Kappa Covid Variant ಉತ್ತರಪ್ರದೇಶದಲ್ಲಿ ಕೊವಿಡ್-19 ಕಪ್ಪಾ ತಳಿಯ ಎರಡು ಪ್ರಕರಣ ಪತ್ತೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 09, 2021 | 4:30 PM

ಎರಡೂ ರೂಪಾಂತರಗಳು ರಾಜ್ಯಕ್ಕೆ ಹೊಸತಲ್ಲ. ರಾಜ್ಯದಲ್ಲಿ ಜೀನೋಮ್ ಅನುಕ್ರಮಣಿಕೆಯ ಸೌಲಭ್ಯವನ್ನು ಹೆಚ್ಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಡೆಸಿದ ಕೊವಿಡ್ ಪರಿಶೀಲನಾ ಸಭೆಯ ಪ್ರಕಟಣೆ ತಿಳಿಸಿದೆ.

Kappa Covid Variant ಉತ್ತರಪ್ರದೇಶದಲ್ಲಿ  ಕೊವಿಡ್-19 ಕಪ್ಪಾ ತಳಿಯ ಎರಡು ಪ್ರಕರಣ ಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ಲಖನೌ: ವ್ಯಾಪಕವಾಗಿ ಹರಡಬಲ್ಲ ಕೊವಿಡ್-19ನ ಕಪ್ಪಾ ತಳಿ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಕಪ್ಪಾ ತಳಿಯ ಎರಡು ಪ್ರಕರಣಗಳು ಇಲ್ಲಿ ಪತ್ತೆಯಾಗಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಅಧಿಕೃತ ಹೇಳಿಕೆಯ ಪ್ರಕಾರ ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲನ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಈ ತಳಿ ಪತ್ತೆಯಾಗಿದೆ.

ಕೊವಿಡ್-19 ರ ಡೆಲ್ಟಾ ಪ್ಲಸ್ ರೂಪಾಂತರವು 107 ಮಾದರಿಗಳಲ್ಲಿ ಕಂಡುಬಂದಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಎರಡೂ ರೂಪಾಂತರಗಳು ರಾಜ್ಯಕ್ಕೆ ಹೊಸತಲ್ಲ. ರಾಜ್ಯದಲ್ಲಿ ಜೀನೋಮ್ ಅನುಕ್ರಮಣಿಕೆಯ ಸೌಲಭ್ಯವನ್ನು ಹೆಚ್ಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಡೆಸಿದ ಕೊವಿಡ್ ಪರಿಶೀಲನಾ ಸಭೆಯ ಪ್ರಕಟಣೆ ತಿಳಿಸಿದೆ.

ಜೀನೋಮ್ ಸೀಕ್ವೆನ್ಸಿಂಗ್ ಎನ್ನುವುದು ಪ್ರಯೋಗಾಲಯ ಪ್ರಕ್ರಿಯೆಯಾಗಿದ್ದು, ಇದು ರೂಪಾಂತರಗಳನ್ನು ನಿರೂಪಿಸಲು ಮತ್ತು ರೋಗ ಪತ್ತೆಹಚ್ಚಲಿರುವ ವಿಧಾನವಾಗಿದೆ. ಪ್ರಸ್ತುತ, ರಾಜ್ಯದಲ್ಲಿ ದೈನಂದಿನ ಸಕಾರಾತ್ಮಕ ದರವು ಶೇಕಡಾ 0.04 ಆಗಿದೆ.

ಕಪ್ಪಾ ರೂಪಾಂತರದ ಬಗ್ಗೆ ಕೇಳಿದಾಗ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅಮಿತ್ ಮೋಹನ್ ಪ್ರಸಾದ್ ಅವರು ಈ ಹಿಂದೆ ಈ ರೂಪಾಂತರದ ಪ್ರಕರಣಗಳು ರಾಜ್ಯದಲ್ಲಿ ಕಂಡುಬಂದಿವೆ ಎಂದು ಹೇಳಿದರು.
ಈ ರೂಪಾಂತರಿ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಇದು ಕೊರೊನಾವೈರಸ್ ನ ಒಂದು ರೂಪಾಂತರವಾಗಿದೆ ಮತ್ತು ಅದರ ಚಿಕಿತ್ಸೆಯು ಸಾಧ್ಯವಿದೆ ಎಂದು ಪ್ರಸಾದ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಎಚ್ಚರಿಕೆಯ ಕ್ರಮವಾಗಿ, ಪೀಡಿತ ಜಿಲ್ಲೆಗಳ ಹೆಸರುಗಳು ಅಥವಾ ಅದರ ಮೂಲದ ಸ್ಥಳಗಳನ್ನು ಬಹಿರಂಗಪಡಿಸಲಿಲ್ಲ ಎಂದಿದ್ದಾರೆ ಪ್ರಸಾದ್.

ಸೋಂಕಿನ ಎರಡನೆಯ ಅಲೆಯ ನಡುವೆಯೇ ಡೆಲ್ಟಾ, ಆಲ್ಫಾ ಮತ್ತು ಕಪ್ಪಾದಂತಹ ರೂಪಾಂತರಗಳು ಹೆಚ್ಚು ಹರಡುತ್ತವೆ ಎಂದು ಹೇಳಲಾಗುತ್ತಿರುವುದರಿಂದ ರಾಜ್ಯ ಸರ್ಕಾರಗಳು ಹೆಚ್ಚಿನ ಜಾಗ್ರತೆ ವಹಿಸಿವೆ.

ಇದನ್ನೂ  ಓದಿ: ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ

(Highly transmissible Kappa variant of COVID-19 Detected In Uttar Pradesh)