ಸ್ವಚ್ಛತಾ ಕೈಂಕರ್ಯ: ದೆಹಲಿಯ ಪ್ರಿನ್ಸಸ್ ಪಾರ್ಕ್ನಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯಿಂದ ಶ್ರಮದಾನ
Swachhata Hi Seva: ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯ ಮೇರೆಗೆ ಕೇಂದ್ರದ ಎಲ್ಲಾ ಸಚಿವರೂ ವಿವಿಧೆಡೆ ಒಂದು ಗಂಟೆ ಕಾಲ ಸ್ವಚ್ಛತಾ ಕಾರ್ಯಗಳಲ್ಲಿ ಶ್ರಮದಾನ ಮಾಡಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ದೆಹಲಿಯ ಕೋಪರ್ನಿಕಸ್ ಮಾರ್ಗ್ ರಸ್ತೆಯಲ್ಲಿರುವ ಪ್ರಿನ್ಸಸ್ ಪಾರ್ಕ್ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕೆಲಸದಲ್ಲಿ ತೊಡಗಿದರು. ಅವರ ಸಚಿವಾಲಯದ ಹಿರಿಯ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಸಚಿವರ ಜೊತೆಗಿದ್ದು ಕೆಲಸ ಮಾಡಿದರು.
ನವದೆಹಲಿ, ಅಕ್ಟೋಬರ್ 1: ಗಾಂಧಿ ಜಯಂತಿಗೆ ಒಂದು ದಿನ ಇರುವಂತೆ ದೇಶಾದ್ಯಂತ ಸ್ವಚ್ಛಾತಾ ಅಭಿಯಾನಕ್ಕೆ (cleanliness drive) ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ಸಾಕಷ್ಟು ಮಂದಿ ಕೇಂದ್ರ ಸಚಿವರು ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿ ಅನಿಲ ಖಾತೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ‘ಸ್ವಚ್ಛತಾ ಹೀ ಸೇವಾ’ (swachchata hi sewa) ಅಭಿಯಾನದಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದರು. ರಾಷ್ಟ್ರರಾಜಧಾನಿಯಲ್ಲಿನ ಕೋಪರ್ನಿಕಸ್ ಮಾರ್ಗ್ ರಸ್ತೆಯಲ್ಲಿರುವ ಪ್ರಿನ್ಸಸ್ ಪಾರ್ಕ್ ಬಳಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಅವರ ಸಚಿವಾಲದಯ ಹಿರಿಯ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು, ಪೌರ ಕಾರ್ಮಿಕರು, ವಿದ್ಯಾರ್ಥಿಗಳು ಮೊದಲಾದವರು ಪಾರ್ಕ್ ಪ್ರದೇಶವನ್ನು ಸ್ವಚ್ಛಗೊಳಿಸಲು ಕೇಂದ್ರ ಸಚಿವರ ಜೊತೆಗಿದ್ದರು.
ನರೇಂದ್ರ ಮೋದಿ ಮಾಡಿದ್ದ ಕರೆ…
ಪ್ರಧಾನಿ ನರೇಂದ್ರ ಮೋದಿ ತಮ್ಮ 105ನೇ ಮನ್ ಕೀ ಬಾತ್ (mann ki baat) ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈ ಬಾರಿಯ ಗಾಂಧಿ ಜಯಂತಿಯಂದು ಮಹಾತ್ಮ ಗಾಂಧಿಗೆ ಗೌರವಾರ್ಥ ಸ್ವಚ್ಛಾಂಜಲಿ ಸಲ್ಲಿಸಬೇಕೆಂದು ಕರೆಕೊಟ್ಟಿದ್ದರು. ಅದರಂತೆ ಅಕ್ಟೋಬರ್ 1ರಂದು ‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್’ ಅಭಿಯಾನದಲ್ಲಿ ಎಲ್ಲಾ ಸಾರ್ವಜನಿಕರು ಒಂದು ಗಂಟೆ ಕಾಲ ಸ್ವಚ್ಛಾತಾ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಪ್ರಧಾನಿಗಳು ಕೋರಿದ್ದರು. ಅದರಂತೆ ದೇಶಾದ್ಯಂತ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಸ್ವಚ್ಛತಾ ಕಾರ್ಯಗಳಲ್ಲಿ ಗಣ್ಯರು, ಸಚಿವರು ಪಾಲ್ಗೊಂಡಿದ್ದಾರೆ.
ಅಮಿತ್ ಶಾ, ಧರ್ಮೇಂದ್ರ ಪ್ರಧಾನ್, ಅನುರಾಗ್ ಠಾಕೂರ್ ಸೇರಿದಂತೆ ವಿವಿಧ ಕೇಂದ್ರ ಸಚಿವರು ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರು.
🇮🇳 One Day 🇮🇳 One Hour 🇮🇳 One Cause Inspired by PM @narendramodi Ji’s call for #SwachhataHiSeva, joined residents of the temporary settlement at Princess Park on Copernicus Marg for one hour of #Shramdaan for #GarbageFreeIndia Swachhata Jan Andolan continues!@PMOIndia pic.twitter.com/qd5AR1RvRu
— Hardeep Singh Puri (@HardeepSPuri) October 1, 2023
ಕರ್ನಾಟಕದಲ್ಲಿ ಸಚಿವ ಎಚ್ ಕೆ ಪಾಟೀಲ್ ಶ್ರಮದಾನ
ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅವರು ಗದಗ್ ನಗರದ ಭೀಷ್ಮ ಕೆರೆ ಆವರಣದಲ್ಲಿ ನಡೆದ ಸ್ವಚ್ಛಾತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಕಡೆ ಇಂಥ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಯಿತು.
ಇದನ್ನೂ ಓದಿ: Swachhata Hi Seva: ಬನ್ನಿ ದೇಶವನ್ನು ಸ್ವಚ್ಛ ಹಾಗೂ ಸುಂದರವಾಗಿಸೋಣ: ಹಮೀಪುರದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಶ್ರಮದಾನ
ಈ ವೇಳೆ ಮಾತನಾಡಿದ ಸಚಿವರು, ಸ್ವಚ್ಛತಾ ಕಾರ್ಯವು ಒಂದು ದಿನಕ್ಕೆ ಸೀಮಿತವಾಗದೇ ವರ್ಷದ ಎಲ್ಲಾ ದಿನವೂ ನಡೆಯುತ್ತಿರಬೇಕು ಎಂದು ಕಿವಿಮಾತು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:28 pm, Sun, 1 October 23