Manohar Lal Khattar: ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ಸಾಧ್ಯತೆ
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು ಕರ್ನಾಲ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು. ತರುಣ್ ಚುಗ್ ಮತ್ತು ಅರ್ಜುನ್ ಮುಂಡಾ ಅವರೊಂದಿಗೆ ಮಾತನಾಡಲು ಹೊರಟಿದ್ದಾರೆ. ದುಷ್ಯಂತ್ ಚೌಟಾಲ ಅವರು ಶಾ ಮತ್ತು ನಡ್ಡಾ ಅವರನ್ನು ಮತ್ತೆ ಭೇಟಿಯಾಗಲು ಸಮಯ ಕೇಳಿದ್ದಾರೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್(Manohar Lal Khattar) ರಾಜೀನಾಮೆ ನೀಡುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ನಯಾಬ್ ಸೈನಿ ಅಥವಾ ಸಂಜಯ್ ಭಾಟಿಯಾ ಅವರು ಸಿಎಂ ಸ್ಥಾನವನ್ನು ಅಲಂಕರಿಸಬಹುದು ಎಂದು ಹೇಳಲಾಗುತ್ತಿದೆ. ಖಟ್ಟರ್-ಸಚಿವ ಸಂಪುಟ ಇಂದು ಸಾಮೂಹಿಕ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಲ್ನಿಂದ ಖಟ್ಟರ್ ಕಣಕ್ಕಿಳಿಯಬಹುದು ಎಂದೂ ಮೂಲಗಳು ತಿಳಿಸಿವೆ.
ಶಾಸಕರ ಸಭೆ ಕರೆದ ಸಿಎಂ ಖಟ್ಟರ್ ಹರ್ಯಾಣ ಸರ್ಕಾರದಲ್ಲಿ ಬಿಜೆಪಿ ಮತ್ತು ಜೆಜೆಪಿ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ನಡುವೆ, ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಬಿಜೆಪಿ ಮತ್ತು ಸರ್ಕಾರದ ಬೆಂಬಲಿತ ಸ್ವತಂತ್ರ ಶಾಸಕರ ಸಭೆಯನ್ನು ಕರೆದಿದ್ದಾರೆ. ಇಂದು ಬೆಳಗ್ಗೆ 11:30ಕ್ಕೆ ಹರಿಯಾಣದ ನಿವಾಸಕ್ಕೆ ಬಿಜೆಪಿ ಮತ್ತು ಸರ್ಕಾರದ ಬೆಂಬಲಿತ ಸ್ವತಂತ್ರ ಶಾಸಕರನ್ನು ಸಿಎಂ ಕರೆದಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸೂತ್ರದ ಬಗ್ಗೆ ರಣತಂತ್ರ ರೂಪಿಸಲಿದೆ ಎನ್ನಲಾಗಿದೆ.
ಕುತೂಹಲಕಾರಿಯಾಗಿ, ಹರ್ಯಾಣ ರಾಜಕೀಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ದುಷ್ಯಂತ್ ಚೌಟಾಲಾ ಅವರು ದೆಹಲಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಪಕ್ಷದ ಶಾಸಕರ ಸಭೆಯನ್ನೂ ಕರೆದಿದ್ದಾರೆ. ಈ ಸಭೆಯಲ್ಲಿ ದುಶ್ಯಂತ್ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಂಬಲಾಗಿದೆ.
ಮತ್ತಷ್ಟು ಓದಿ: What India Thinks Today: ಲೋಕ ಚುನಾವಣೆಗೆ ಹರಿಯಾಣದ ಸಿದ್ಧತೆ ಬಗ್ಗೆ ಟಿವಿ9ನಲ್ಲಿ ಚರ್ಚೆ: ಮನೋಹರ್ ಲಾಲ್ ಖಟ್ಟರ್
ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಜೆಜೆಪಿ ಹಿಸಾರ್ ಮತ್ತು ಭಿವಾನಿ-ಮಹೇಂದ್ರಗಢ ಲೋಕಸಭಾ ಕ್ಷೇತ್ರಗಳಿಂದ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಯಸಿದೆ. ಹಿಸಾರ್‌ನ ಹಾಲಿ ಸಂಸದ ಬ್ರಿಜೇಂದ್ರ ಸಿಂಗ್ ಅವರು ಬಿಜೆಪಿ ತೊರೆದು ಭಾನುವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:09 am, Tue, 12 March 24