ಹರ್ಯಾಣ ಸರ್ಕಾರಿ ಶಾಲೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಾವಲುಗಾರನ ಶವ ಪತ್ತೆ, ಪ್ರಾಂಶುಪಾಲರು ಸೇರಿ ಮೂವರು ಶಿಕ್ಷಕರ ಬಂಧನ

|

Updated on: Sep 01, 2023 | 8:51 AM

ಹರ್ಯಾಣ ಜಿಂದ್‌ನ ಕರ್ಸಿಂಧು ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ 57 ವರ್ಷದ ಕಾವಲುಗಾರ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉಚ್ಚನ ಬ್ಲಾಕ್‌ನ ಮಂಡಿ ಕಲನ್ ಗ್ರಾಮದ ರಿಷಿಪಾಲ್ ಕರಸಿಂಧು ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಸ್ವೀಪರ್ ಕಮ್ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಶಾಲೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಹರ್ಯಾಣ ಸರ್ಕಾರಿ ಶಾಲೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಾವಲುಗಾರನ ಶವ ಪತ್ತೆ, ಪ್ರಾಂಶುಪಾಲರು ಸೇರಿ ಮೂವರು ಶಿಕ್ಷಕರ ಬಂಧನ
ಸಾವು
Follow us on

ಹರ್ಯಾಣ ಜಿಂದ್‌ನ ಕರ್ಸಿಂಧು ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ 57 ವರ್ಷದ ಕಾವಲುಗಾರ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉಚ್ಚನ ಬ್ಲಾಕ್‌ನ ಮಂಡಿ ಕಲನ್ ಗ್ರಾಮದ ರಿಷಿಪಾಲ್ ಕರಸಿಂಧು ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಸ್ವೀಪರ್ ಕಮ್ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಶಾಲೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ರಿಷಿಪಾಲ್ ಶವದ ಬಳಿ ಸಿಕ್ಕಿರುವ ಸೂಸೈಡ್ ನೋಟ್ ಹಾಗೂ ಅವರ ಪುತ್ರನ ದೂರಿನ ಆಧಾರದ ಮೇಲೆ ಪ್ರಾಂಶುಪಾಲರು ಸೇರಿದಂತೆ ಮೂವರು ಶಿಕ್ಷಕರ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಉಚ್ಚನ ಠಾಣೆ ಪ್ರಭಾರಿ ರವೀಂದ್ರ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: PSI Recruitment Scam: ಸಿಐಡಿ ವಿಚಾರಣೆ ಎದುರಿಸಿದ್ದ ಗಣಪತಿ ಭಟ್ ನೇಣು ಬಿಗಿದು ಆತ್ಮಹತ್ಯೆ

ಶಾಲೆಯ ಪ್ರಾಂಶುಪಾಲ ಚೂಡಿಯಾ ರಾಮ್ ಮತ್ತು ಶಿಕ್ಷಕರಾದ ಧರಂಪಾಲ್ ಮತ್ತು ಹರ್ಕೇಶ್ ಶಾಸ್ತ್ರಿ ಅವರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಿಷಿಪಾಲ್ ತನ್ನ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ