Updated on: Aug 22, 2021 | 1:58 PM
ನಿನ್ನೆಯಿಂದ (ಆಗಸ್ಟ್ 21) ಮಂತ್ರಾಲಯದಲ್ಲಿ ರಾಯರ 350ನೇ ಆರಾಧನ ಮಹೋತ್ಸವ ನಡೆಯುತ್ತಿದೆ. ಮಂತ್ರಾಲಯ ಶ್ರೀಮಠದಲ್ಲಿ ರಾಯರ ಆರಾಧನೆ ಸಂಭ್ರಮ ಕಳೆಗಟ್ಟಿದೆ.
ರಾಯರ ಅರಾಧನೆ ಹಿನ್ನೆಲೆ ಮ್ಯೂಸಿಯಂ ಲೋಕಾರ್ಪಣೆ ಮಾಡಲಾಗಿದೆ.
ರಾಯರ ಸನ್ನಿಧಿಯಲ್ಲಿ ಹರಿದಾಸ ದರ್ಶಿನಿ ಮ್ಯೂಸಿಯಂ ಭಕ್ತರ ಗಮನ ಸೆಳೆದಿದ್ದು, 2 ಕೋಟಿಗೂ ಅಧಿಕ ವೆಚ್ಚ ಮಾಡಿ ಮ್ಯೂಸಿಯಂ ನಿರ್ಮಿಸಲಾಗಿದೆ.
Haridasa Darshini Museum in Mantralayam is attracting the attention of people in raichur
ಸಂದೇಶ ಫಲಕಗಳು ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿವೆ. ದೇವಾನುದೇವತೆಗಳ ವಿಗ್ರಹಗಳು, ಬೃಹದಾಕಾರದ ಬೃಂದಾವನ ಭಕ್ತರ ಗಮನ ಸೆಳೆಯುತ್ತಿದೆ.
900ಕ್ಕೂ ಹೆಚ್ಚು ಹರಿದಾಸರು ಮತ್ತು ಹಿಂದು ಸನಾತನ ಸಂಸ್ಕೃತ ಸಾರುವ ಸಂದೇಶ ಫಲಕಗಳಿವೆ. ಮಂತ್ರಾಲಯ ಪೀಠಾಧಿಪತಿ ಸುಭುದೇಂದ್ರ ತೀರ್ಥರು ಈ ಮ್ಯೂಸಿಯಂನ ಲೋಕಾರ್ಪಣೆ ಮಾಡಿದ್ದಾರೆ.