ಆವಂತಿಪೋರಾದಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾಪಡೆ
ಇದೀಗ ಹತ್ಯೆಯಾದ ಮೂವರು ಭಯೋತ್ಪಾದಕರಲ್ಲಿ, ಇಬ್ಬರು ಉಗ್ರರು ಜುಲೈ 23ರಂದು ಕಾಶ್ಮೀರದ ಸರ್ಕಾರಿ ಹೈಸ್ಕೂಲ್ ಜವಾನನ್ನು ಹತ್ಯೆ ಪ್ರಕರಣದಲ್ಲಿ ಬೇಕಾದವರಾಗಿದ್ದರು ಎಂದು ಕಾಶ್ಮೀರ ಐಜಿಪಿ ತಿಳಿಸಿದ್ದಾರೆ.

ಶ್ರೀನಗರ: ಜಮ್ಮು-ಕಾಶ್ಮೀರದ ಅವಂತಿಪೋರಾದ ನಾಗಬರೇನ್ ಟ್ರಾಲ್ನಲ್ಲಿ ಶನಿವಾರ ಮುಂಜಾನೆ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಈ ಮೂವರೂ ಉಗ್ರರು ಜೈಶ್-ಇ-ಮೊಹಮ್ಮದ್ (JeM) ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಇನ್ನೂ ಕೂಡ ಕಾರ್ಯಾಚರಣೆ ನಡೆಯುತ್ತಿದೆ. ಇನ್ನಷ್ಟು ಮಂದಿ ಭಯೋತ್ಪಾದಕರು ಅಡಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರನ್ನು ಸೆರೆಹಿಡಿಯಲು ಭದ್ರತಾ ಪಡೆಗಳು ಮುಂದಾಗಿವೆ.
ಕಾಶ್ಮೀರದ ಪೊಲೀಸರು ಮತ್ತು ಭಾರತೀಯ ಸೇನಾಪಡೆಗಳು ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ತಿಳಿಸಿರುವ ಕಾಶ್ಮೀರ ಪೊಲೀಸರು, ಹತ್ಯೆಯಾದ ಮೂವರು ಉಗ್ರರು ಜೈಷ್-ಇ-ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಗೊತ್ತಾಗಿದೆ. ಆದರೆ ಇವರ ಹೆಸರು, ಮತ್ತಿತರ ವಿವರಗಳಿನ್ನೂ ಲಭ್ಯವಾಗಿಲ್ಲ ಎಂದಿದ್ದಾರೆ. ಶುಕ್ರವಾರ ಮುಂಜಾನೆ ಆವಂತಿಪೋರಾದ ಖ್ರೆ, ಪಾಂಪೋರ್ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ ಕಾರ್ಯಾಚರಣೆ ನಡೆಸಿದ್ದವು. ಆಗಲೇ ಇಬ್ಬರು ಉಗ್ರರನ್ನು ಕೊಂದಿದ್ದರು. ಸದ್ಯ ಮೃತರಾದ ಎಲ್ಲ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನೂ ರಕ್ಷಣಾ ಪಡೆಗಳು ವಶಪಡಿಸಿಕೊಂಡಿವೆ.
ಇದೀಗ ಹತ್ಯೆಯಾದ ಮೂವರು ಭಯೋತ್ಪಾದಕರಲ್ಲಿ, ಇಬ್ಬರು ಉಗ್ರರು ಜುಲೈ 23ರಂದು ಕಾಶ್ಮೀರದ ಸರ್ಕಾರಿ ಹೈಸ್ಕೂಲ್ ಜವಾನನ್ನು ಹತ್ಯೆ ಪ್ರಕರಣದಲ್ಲಿ ಬೇಕಾದವರಾಗಿದ್ದರು. ಆ ಜವಾನನ ಹೆಸರು ಮುಸೈಬ್ ಮುಷ್ತಾಕ್ ಎಂದಾಗಿತ್ತು ಎಂದು ಕಾಶ್ಮೀರ ಐಜಿಪಿ ವಿಜಯ್ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸೋಮವಾರದಿಂದ ಶಾಲೆ ಆರಂಭ; ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಕಡ್ಡಾಯವಾಗಿ ಪಾಲಿಸಬೇಕಾದ ಅಂಶಗಳು ಇಲ್ಲಿವೆ
ಸೊನಾಲಿ ಬೇಂದ್ರೆಗೆ ರಾತ್ರಿ ಕರೆ ಮಾಡಿ ‘ಓಡಿ ಹೋಗಿ ಮದ್ವೆ ಆಗೋಣ ಬಾ’ ಎಂದಿದ್ರಾ ಸುನೀಲ್ ಶೆಟ್ಟಿ? ಇಲ್ಲಿದೆ ಅಸಲಿ ವಿಷಯ
Published On - 8:57 am, Sat, 21 August 21




