ಹರಿದ್ವಾರ: ಕನ್ವರ್ ಯಾತ್ರಾ ಮಾರ್ಗದಲ್ಲಿನ ಮಸೀದಿ, ಮಝಾರ್ ಕಾಣದಂತೆ ಪರದೆ; ಆಕ್ಷೇಪ ವ್ಯಕ್ತವಾದ ನಂತರ ತೆರವು

|

Updated on: Jul 27, 2024 | 11:54 AM

ನಾವು ಮುಸ್ಲಿಮರು ಯಾವಾಗಲೂ ಕನ್ವರ್ ಜಾತ್ರೆಗೆ ಶಿವಭಕ್ತರನ್ನು ಸ್ವಾಗತಿಸುತ್ತೇವೆ. ಅವರಿಗೆ ವಿವಿಧ ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡುತ್ತೇವೆ. ಇದು ಹರಿದ್ವಾರದಲ್ಲಿ ಹಿಂದೂ-ಮುಸ್ಲಿಂರ ನಡುವಿನ ಸಾಮರಸ್ಯಕ್ಕೆ ಉದಾಹರಣೆಯಾಗಿದೆ. ಎಂದಿಗೂ ಪರದೆಯ ಸಂಪ್ರದಾಯ ಇರಲಿಲ್ಲ," ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ನಯೀಮ್ ಖುರೇಷಿ ಹೇಳಿದ್ದಾರೆ

ಹರಿದ್ವಾರ: ಕನ್ವರ್ ಯಾತ್ರಾ ಮಾರ್ಗದಲ್ಲಿನ ಮಸೀದಿ, ಮಝಾರ್ ಕಾಣದಂತೆ ಪರದೆ; ಆಕ್ಷೇಪ ವ್ಯಕ್ತವಾದ ನಂತರ ತೆರವು
ಹರಿದ್ವಾರದಲ್ಲಿ ಮಸೀದಿಗಳ ಮುಂದೆ ಬಿಳಿ ಬಟ್ಟೆ ಕಟ್ಟಿರುವುದು
Follow us on

ಹರಿದ್ವಾರ ಜುಲೈ 27: ಉತ್ತರಾಖಂಡದ (Uttarakhand) ಹರಿದ್ವಾರದಲ್ಲಿ (Haridwar) ಕನ್ವರ್ ಯಾತ್ರಾ (Kanwar Yatra ) ಮಾರ್ಗದ ಉದ್ದಕ್ಕೂ ಎರಡು ಮಸೀದಿಗಳು ಮತ್ತು ಮಝಾರ್​​ಗಳ (ಸಮಾಧಿ)  ಮುಂಭಾಗಗಳನ್ನು ಶುಕ್ರವಾರ ಬಿಳಿ ಪರದೆಯಿಂದ ಮುಚ್ಚಲಾಗಿದೆ ಎಂದು ವರದಿಯಾಗಿದೆ. ಆದರೆ, ವಿವಿಧ ಕಡೆಯಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಅದನ್ನು ತೆಗೆಯಲಾಯಿತು.
ಈ ಪರದೆಯನ್ನು ಮಸೀದಿಗಳು ಮತ್ತು ಮಝಾರ್​​ಗಳ ಮುಂದೆ ಬಿದಿರಿನ ಸ್ಕ್ಯಾಫೋಲ್ಡಿಂಗ್‌ಗಳ ಮೇಲೆ ನೇತುಹಾಕಲಾಗಿತ್ತು. ಜ್ವಾಲಾಪುರ ಪ್ರದೇಶದಲ್ಲಿ ಈ ರೀತಿ ಮಾಡಲಾಗಿದೆ.

ಈ ಕ್ರಮದ ಬಗ್ಗೆ ಯಾವುದೇ ಆಡಳಿತಾತ್ಮಕ ಆದೇಶದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಮಸೀದಿಯ ಮೌಲಾನಾ ಮತ್ತು ಮಝಾರ್​​ನ ಉಸ್ತುವಾರಿಗಳು ಹೇಳಿದರು. ಕನ್ವರ್ ಯಾತ್ರೆಯ ಸಮಯದಲ್ಲಿ ಇಂತಹ ಕ್ರಮವನ್ನು ತೆಗೆದುಕೊಳ್ಳುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ.

ಹರಿದ್ವಾರದ ಹಿರಿಯ ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರತಿಕ್ರಿಯೆಗೆ ಲಭ್ಯರಿಲ್ಲದಿದ್ದರೂ, ಕ್ಯಾಬಿನೆಟ್ ಸಚಿವ ಸತ್ಪಾಲ್ ಮಹಾರಾಜ್ ಅವರು ಶಾಂತಿಯನ್ನು ಕಾಪಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. “ಅಂತಹ ಯಾವುದೇ ಕೆಲಸವನ್ನು ಸಮಸ್ಯೆ ತಡೆಯಲು ಮಾತ್ರ ಮಾಡಲಾಗುತ್ತದೆ” ಎಂದು ಸಚಿವರು ಹೇಳಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. “ಇದು ಅಂತಹ ದೊಡ್ಡ ವಿಷಯವಲ್ಲ. ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದಾಗ ನಾವು ಅದನ್ನು ಮುಚ್ಚುತ್ತೇವೆ” ಎಂದಿದ್ದಾರೆ ಅವರು.

ಸ್ಥಳೀಯರು ಮತ್ತು ರಾಜಕಾರಣಿಗಳು ಸೇರಿದಂತೆ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಪರದೆ ತೆಗೆದುಹಾಕಿತು.

ಕರ್ಟನ್‌ಗಳನ್ನು ತೆಗೆದುಹಾಕಲು ರೈಲ್ವೆ ಪೊಲೀಸ್ ಪೋಸ್ಟ್‌ನಿಂದ ನಮಗೆ ಆದೇಶ ಬಂದಿದೆ. ಅದಕ್ಕಾಗಿಯೇ ನಾವು ಇವುಗಳನ್ನು ತೆಗೆದುಹಾಕಲು ಬಂದಿದ್ದೇವೆ ”ಎಂದು ಯಾತ್ರೆಯ ನಿರ್ವಹಣೆಗಾಗಿ ಆಡಳಿತದಿಂದ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಆಗಿ ನೇಮಕಗೊಂಡ ಡ್ಯಾನಿಶ್ ಅಲಿ ಹೇಳಿದ್ದಾರೆ.

ತಮ್ಮ ಜೀವನದಲ್ಲಿ ಇಂತಹದನ್ನು ನೋಡಿಲ್ಲ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ನಯೀಮ್ ಖುರೇಷಿ ಹೇಳಿದ್ದಾರೆ

“ನಾವು ಮುಸ್ಲಿಮರು ಯಾವಾಗಲೂ ಕನ್ವರ್ ಜಾತ್ರೆಗೆ ಶಿವಭಕ್ತರನ್ನು ಸ್ವಾಗತಿಸುತ್ತೇವೆ. ಅವರಿಗೆ ವಿವಿಧ ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡುತ್ತೇವೆ. ಇದು ಹರಿದ್ವಾರದಲ್ಲಿ ಹಿಂದೂ-ಮುಸ್ಲಿಂರ ನಡುವಿನ ಸಾಮರಸ್ಯಕ್ಕೆ ಉದಾಹರಣೆಯಾಗಿದೆ. ಎಂದಿಗೂ ಪರದೆಯ ಸಂಪ್ರದಾಯ ಇರಲಿಲ್ಲ” ಎಂದು ಖುರೇಷಿ ಹೇಳಿದ್ದಾರೆ.

ಕನ್ವರ್ ಮೇಳ ಪ್ರಾರಂಭವಾಗುವ ಮೊದಲು ಆಡಳಿತವು ಸಭೆ ನಡೆಸಿದ್ದು, ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸದಸ್ಯರನ್ನು ಎಸ್‌ಪಿಒಗಳನ್ನಾಗಿ ಮಾಡಲಾಗಿದೆ ಎಂದು ಖುರೇಷಿ ಹೇಳಿದರು. ಧಾರ್ಮಿಕ ಕಟ್ಟಡಗಳನ್ನು ಒಳಗೊಂಡಂತೆ ಯಾರೂ ಈ ಬಗ್ಗೆ ಕೇರ್‌ಟೇಕರ್‌ಗಳೊಂದಿಗೆ ಮಾತನಾಡಿಲ್ಲ ಎಂದು ಮಜಾರ್‌ನ ಉಸ್ತುವಾರಿ ಶಕೀಲ್ ಅಹ್ಮದ್ ಹೇಳಿದ್ದಾರೆ.

ಕನ್ವಾರಿಯಾಗಳು ವಿಶ್ರಾಂತಿ ಪಡೆಯಲು ಮಸೀದಿಗಳು ಮತ್ತು ಮಝಾರ್‌ಗಳ ಹೊರಗಿನ ಮರಗಳ ನೆರಳಿನಲ್ಲಿ ನಿಲ್ಲುತ್ತಾರೆ.ಇದೇ ಮೊದಲ ಬಾರಿಗೆ ಇಂತಹ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಎಂದು ಅಹ್ಮದ್ ಹೇಳಿದರು. ಮಸೀದಿಗಳು ಮತ್ತು ಮಝಾರ್‌ಗಳನ್ನು ಮುಚ್ಚುವ ಆಡಳಿತದ ನಿರ್ಧಾರವು ಆಶ್ಚರ್ಯಕರವಾಗಿದೆ. ಮೊದಲು ಹೀಗಾಗಲಿಲ್ಲ. ಕೆಲವು ಕನ್ವರಿಯಾಗಳು ಮಸೀದಿಗೂ ಹೋಗಿ ಪೂಜೆ ಸಲ್ಲಿಸುತ್ತಾರೆ. ಭಾರತ ಎಲ್ಲ ಧರ್ಮ, ಜಾತಿಗಳನ್ನು ನೋಡಿಕೊಳ್ಳುವ ದೇಶ. ಇಂದು ಮಸೀದಿಗಳನ್ನು ಮುಚ್ಚಲಾಗುತ್ತಿದೆ, ನಾಳೆ ದೇವಸ್ಥಾನಗಳನ್ನು ಈ ರೀತಿ ಮುಚ್ಚಿದರೆ ಏನಾಗುತ್ತದೆ?” ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾವ್ ಅಫಕ್ ಅಲಿ ಕೇಳಿದ್ದಾರೆ.

ಇದು ಸುಪ್ರೀಂ ಕೋರ್ಟ್‌ನ ಅವಹೇಳನ ಎಂದು ಉತ್ತರಾಖಂಡ ಕಾಂಗ್ರೆಸ್ ಉಪಾಧ್ಯಕ್ಷ ಸೂರ್ಯಕಾಂತ್ ಧಸ್ಮನಾ ಹೇಳಿದ್ದಾರೆ.

ಹರಿದ್ವಾರ ಜಿಲ್ಲೆಯ ಕನ್ವಾರ್ ಯಾತ್ರೆಯ ಮಾರ್ಗದಲ್ಲಿ ಮಸೀದಿಗಳು ಮತ್ತು ಮಝಾರ್‌ಗಳಿಗೆ ಪರದೆ ಹಾಕುವ ಆದೇಶವನ್ನು ಯಾರೇ ಹೊರಡಿಸಿದರೂ, ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ತಮ್ಮ ಹೆಸರು ಪ್ರದರ್ಶಿಸಬೇಕು ಎಂಬ ಸರ್ಕಾರದ ನಿರ್ದೇಶನಕ್ಕೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಆಗಿದೆ ಎಂದು ಧಸ್ಮನಾ ಹೇಳಿದರು.

ಇದನ್ನೂ ಓದಿ: PM Modi Visit Ukraine: ಪ್ರಧಾನಿ ನರೇಂದ್ರ ಮೋದಿ ಆಗಸ್ಟ್​​​ 23ಕ್ಕೆ ಉಕ್ರೇನ್ ಭೇಟಿ ಸಾಧ್ಯತೆ

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬದರಿನಾಥ್, ಮಂಗಲೌರ್, ಚಿತ್ರಕೂಟ ಮತ್ತು ಪ್ರಯಾಗರಾಜ್ ಚುನಾವಣಾ ಸೋಲಿನಿಂದ ಅದು ಪಾಠ ಕಲಿತಿಲ್ಲ. “ಇಡೀ ದೇಶ ಒಂದೇ. ಬಿಜೆಪಿಯ ವಿಭಜಕ ಮತ್ತು ತಾರತಮ್ಯದ ರಾಜಕೀಯವನ್ನು ತಿರಸ್ಕರಿಸಲಾಗಿದೆ. ಆದರೆ ಪಕ್ಷ ಪಾಠ ಕಲಿಯುತ್ತಿಲ್ಲ” ಎಂದು ಧಸ್ಮನಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:53 am, Sat, 27 July 24