ರಾಷ್ಟ್ರರಾಜಧಾನಿ (National Capital Region)ಯಲ್ಲಿ ಇಂದು ಮುಂಜಾನೆಯಿಂದ ಸಿಕ್ಕಾಪಟೆ ಮಳೆ (Heavy Rainfall) ಸುರಿಯುತ್ತಿದೆ. ಕಳೆದ ಹಲವು ದಿನಗಳಿಂದಲೂ ವಿಪರೀತ ಸೆಖೆ, ಆರ್ದ್ರ ವಾತಾವರಣ ಇದ್ದ ದೆಹಲಿಯನ್ನು ಇಂದಿನ ಮಳೆ ತಂಪಾಗಿಸಿದೆ. ಆದರೆ ತುಸು ಹೆಚ್ಚಾಗಿಯೇ ಮಳೆ ಸುರಿಯುತ್ತಿರುವುದರಿಂದ ಒಂದಷ್ಟು ಅವ್ಯವಸ್ಥೆಗಳು ಸಹಜವಾಗಿಯೇ ಆಗಿವೆ. ಇನ್ನೂ ಮೂರ್ನಾಲ್ಕು ತಾಸುಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಸದ್ಯ ದೆಹಲಿಯಲ್ಲಿ ಸಾಧಾರಣ ಮಳೆಯಾಗುತ್ತಿದ್ದರೂ, ಕೆಲವೇ ಗಂಟೆಗಳಲ್ಲಿ ದೆಹಲಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಇದೇ ವಾತಾವರಣ ಆಗಸ್ಟ್ 23ರವರೆಗೂ ಮುಂದುವರಿಯಲಿದೆ ಎಂದೂ ಅಂದಾಜಿಸಿದೆ.
ವಾಹನ ಸಂಚಾರಕ್ಕೆ ತೊಡಕು
ಇನ್ನು ದೆಹಲಿ ಮತ್ತು ಹರ್ಯಾಣಗಳ ಹಲವೆಡೆ ಬೆಳಗ್ಗೆಯಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಪ್ರಮುಖ ರಸ್ತೆಗಳೆಲ್ಲ ಜಲಾವೃತಗೊಂಡಿದ್ದು, ವಾಹನ ಸಂಚಾರ ಮತ್ತು ನಾಗರಿಕರ ಓಡಾಟಕ್ಕೆ ಅಡಚಣೆಯಾಗಿದೆ. ಹೀಗೆ ನೀರಿನಿಂದ ತುಂಬಿರುವ ರಸ್ತೆಗಳ ಬಗ್ಗೆ ದೆಹಲಿ ಟ್ರಾಫಿಕ್ ಪೊಲೀಸರು ಟ್ವಿಟರ್ ಮೂಲಕ ಜನರನ್ನು ಎಚ್ಚರಿಸುತ್ತಿದ್ದಾರೆ. ಆಜಾದ್ ಮಾರ್ಕೆಟ್ ಅಂಡರ್ಪಾಸ್ನಲ್ಲಿ 1.5 ಅಡಿಗಳಷ್ಟು ನೀರು ನಿಂತಿದೆ. ಹೀಗಾಗಿ ಇಲ್ಲಿ ಸಂಚಾರ ಸಾಧ್ಯವಿಲ್ಲ. ಇನ್ನು ಮಿಂಟೋ ಸೇತುವೆಯ ಎರಡೂ ರಸ್ತೆಗಳನ್ನೂ ಕ್ಲೋಸ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
#WATCH | Parts of Delhi witness rain showers; visuals from Vijay Chowk pic.twitter.com/WzA8Wchp0U
— ANI (@ANI) August 20, 2021
ರಸ್ತೆಗಳೆಲ್ಲ ನದಿಗಳಾಂತಗಿರುವುದರಿಂದ ಕನ್ನಾಟ್ ಪ್ರದೇಶದಲ್ಲಿ ಸಂಚಾರ ತುಂಬ ಕಷ್ಟವಾಗಿದೆ. ಪ್ರಗತಿ ಮೈದಾನದಲ್ಲಿ ಹಲವು ಇಂಚುಗಳಷ್ಟು ನೀರು ನಿಂತಿದ್ದು, ಅದರ ಸೆಳೆತಕ್ಕೆ ವಾಹನಗಳು ಸಮತೋಲನ ಕಳೆದುಕೊಳ್ಳುತ್ತಿವೆ. ಐಟಿಒ, ಮೂಲ್ಚಾಂದ್ ಅಂಡರ್ಪಾಸ್, ಲಜಪತ್ ನಗರ್ ಸೇರಿ ಹಲವೆಡೆ ಪರಿಸ್ಥಿತಿ ಹೀಗೇ ಇದೆ. ಇನ್ನು ಗಾಳಿಗೆ ಮರಗಳು ಧರೆಗೆ ಉರುಳಿಬೀಳುತ್ತಿವೆ.
ಸಫ್ದರ್ಜಂಗ್ನಲ್ಲಿ ವಿಪರೀತ ಮಳೆ
ಇನ್ನು ದೆಹಲಿಯ ಸಫ್ದರ್ಜಂಗ್ನಲ್ಲಿ ನಿನ್ನೆ ತಡರಾತ್ರಿ 2.30ರಿಂದ ಮುಂಜಾನೆ 5.30 ವರೆಗೆ 73.2 ಮಿಮೀ ಮಳೆಯಾಗಿದೆ. ಕಳೆದ 24ಗಂಟೆಯಲ್ಲಿ ಇಲ್ಲಿ 138.8 ಮಿಮೀ ಮಳೆಯಾಗಿದೆ. ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ನೊಯ್ಡಾದಲ್ಲೂ ಭಾರಿ ಮಳೆ ಸುರಿದಿದ್ದು, ರಾಷ್ಟ್ರೀಯ ದಲಿತ ಪ್ರೇರಣ ಸ್ಥಳದಲ್ಲಿ ನೀರು ತುಂಬಿದೆ. ಹೀಗಾಗಿ ಪಾದಚಾರಿಗಳು ತೀರ ಕಷ್ಟಪಡುವಂತಾಗಿದೆ.
#WATCH | Heavy rain lashes parts of Haryana; visuals from Sector 35, Faridabad pic.twitter.com/R677Ii6Qs9
— ANI (@ANI) August 21, 2021
ಭಾರತೀಯ ಹವಾಮಾನ ಇಲಾಖೆಯ ವಾರದ ಅಂದಾಜಿನ ಪ್ರಕಾರ, ದೆಹಲಿಯಲ್ಲಿ ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 31 ಡಿಗ್ರಿ ಸೆಲ್ಸಿಯಷ್ಟ್ ಉಷ್ಣತೆ ಇರಲಿದೆ. ಸದ್ಯ ದೆಹಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
Delhi | Tree uproots at Mandi House as heavy rainfall hits the national capital, restoration work underway pic.twitter.com/QGVe5mAdYo
— ANI (@ANI) August 21, 2021
#WATCH | Delhi: Vehicular movement at Mehrauli-Badarpur road affected due to waterlogging following heavy rainfall pic.twitter.com/dywoohexNy
— ANI (@ANI) August 21, 2021
Onam 2021: ದೇಶದ ಜನರಿಗೆ ಓಣಂ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್
(Heavy rain lashes parts Of Delhi from today Morning)