ತಲೆಗೆ ಪೆಟ್ಟು ಬಿದ್ದ ತಕ್ಷಣ ಹಳೆಯದೆಲ್ಲವೂ ನೆನಪಾಯ್ತು, 45 ವರ್ಷಗಳ ಬಳಿಕ ಊರಿಗೆ ಮರಳಿದ ವ್ಯಕ್ತಿ

ತಲೆಗೆ ಪೆಟ್ಟುಬಿದ್ದು ಸ್ಮರಣಶಕ್ತಿ ಕಳೆದುಕೊಂಡು ನಾಪತ್ತೆಯಾಗಿದ್ದ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ವ್ಯಕ್ತಿ ರಿಖಿ 45 ವರ್ಷಗಳ ಬಳಿಕ ಕುಟುಂಬವನ್ನು ಸೇರಿದ್ದಾರೆ. ಇದು 1980ರಲ್ಲಿ ನಡೆದ ಘಟನೆ ರಿಖಿಗೆ ಆಗ ಕೇವಲ 16 ವರ್ಷ ವಯಸ್ಸು ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದರು. ನಂತರ ಎಲ್ಲೆಲ್ಲೋ ಅಲೆದಾಡಿದರು. ಈಗ ಮತ್ತೆ ತಲೆಗೆ ಪೆಟ್ಟು ಬಿದ್ದ ತಕ್ಷಣ ನೆನಪಿನ ಶಕ್ತಿ ವಾಪಸಾಗಿದ್ದು, 45 ವರ್ಷಗಳ ಬಳಿಕ ತನ್ನ ಮನೆಗೆ ಮರಳಿದ್ದಾರೆ.

ತಲೆಗೆ ಪೆಟ್ಟು ಬಿದ್ದ ತಕ್ಷಣ ಹಳೆಯದೆಲ್ಲವೂ ನೆನಪಾಯ್ತು, 45 ವರ್ಷಗಳ ಬಳಿಕ ಊರಿಗೆ ಮರಳಿದ ವ್ಯಕ್ತಿ
ಹಿಮಾಚಲ ಪ್ರದೇಶ

Updated on: Nov 22, 2025 | 7:56 AM

ಶಿಮ್ಲಾ, ನವೆಂಬರ್ 22: ತಲೆಗೆ ಪೆಟ್ಟುಬಿದ್ದು ಸ್ಮರಣಶಕ್ತಿ(Memory) ಕಳೆದುಕೊಂಡು ನಾಪತ್ತೆಯಾಗಿದ್ದ ಹಿಮಾಚಲ ಪ್ರದೇಶ(Himachal Pradesh)ದ ಸಿರ್ಮೌರ್ ಜಿಲ್ಲೆಯ ವ್ಯಕ್ತಿ ರಿಖಿ 45 ವರ್ಷಗಳ ಬಳಿಕ ಕುಟುಂಬವನ್ನು ಸೇರಿದ್ದಾರೆ. ಇದು 1980ರಲ್ಲಿ ನಡೆದ ಘಟನೆ ರಿಖಿಗೆ ಆಗ ಕೇವಲ 16 ವರ್ಷ ವಯಸ್ಸು ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದರು. ನಂತರ ಎಲ್ಲೆಲ್ಲೋ ಅಲೆದಾಡಿದರು. ಈಗ ಮತ್ತೆ ತಲೆಗೆ ಪೆಟ್ಟು ಬಿದ್ದ ತಕ್ಷಣ ನೆನಪಿನ ಶಕ್ತಿ ವಾಪಸಾಗಿದ್ದು, 45 ವರ್ಷಗಳ ಬಳಿಕ ತನ್ನ ಮನೆಗೆ ಮರಳಿದ್ದಾರೆ.

ರಿಖಿಯನ್ನು ಈಗ ರವಿ ಚೌಧರಿ ಎಂದು ಕರೆಯಲಾಗುತ್ತದೆ.ಕಳೆದ ವಾರ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ನಹಾನ್ ಬಳಿಯ ತನ್ನ ಹುಟ್ಟೂರಿಗೆ ಬಂದಾಗ ಕುಟುಂಬದವರ ಕಣ್ಣಂಚಲ್ಲಿ ನೀರು ತುಂಬಿತ್ತು. ಅವರು ಸತ್ತಿದ್ದಾರೆಂದೇ ಎಲ್ಲರೂ ತಿಳಿದುಕೊಂಡಿದ್ದರು.

ಕುಟುಂಬವು ಹಾಡು, ನೃತ್ಯಗಳೊಂದಿಗೆ ಅವರನ್ನು ಸ್ವಾಗತಿಸಿತ್ತು,ಸಹೋದರರಾದ ದುರ್ಗಾ ರಾಮ್, ಚಂದರ್ ಮೋಹನ್, ಸಹೋದರಿಯರಾದ ಚಂದ್ರಮಣಿ, ಕೌಶಲ್ಯ ದೇವಿ, ಕಲಾ ದೇವಿ ಮತ್ತು ಸುಮಿತ್ರಾ ದೇವಿ ಅವರೊಂದಿಗೆ ಮತ್ತೆ ಒಂದಾದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಮತ್ತಷ್ಟು ಓದಿ: ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವುದು ಹೇಗೆ? ಇಲ್ಲಿವೆ ಸರಳ ಟಿಪ್ಸ್​!

1980 ರಲ್ಲಿ ಅಂಬಾಲಕ್ಕೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ದೊಡ್ಡ ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿತ್ತು. ಬಳಿಕ ಎಲ್ಲಿಗೆ ಹೋಗಬೇಕೆಂದು ತೋಚದೆ ಹರಿಯಾಣದ ಯಮುನಾನಗರದ ಹೋಟೆಲ್‌ನಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು. ಆಗ ಅವರ ಸ್ನೇಹಿತರು ಅವರಿಗೆ ರವಿ ಚೌಧರಿ ಎಂದು ಹೆಸರಿಟ್ಟಿದ್ದರು.ಬಳಿಕ ಮುಂಬೈಗೆ ತೆರಳಿದ್ದರು, ಅಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದರು.

ನಂತರ ಕಾಲೇಜಿನಲ್ಲಿ ಕೆಲಸ ಸಿಕ್ಕ ನಂತರ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ವಾಸವಿದ್ದರು.ಅಲ್ಲಿ ಅವರು ಮೂರು ಮಕ್ಕಳಿರುವ ಸಂತೋಷಿ ಎಂಬ ಮಹಿಳೆಯನ್ನು ವಿವಾಹವಾದರು.
ಕೆಲವು ತಿಂಗಳ ಹಿಂದೆ ತಲೆಗೆ ಮತ್ತೆ ಪೆಟ್ಟು ಬಿದ್ದಾಗ ನೆನಪು ವಾಪಸಾಗಿತ್ತು.ಹುಟ್ಟೂರಿನಲ್ಲಿರುವ ನದಿ, ಮನೆಯ ಅಂಗಳ ಇವೆಲ್ಲಾ ನೆನಪಾಗಲು ಶುರುವಾಗಿತ್ತು.

ಅವು ಕನಸುಗಳಲ್ಲ ತನ್ನ ಹುಟ್ಟೂರು ಎಂಬುದನ್ನು ಅವರು ಅರಿತುಕೊಂಡರು. ಕಾಲೇಜು ವಿದ್ಯಾರ್ಥಿಯೊಬ್ಬನ ಸಹಾಯದಿಂದ ರಿಖಿ ಸತೌನ್ ಪತ್ತೆ ಹಚ್ಚಿ ಆ ಹಳ್ಳಿಯನ್ನು ಪತ್ತೆಹಚ್ಚಿದ್ದರು.ಇಂತಹ ಪ್ರಕರಣಗಳು ಅಪರೂಪ ಮತ್ತು ಮೆದುಳಿನ ವೈದ್ಯಕೀಯ ಪರೀಕ್ಷೆಯ ನಂತರವೇ ನಿಖರವಾದ ಕಾರಣ ತಿಳಿಯುತ್ತದೆ ಎಂದು ಮಾನಸಿಕ ತಜ್ಞ ಡಾ. ಆದಿತ್ಯ ಶರ್ಮಾ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ