೆ.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾದ ಪ್ರದೇಶವನ್ನು ರಕ್ಷಿಸಬೇಕು ಆದರೆ ಮಸೀದಿಗೆ ನಿರ್ಬಂಧ ಹಾಕಬಾರದು. ನಮಾಜ್ ಮಾಡಲು ಬಯಸುವವರಿಗೆ ಹಾಗೆ ಮಾಡಲು ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿದೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:04 pm, Tue, 17 May 22