ಸುಖು ಸರ್ಕಾರ ವಿದ್ಯುತ್ ಬಾಕಿ ಪಾವತಿಸದಿದ್ದರೆ ಹಿಮಾಚಲ ಭವನ ಮಾರಾಟ ಮಾಡಿ
ಕಾಂಗ್ರೆಸ್ ನೇತೃತ್ವದ ಸುಖವಿಂದರ್ ಸಿಂಗ್ ಸುಖು ಸರ್ಕಾರವು ವಿದ್ಯುತ್ ಬಾಕಿಯನ್ನು ಪಾವತಿಸಲು ವಿಫಲವಾದರೆ ದೆಹಲಿಯಲ್ಲಿರುವ ಹಿಮಾಚಲ ಭವನವನ್ನು ಮಾರಾಟ ಮಾಡುವಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ಸೂಚನೆ ನೀಡಿದೆ. ಹಿಮಾಚಲ ಭವನವು ರಾಷ್ಟ್ರ ರಾಜಧಾನಿಯ ಮಂಡಿ ಹೌಸ್‌ನಲ್ಲಿದೆ. ಈ ಪರಿಸ್ಥಿತಿಗೆ ಕಾರಣವಾದ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳನ್ನು ಗುರುತಿಸಲು ಸತ್ಯಶೋಧನಾ ತನಿಖೆ ನಡೆಸುವಂತೆ ನ್ಯಾಯಾಲಯವು ವಿದ್ಯುತ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ.

64 ಕೋಟಿ ಮರುಪಾವತಿ ಮಾಡುವಂತೆ ಈ ಹಿಂದೆ ನೀಡಿದ್ದ ಆದೇಶಗಳನ್ನು ನಿರ್ಲಕ್ಷಿಸಿದ ಸುಖು ಸರಕಾರವು ಈಗ ಬಡ್ಡಿಯ ಕಾರಣದಿಂದ ಸುಮಾರು 150 ಕೋಟಿ ರೂ.ಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ. ಈ ಪ್ರಕರಣವು ಲಾಹೌಲ್-ಸ್ಪಿಟಿಯಲ್ಲಿ ಚೆನಾಬ್ ನದಿಯ ಮೇಲೆ 400 ಮೆಗಾವ್ಯಾಟ್ ಸೆಲಿ ಹೈಡ್ರೋ ಯೋಜನೆಗೆ ಸಂಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಕಂಪನಿಯು ಠೇವಣಿ ಇರಿಸಿದ್ದ 64 ಕೋಟಿ ರೂಪಾಯಿಗಳನ್ನು ಮತ್ತು ಶೇಕಡಾ 7 ರ ಬಡ್ಡಿಯನ್ನು ಹಿಂದಿರುಗಿಸಲು ಸರ್ಕಾರಕ್ಕೆ ಆದೇಶಿಸಲಾಯಿತು.ಬಾಕಿ ಮರುಪಾವತಿ ಮಾಡದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಈ ಹಿಂದೆ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಬಾಕಿ ಮೊತ್ತವನ್ನು ವಸೂಲಿ ಮಾಡಲು ಹಿಮಾಚಲ ಭವನವನ್ನು ಹರಾಜು ಮಾಡಲು ನ್ಯಾಯಾಲಯವು ಕಂಪನಿಗೆ ಅನುಮತಿ ನೀಡಿದೆ.
ಯಾರೂ ನನಗೆ ರಾಜೀನಾಮೆ ನೀಡುವಂತೆ ಕೇಳಿಲ್ಲ, ನಾನೂ ಕೊಟ್ಟಿಲ್ಲ: ಹಿಮಾಚಲ ಸಿಎಂ ಸುಖು
2009 ರಲ್ಲಿ, ಸರ್ಕಾರವು 320ಎಂವಿ ವಿದ್ಯುತ್ ಯೋಜನೆಯನ್ನು ಕಂಪನಿಗೆ ಮಂಜೂರು ಮಾಡಿತ್ತು. ಈ ಯೋಜನೆಯನ್ನು ಲಾಹೌಲ್ ಸ್ಪಿತಿಯಲ್ಲಿ ಸ್ಥಾಪಿಸಬೇಕಿತ್ತು. ಯೋಜನೆಯನ್ನು ಸ್ಥಾಪಿಸಲು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಯೋಜನೆಯನ್ನು ಮುಚ್ಚಿ ಸರ್ಕಾರಕ್ಕೆ ವಾಪಸ್ ನೀಡಬೇಕಾಯಿತು.
ಆದರೆ ಸರ್ಕಾರವು ಮುಂಗಡ ಪ್ರೀಮಿಯಂ ಅನ್ನು ಮುಟ್ಟುಗೋಲು ಹಾಕಿಕೊಂಡಿತು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯವು ಸೆಲ್ ಕಂಪನಿಗೆ ಮುಂಗಡವಾಗಿ 64 ಕೋಟಿ ರೂ.ಗಳನ್ನು ಪಾವತಿಸುವಂತೆ ಸರ್ಕಾರಕ್ಕೆ ಆದೇಶಿಸಿತು. 7 ರಷ್ಟು ಬಡ್ಡಿಯೊಂದಿಗೆ ಮುಂದಿನ ವಿಚಾರಣೆಯಲ್ಲಿ ಅಂದರೆ ಡಿಸೆಂಬರ್ 6 ರಂದು ಬಡ್ಡಿಯ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ