ರಾಜ್ಯದಲ್ಲಿ ಹೆಚ್ಚಾದ ರೈತರ ಆತ್ಮಹತ್ಯೆ ಪ್ರಕರಣಗಳು: ಆಗಸ್ಟ್ ಅಂತ್ಯಕ್ಕೆ 180 ಕ್ಕೆ ಏರಿಕೆ
ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ಸಾಲದ ಸುಳಿಯಿಂದ ಹೊರಬರಲಾರದೇ ರೈತರು ಆತ್ಮಹತ್ಯೆ ಶರಣಾಗುತ್ತಿದ್ದಾರೆ. ಜುಲೈ ಅಂತ್ಯದಲ್ಲಿ 137 ಇದ್ದ ರೈತರ ಆತ್ಮಹತ್ಯೆ ಪ್ರಕರಣಗಳು, ಆಗಸ್ಟ್ ಅಂತ್ಯಕ್ಕೆ 180 ಕ್ಕೆ ಏರಿಕೆ ಆಗಿದೆ. ಆ ಮೂಲಕ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ ಹೋಗಿ ಸಾಲಭಾದೆ ತಾಳಲಾರದೇ ಅನ್ನದಾತ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಬೆಂಗಳೂರು, ಆಗಸ್ಟ್ 31: ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ಸಾಲದ ಸುಳಿಯಿಂದ ಹೊರಬರಲಾರದೇ ರೈತರು ಆತ್ಮಹತ್ಯೆ ಶರಣಾಗುತ್ತಿದ್ದಿ, ರಾಜ್ಯದಲ್ಲಿ ರೈತರ (farmer) ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಜುಲೈ ಅಂತ್ಯದಲ್ಲಿ 137 ಇದ್ದ ರೈತರ ಆತ್ಮಹತ್ಯೆ ಪ್ರಕರಣಗಳು, ಆಗಸ್ಟ್ ಅಂತ್ಯಕ್ಕೆ 180 ಕ್ಕೆ ಏರಿಕೆ ಆಗಿದೆ. ಜುಲೈ ತಿಂಗಳಲ್ಲಿ ಅತಿಯಾದ ಮಳೆಯಿಂದ ರೈತರಿಗೆ ಅಪಾರ ಹಾನಿ ಉಂಟಾಗಿದೆ. ಬಳಿಕ ಮಳೆ ಆಗಿದೆ ಅಂತ ರೈತರು ಬಿತ್ತನೆ ಮಾಡಿದ್ದರು. ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆ ಕಾರಣದಿಂದ ರೈತರು ಸಂಕಷ್ಟಕ್ಕೀಡಾಗಿದ್ದರು.
ರಾಜ್ಯಾದ್ಯಂತ 82.3 ಲಕ್ಷ ಹೆಕ್ಟೇರ್ನಲ್ಲಿ 81% ವಿವಿಧ ಬೆಳೆಗಳ ಬಿತ್ತನೆ
ಆಗಸ್ಟ್ 25 ರವರೆಗೆ 66.7 ಲಕ್ಷ ಹೆಕ್ಟೇರ್‌ಗಳಲ್ಲಿ ರಾಜ್ಯಾದ್ಯಂತ 82.3 ಲಕ್ಷ ಹೆಕ್ಟೇರ್ ಗುರಿಯಲ್ಲಿ 81% ವಿವಿಧ ಬೆಳೆಗಳನ್ನ ರೈತರು ಬಿತ್ತನೆ ಮಾಡಿದ್ದರು. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ ಹೋಗಿ ಸಾಲಭಾದೆ ತಾಳಲಾರದೇ ಅನ್ನದಾತ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ದಾಳಿಂಬೆ ಬೆಳೆಗೆ ಅಂಟಿದ ವಿಚಿತ್ರ ರೋಗ; ಬೆಳೆ ಬೆಳೆಯಲು ರೈತರ ಹಿಂದೇಟು
ಆತ್ಮಹತ್ಯೆ ಮಾಡಿಕೊಂಡು ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಎಕ್ಸ್ ಗ್ರೇಷಿಯಾ ಮೂಲಕ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಏಪ್ರೀಲ್ 1 ರಿಂದ 180 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ 79 ಮಾತ್ರ ಪರಿಶೀಲನೆ ಮಾಡಿದ್ದು, ಇದರಲ್ಲಿ 68 ಪ್ರಕರಣಗಳು ಎಕ್ಸ್ ಗ್ರೇಶಿಯಾಕ್ಕೆ ಅರ್ಹವಾಗಿವೆ.
ಇದನ್ನೂ ಓದಿ: ಮುಚಖಂಡಿ ಕೆರೆಗೆ ಮತ್ತೆ ನೀರು ತುಂಬಿಸಲು ಕಾಂಗ್ರೆಸ್ ಒಲವು: ಈಗಲಾದರೂ ತುಂಬುತ್ತಾ ಐತಿಹಾಸಿಕ ಕೆರೆ?
11 ಪ್ರಕರಣ ತಿರಸ್ಕೃತಗೊಂಡಿದ್ದು, 101 ಪ್ರಕರಣ ಪರಿಶೀಲನೆಯಲ್ಲಿವೆ. ಜಿಲ್ಲೆಯ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಪರಿಶೀಲನೆ ಒಳಗೊಳ್ಳುತ್ತದೆ. ಬರ ತೀವ್ರಗೊಂಡಿರುವುದರಿಂದ ರೈತ ಕುಟುಂಬಕ್ಕೆ ಪರಿಹಾರ ಪ್ರಕ್ರಿಯೆ ವೇಗ ಗೊಳಿಸಬೇಕಿದೆ.
ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆ
ಸಾಲ ಸೂಲ ಮಾಡಿಕೊಂಡಿದ್ದವರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಮಳೆರಾಯ ದಿಢೀರನೇ ಕೈಕೊಟ್ಟಿದ್ದು, ಅನ್ನದಾತ ಕಂಗಲಾಗಿದ್ದ. ಅಕ್ಕಪಕ್ಕದ ನದಿ ನೀರನ್ನಾದರೂ ಹರಿಸೋಣವೆಂದರೆ, ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆಯೂ ಕಾಡುತ್ತಿದೆ. ಆರು ಗಂಟೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಕೇವಲ 2 ಗಂಟೆ ಮಾತ್ರ ಪೂರೈಕೆ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.