Onam 2021: ದೇಶದ ಜನರಿಗೆ ಓಣಂ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್
ಓಣಂ ಮಲಯಾಳಿಗಳಿಗೆ ದೊಡ್ಡ ಹಬ್ಬವಾಗಿದ್ದು, ನಮ್ಮ ದೇಶದಲ್ಲಿ ಕೇರಳದಲ್ಲಿ ಅತ್ಯಂತ ಸಂಭ್ರಮದಿಂದ, ವಿಶೇಷವಾಗಿ ಆಚರಿಸಲ್ಪಡುತ್ತದೆ. ಜಗತ್ತಿನಾದ್ಯಂತ ಇರುವ ಮಲಯಾಳಿಗಳು ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿ PM Narendra Modi) ಯವರು ಇಂದು ದೇಶದ ಜನರಿಗೆ ಓಣಂ ಹಬ್ಬ (Onam Festival)ದ ಶುಭಾಶಯ ತಿಳಿಸಿದ್ದಾರೆ. ಟ್ವೀಟ್ (Tweet) ಮಾಡಿರುವ ಪ್ರಧಾನಿ ಮೋದಿ, ಸಕಾರಾತ್ಮಕತೆ, ಉತ್ಸಾಹ, ಭ್ರಾತೃತ್ವ ಮತ್ತು ಸಾಮರಸ್ಯವನ್ನು ಸಾರುವ ಓಣಂ ಹಬ್ಬದ ಶುಭಾಶಯಗಳನ್ನು ದೇಶದ ಜನರಿಗೆ ತಿಳಿಸಲು ಬಯಸುತ್ತೇನೆ. ಪ್ರತಿಯೊಬ್ಬರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
Best wishes on the special occasion of Onam, a festival associated with positivity, vibrancy, brotherhood and harmony. I pray for everyone’s good health and wellbeing.
— Narendra Modi (@narendramodi) August 21, 2021
ಹಾಗೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ಸಹ ಟ್ವೀಟ್ ಮಾಡಿ ಓಣಂ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಓಣಂ ಸಂಭ್ರಮದಲ್ಲಿರುವ ಎಲ್ಲರಿಗೂ ಹಬ್ಬದ ಶುಭಾಶಯಗಳು. ಓಣಂ, ಪೃಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಆಚರಿಸುವ ಹಬ್ಬವಾಗಿದೆ. ಈ ಶುಭದಿನದಂದು ಪ್ರತಿಯೊಬ್ಬ ನಾಗರಿಕನ ಆಯುರಾರೋಗ್ಯ, ಸಮೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
Onam greetings to all our fellow citizens! This festival is a celebration of the new harvest. It highlights the tireless work of farmers. It is an occasion to express gratitude to mother nature. I wish progress and prosperity for all fellow citizens.
— President of India (@rashtrapatibhvn) August 21, 2021
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಟ್ವೀಟ್ ಮೂಲಕ ಓಣಂ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಓಣಂ ಹಬ್ಬದ ಈ ಶುಭ ಸಂದರ್ಭದಲ್ಲಿ ನಾನು ಪ್ರತಿಯೊಬ್ಬರಿಗೂ ಹಾರ್ದಿಕವಾದ ಶುಭಾಶಯ ಕೋರುತ್ತಿದ್ದೇನೆ. ದೇಶದ ಹಲವು ಭಾಗಗಳಲ್ಲಿ ಆಚರಿಸಲ್ಪಡುವ ಓಣಂ ಹಬ್ಬ, ಸುಗ್ಗಿಯ ಪ್ರಾರಂಭವನ್ನು ಸಂಕೇತಿಸುತ್ತದೆ. ಹಾಗೇ, ಕೇರಳದ ಮಹಾನ್ ರಾಜ ಮಹಾಬಲಿಯ ಸ್ಮರಣೆಯೂ ಹೌದು. ರಾಜ ಬಹಾಬಲಿ ತನ್ನ ಉದಾರತೆ, ಉದಾತ್ತತೆಗಾಗಿಯೇ ಹೆಸರು ಮಾಡಿದ್ದ ಎಂದು ವೆಂಕಯ್ಯ ನಾಯ್ಡು ಪುರಾಣವನ್ನು ನೆನಪಿಸಿಕೊಂಡಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, ಉತ್ಸಾಹ, ಹುರುಪು ತುಂಬ ಓಣಂ ಹಬ್ಬ, ಶಾಂತಿ, ಸಮೃದ್ಧಿ, ಸಂತೋಷವನ್ನು ಹೊತ್ತು ತರಲಿ ಎಂದಿದ್ದಾರೆ.
My warm greetings on the auspicious occasion of Onam today. It marks the beginning of harvest season in various parts of our country. Onam also honours the memory of great King Mahabali of Kerala, who is celebrated for his nobility & generosity. #Onam
— Vice President of India (@VPSecretariat) August 21, 2021
ಓಣಂ ಮಲಯಾಳಿಗಳಿಗೆ ದೊಡ್ಡ ಹಬ್ಬವಾಗಿದ್ದು, ನಮ್ಮ ದೇಶದಲ್ಲಿ ಕೇರಳದಲ್ಲಿ ಅತ್ಯಂತ ಸಂಭ್ರಮದಿಂದ, ವಿಶೇಷವಾಗಿ ಆಚರಿಸಲ್ಪಡುತ್ತದೆ. ಜಗತ್ತಿನಾದ್ಯಂತ ಇರುವ ಮಲಯಾಳಿಗಳು ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಇದು 10 ದಿನಗಳ ಹಬ್ಬವಾಗಿದೆ. ಸುಗ್ಗಿಯ ಪ್ರಾರಂಭದಿಂದ ಹಿಡಿದು ವಿಷ್ಣುವಿನ ವಾಮನ ಅವತಾರ, ಮಹಾಬಲಿ ರಾಜನ ಪೂಜೆಗಳನ್ನು ಮಾಡಲಾಗುತ್ತದೆ. ಆಗಸ್ಟ್ 12ರಿಂದಲೇ ಓಣಂ ಶುರುವಾಗಿದ್ದು, ಆಗಸ್ಟ್ 23ಕ್ಕೆ ಮುಕ್ತಾಯವಾಗುತ್ತದೆ.
ಇದನ್ನೂ ಓದಿ: ‘ಪ್ರಭಾಕರ್ ಕಾಲಿಗೆ ಹುಳ ಆಗಿತ್ತು ಎಂಬುದೆಲ್ಲ ಸುಳ್ಳು, ಆದರೆ ಪೆಟ್ಟಾಗಿದ್ದು ನಿಜ’; ಸರಿಗಮ ವಿಜಿ ತೆರೆದಿಟ್ಟ ಸತ್ಯ
ಹುಟ್ಟುಹಬ್ಬದ ಹೊಸ್ತಿಲಲ್ಲಿ ಮೆಗಾ ಸ್ಟಾರ್ ಚಿರಂಜೀವಿಗೆ ನಿರ್ದೇಶಕರ ಮೇಲೆ ಅಸಮಾಧಾನ; ಇದಕ್ಕೆ ಕಾರಣ ಏನು?
Published On - 9:53 am, Sat, 21 August 21