ಹೈದರಾಬಾದ್ ಸೇರಿ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ: ಹಳದಿ ಅಲರ್ಟ್ ಘೋಷಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 09, 2022 | 10:27 AM

ತೆಲಂಗಾಣದ ರಂಗಾರೆಡ್ಡಿ, ಮೇಡಕ್, ಸಂಗಾರೆಡ್ಡಿ, ಸಿದ್ದಪೇಟ್ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.

ಹೈದರಾಬಾದ್ ಸೇರಿ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ: ಹಳದಿ ಅಲರ್ಟ್ ಘೋಷಣೆ
ಮಳೆಯಿಂದಾಗಿ ಹೈದರಾಬಾದ್​ನ ರಸ್ತೆಗಳ ಮೇಲೆ ನೀರು ಹರಿಯಿತು.
Follow us on

ಹೈದರಾಬಾದ್: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ಹಳದಿ ಅಲರ್ಟ್​ ಘೋಷಿಸಿ, ಮುನ್ನೆಚ್ಚರಿಕೆ ನೀಡಿದೆ. ಹೈದರಾಬಾದ್​ನ ವಿವಿಧೆಡೆ ನಿನ್ನೆ (ಅ 8) ಸಂಜೆ ಭಾರೀ ಮಳೆಯಾಗಿದ್ದು, ರಸ್ತೆಗಳ ಮೇಲೆ ನೀರು ಹರಿಯಿತು. ಜುಬಿಲಿ ಹಿಲ್ಸ್, ಬಂಜಾರಾ ಹಿಲ್ಸ್, ಅತ್ತಾಪುರ, ಮಣಿಕೊಂಡ, ಲಿಂಗಮ್​ಪಲ್ಲಿ, ಖೈರಟಾಬಾದ್, ತೊಲಿಚೌಕಿ, ಮಿಯಾಪುರ್ ಮತ್ತು ಶೇಖ್​ಪೇಟ್ ಪ್ರದೇಶದಲ್ಲಿ ವ್ಯಾಪಾಕವಾಗಿ ಮಳೆ ಸುರಿಯಿತು.

ಕಾಕತೀಯ ಹಿಲ್ಸ್, ಮಾದಾಪುರ ಪ್ರದೇಶಗಳಲ್ಲಿ ಅತಿಹೆಚ್ಚು, ಅಂದರೆ 7.9 ಸೆಂಮೀ ಮಳೆಯಾಗಿದೆ. ಜುಬಿಲಿ ಹಿಲ್ಸ್​ನಲ್ಲಿ 7.6, ಹಾಫೀಜ್​ಪೆಟ್​ನಲ್ಲಿ 6 ಸೆಂಮೀ ಮಳೆಯಾಗಿದೆ. ಹೈದರಾಬಾದ್​ ನಗರಪಾಲಿಕೆಯ ವಿಪತ್ತು ಸ್ಪಂದನಾ ಘಟಕದ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ನಿಂತಿರುವ ನೀರು ಹೊರಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ. ಮಳೆಯು ಮತ್ತಷ್ಟು ದಿನಗಳ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.

ತೆಲಂಗಾಣದ ರಂಗಾರೆಡ್ಡಿ, ಮೇಡಕ್, ಸಂಗಾರೆಡ್ಡಿ, ಸಿದ್ದಪೇಟ್ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ. ಖಮ್ಮಂ, ಸೂರ್ಯಪೇಟ್, ರಂಗಾರೆಡ್ಡಿ, ನಲ್ಗೊಂಡ, ಸಿರ್​ಸಿಲಾ ಜಿಲ್ಲಾಗಳಲ್ಲಿ ವ್ಯಾಪಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಿಸಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿರುವುದರಿಂದ ನೆರೆಯ ಆಂಧ್ರಪ್ರದೇಶದಲ್ಲಿಯೂ ಮಳೆಯಾಗುತ್ತಿದೆ. ತಿರುಪತಿ, ವಿಶಾಖಪಟ್ಟಣಂ, ಗುಂಟೂರು ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ತಿರುಪತಿಯಲ್ಲಿ ಶನಿವಾರ ವ್ಯಾಪಕವಾಗಿ ಮಳೆಯಾಯಿತು. ದರ್ಶನಕ್ಕಾಗಿ ಪಾಳಿಯಲ್ಲಿ ನಿಂತಿದ್ದ ಭಕ್ತರು ನೆನೆಯದಂತೆ ರಕ್ಷಿಸಿಕೊಳ್ಳಲು ಓಡಬೇಕಾಯಿತು.

ಕರ್ನಾಟಕದಲ್ಲಿ ಇಂದಿನಿಂದ 3 ದಿನ ವ್ಯಾಪಕ ಮಳೆ

ರ್ನಾಟಕದ (Karnataka Rain) ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಅ. 11ರವರೆಗೂ ಭಾರೀ ಮಳೆಯಾಗಲಿದೆ. ಇಂದಿನಿಂದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಅ. 11ರಂದು ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಯಾದಗಿರಿಯಲ್ಲಿ ಹಳದಿ ಅಲರ್ಟ್​ (Yellow Alert) ಘೋಷಿಸಲಾಗಿದೆ.

ಕರ್ನಾಟಕಕ್ಕೆ ಅಕ್ಟೋಬರ್ 2ನೇ ವಾರದಲ್ಲಿ ಹಿಂಗಾರು ಪ್ರವೇಶವಾಗಲಿದೆ. ಅಲ್ಲಿಯ ತನಕ ಮುಂಗಾರು ಮಳೆ ಮುಳೆ ಮುಂದುವೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ ಜೊತೆ ಮಳೆಯಾಗುವ ಸಾಧ್ಯತೆಯಿದೆ.

Published On - 10:27 am, Sun, 9 October 22