75 ವರ್ಷದ ಬಳಿಕ ಪಾಕಿಸ್ತಾನದಲ್ಲಿರುವ ತನ್ನ ತವರು ಮನೆಗೆ ಭೇಟಿ ಕೊಟ್ಟ 92 ವರ್ಷದ ಭಾರತೀಯ ಮಹಿಳೆ, ಭಾವನಾತ್ಮಕ ಸನ್ನಿವೇಶ

| Updated By: ಆಯೇಷಾ ಬಾನು

Updated on: Jul 17, 2022 | 10:16 PM

ಸುಮಾರು 75 ವರ್ಷಗಳ ಬಳಿಕ 92 ವರ್ಷದ ರೀನಾ ಮತ್ತೆ ತಮ್ಮ ತವರು ಮನೆ ನೋಡುವ ಸೌಭಾಗ್ಯ ಒಲಿದು ಬಂದಿದ್ದು ಇದೊಂದು ಭಾವನಾತ್ಮಕ ಸನ್ನಿವೇಶವಾಗಿದೆ.

75 ವರ್ಷದ ಬಳಿಕ ಪಾಕಿಸ್ತಾನದಲ್ಲಿರುವ ತನ್ನ ತವರು ಮನೆಗೆ ಭೇಟಿ ಕೊಟ್ಟ 92 ವರ್ಷದ ಭಾರತೀಯ ಮಹಿಳೆ, ಭಾವನಾತ್ಮಕ ಸನ್ನಿವೇಶ
ರೀನಾ ಚಿಬರ್
Follow us on

ಇಸ್ಲಾಮಾಬಾದ್: ಇತ್ತ ಭಾರತ ತನ್ನ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯಲ್ಲಿ(India@75 Azadi Ka Amrit Mahotsav) ತೊಡಗಿದ್ರೆ. ಅತ್ತ ಭಾರತದ ಹಿರಿಯಜ್ಜಿ 75 ವರ್ಷದ ಬಳಿಕ ಪಾಕಿಸ್ತಾನದ(Pakistan) ನೆಲದಲ್ಲಿ ಹೆಜ್ಜೆಯೂರಿ ತಮ್ಮ ತವರು ಮನೆಗೆ ಭೇಟಿ ಕೊಟ್ಟು ಸಂಭ್ರಮಿಸಿದ್ದಾರೆ. 92 ವರ್ಷದ ಭಾರತೀಯ ಮಹಿಳೆ ರೀನಾ ಚಿಬರ್(Rina Chibar) ಎಂಬುವವರು ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಲು ಶನಿವಾರ ಪಾಕಿಸ್ತಾನಕ್ಕೆ ತಲುಪಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸೌಹಾರ್ದ ಸೂಚಕದ ಭಾಗವಾಗಿ, ಪಾಕಿಸ್ತಾನಿ ಹೈಕಮಿಷನ್ ಮಹಿಳೆಗೆ ಮೂರು ತಿಂಗಳ ವೀಸಾವನ್ನು ನೀಡಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪಾಕಿಸ್ತಾನದ ರಾವಲ್ಪಿಂಡಿಯ ಪ್ರೇಮ್ ನಿವಾಸ್‌ನಲ್ಲಿರುವ ತನ್ನ ಪೂರ್ವಜರ ಮನೆಯನ್ನು ನೋಡಲು ಮಹಿಳೆ ಶನಿವಾರ ವಾಘಾ-ಅಟ್ಟಾರಿ ಗಡಿಯ ಮೂಲಕ ತೆರಳಿದ್ದಾರೆ. ಇನ್ನು ರೀನಾ ಚಿಬರ್ ಅವರು ಎರಡೂ ರಾಷ್ಟ್ರಗಳಿಗೆ ಒಟ್ಟಿಗೆ ಕೆಲಸ ಮಾಡಲು ಹಾಗೂ ತಮಗೆ ಬರಲು, ಹೋಗಲು ಸುಲಭಗೊಳಿಸುವಂತೆ ವೀಸಾ ನಿರ್ಬಂಧಗಳನ್ನು ಸರಾಗಗೊಳಿಸಲು ಒತ್ತಾಯಿಸಿದ್ದಾರೆ. ಹಾಗೂ ಇದೇ ವೇಳೆ ಅವರು, ಗಡಿಯಿಂದ ರಾವಲ್ಪಿಂಡಿಗೆ ತಮ್ಮವರನ್ನು ಓಡಿಸಲ್ಪಟ್ಟಾಗ ವಿಭಜನೆಯ ಮೊದಲು ಪಿಂಡಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದ ಬಹು-ಸಾಂಸ್ಕೃತಿಕ ವೈವಿಧ್ಯಮಯ ಸಮುದಾಯವನ್ನು ನೆನಪಿಸಿಕೊಂಡಿದ್ದಾರೆ.

ನನ್ನ ಒಡಹುಟ್ಟಿದವರಿಗೆ ಮುಸ್ಲಿಮರು ಸೇರಿದಂತೆ ವಿವಿಧ ಸಮುದಾಯಗಳ ಸ್ನೇಹಿತರಿದ್ದರು. ಹಾಗೂ ಅವರು ನಮ್ಮ ಮನೆಗೆ ಬರುತ್ತಿದ್ದರು. “ನಮ್ಮ ಮನೆ ಕೂಡ ವೈವಿಧ್ಯಮಯ ಜನರ ಮಿಶ್ರಣವಾಗಿತ್ತು” ಎಂದು ನೆನಪಿಸಿಕೊಂಡರು ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಇನ್ನು ಮಾಧ್ಯಮ ವರದಿಯ ಪ್ರಕಾರ, 1947 ರಲ್ಲಿ ವಿಭಜನೆಯ ನಂತರ, ರೀನಾ ಚಿಬರ್ ಅವರ ಕುಟುಂಬವು ಭಾರತಕ್ಕೆ ಸ್ಥಳಾಂತರಗೊಂಡಿತು. ಆ ಸಮಯದಲ್ಲಿ ಅವರು 15 ವರ್ಷದ ಬಾಲಕಿಯಾಗಿದ್ದರು. ಸದ್ಯ ಈಗ ಸುಮಾರು 75 ವರ್ಷಗಳ ಬಳಿಕ 92 ವರ್ಷದ ರೀನಾ ಮತ್ತೆ ತಮ್ಮ ತವರು ಮನೆ ನೋಡುವ ಸೌಭಾಗ್ಯ ಒಲಿದು ಬಂದಿದ್ದು ಇದೊಂದು ಭಾವನಾತ್ಮಕ ಸನ್ನಿವೇಶವಾಗಿದೆ.

Published On - 10:13 pm, Sun, 17 July 22