ಅತ್ಯಾಚಾರ ಆರೋಪಿ ರಾಮ್ ರಹೀಮ್ ಸಿಂಗ್ ಭೇಟಿಗೆ, ಅಪರಿಚಿತರಿಗೆ ಅವಕಾಶ ಮಾಡಿಕೊಟ್ಟಿದ್ದ ಡಿಎಸ್ಪಿ ಅಮಾನತು
ಡಿಎಸ್ಪಿ ಶಂಶೇರ್ ಸಿಂಗ್ ಅಮಾನತುಗೊಂಡ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅವರ ಸಸ್ಪೆಂಡ್ ಆದೇಶದಲ್ಲಿ, ಶಂಶೇರ್ ಸಿಂಗ್ ಅಮಾನತು ಅವಧಿಯಲ್ಲಿ ತಮ್ಮ ಸ್ವಸ್ಥಾನ ಬಿಟ್ಟು, ಅನುಮತಿ ಇಲ್ಲದೆ ಎಲ್ಲಿಗೂ ಹೋಗುವಂತಿಲ್ಲ ಎಂದೂ ಹೇಳಲಾಗಿದೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ, ಸದ್ಯ ರೊಹ್ಟಕ್ ಜೈಲಿನಲ್ಲಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ನನ್ನು ಭೇಟಿಯಾಗಲು ಒಂದಷ್ಟು ಜನರಿಗೆ ಅನಧಿಕೃತವಾಗಿ ಅವಕಾಶ ಮಾಡಿಕೊಟ್ಟ ಡಿಎಸ್ಪಿ (ಪೊಲೀಸ್ ಉಪ ಅಧೀಕ್ಷಕ)ಯನ್ನು ಹರ್ಯಾಣ ಸರ್ಕಾರ ಅಮಾನತುಗಳಿಸಿದೆ. ಈ ರಾಮ್ ರಹೀಮ್ ಸಿಂಗ್ ಜುಲೈ ತಿಂಗಳಲ್ಲಿ ಆರೋಗ್ಯ ತಪಾಸಣೆಗೆಂದು ದೆಹಲಿಯ ಏಮ್ಸ್ಗೆ ಹೋಗಿದ್ದರು. ಆ ವೇಳೆ ಕೆಲವು ಮಂದಿ ರಹೀಮ್ ಸಿಂಗ್ ಭೇಟಿಗೆ ಆಗಮಿಸಿದ್ದರು. ಕಾನೂನು ಪ್ರಕಾರ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ಕೊಡುವಂತಿರಲಿಲ್ಲ. ಆದರೆ ಭದ್ರತಾ ದೃಷ್ಟಿಯಿಂದ ಜತೆಗಿದ್ದ ಡಿಎಸ್ಪಿ ಅನಧಿಕೃತವಾಗಿ ಅವಕಾಶ ಮಾಡಿಕೊಟ್ಟಿದ್ದರು ಎಂದು ಹೇಳಲಾಗಿದೆ. ಇದೀಗ ಅವರನ್ನು ಹರ್ಯಾಣ ಸರ್ಕಾರ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.
ಡಿಎಸ್ಪಿ ಶಂಶೇರ್ ಸಿಂಗ್ ಅಮಾನತುಗೊಂಡ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅವರ ಸಸ್ಪೆಂಡ್ ಆದೇಶದಲ್ಲಿ, ಶಂಶೇರ್ ಸಿಂಗ್ ಅಮಾನತು ಅವಧಿಯಲ್ಲಿ ತಮ್ಮ ಸ್ವಸ್ಥಾನ ಬಿಟ್ಟು, ಅನುಮತಿ ಇಲ್ಲದೆ ಎಲ್ಲಿಗೂ ಹೋಗುವಂತಿಲ್ಲ ಎಂದು ಹರ್ಯಾಣ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಅರೋರಾ ನೀಡಿದ್ದಾರೆ. ಜುಲೈನಲ್ಲಿ ರಹೀಮ್ ಸಿಂಗ್ ವೈದ್ಯಕೀಯ ತಪಾಸಣೆಗೆ ಹೋದಾಗ, ಅವರನ್ನು ಭೇಟಿಯಾಗಲು ನಾಲ್ವರು ಆಗಮಿಸಿದ್ದರು. ಅವರೆಲ್ಲರನ್ನೂ ರಹೀಮ್ ಬಳಿ ಹೋಗಲು ಬಿಡಲಾಗಿತ್ತು. ಏಮ್ಸ್ನಿಂದ ವಾಪಸ್ ರೋಹ್ಟಕ್ ಜೈಲಿಗೆ ಬಂದ ಬಳಿಕ ಈ ವಿಚಾರ ಹೊರಬಿದ್ದಿತ್ತು. ಅದು ಹರ್ಯಾಣ ಕಾರಾಗೃಹ ಸಚಿವಾಲಯದ ಸಚಿವ ರಂಜಿತ್ ಸಿಂಗ್ ಚೌತಾಲಾ ಗಮನಕ್ಕೆ ಬಂದು, ತನಿಖೆಗೆ ಆದೇಶಿಸಲಾಗಿತ್ತು.
ಇದನ್ನೂ ಓದಿ: Indian Railways: ರೈಲ್ವೇ ಇಲಾಖೆಯ ಉದ್ಯೋಗ ಹುಡುಕುವುದು ಹೇಗೆ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ
Video: ಬೆಂಕಿ ತಗುಲಿದ್ದ ಕಟ್ಟಡದಿಂದ ಇಬ್ಬರು ಮಕ್ಕಳ ರಕ್ಷಣೆ ಮಾಡಿದ 6 ಮಂದಿ; ಇವರ ಮಾನವ ಏಣಿಗೆ ಮೆಚ್ಚುಗೆಗಳ ಸುರಿಮಳೆ
Published On - 6:12 pm, Tue, 24 August 21