Bhanupriya: ನೆನಪಿನ ಶಕ್ತಿ ಕಳೆದುಕೊಂಡ ಭಾನುಪ್ರಿಯಾ; ಡೈಲಾಗ್​ ಮೆರೆತು ಸಿನಿಮಾಗಳಿಂದ ದೂರ ಉಳಿದ ನಟಿ

Bhanupriya | Memory Loss: ನೆನಪಿನ ಶಕ್ತಿ ಕುಂದುತ್ತಿರುವ ಕಾರಣದಿಂದ ಡೈಲಾಗ್​ಗಳನ್ನು ಹೇಳಲು ಭಾನುಪ್ರಿಯಾ ಅವರಿಗೆ ಆಗುತ್ತಿಲ್ಲ. ಇದರಿಂದ ಸಿನಿಮಾದಲ್ಲಿ ನಟಿಸುವುದು ಅವರಿಗೆ ಕಷ್ಟ ಆಗುತ್ತಿದೆ.

Bhanupriya: ನೆನಪಿನ ಶಕ್ತಿ ಕಳೆದುಕೊಂಡ ಭಾನುಪ್ರಿಯಾ; ಡೈಲಾಗ್​ ಮೆರೆತು ಸಿನಿಮಾಗಳಿಂದ ದೂರ ಉಳಿದ ನಟಿ
ಭಾನುಪ್ರಿಯಾImage Credit source: Telugu One
Follow us
ಮದನ್​ ಕುಮಾರ್​
|

Updated on: Feb 05, 2023 | 7:19 PM

ಬಹುಭಾಷಾ ನಟಿ ಭಾನುಪ್ರಿಯಾ (Bhanupriya) ಅವರು ಕನ್ನಡದ ಪ್ರೇಕ್ಷಕರಿಗೂ ಪರಿಚಿತರು. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಅವರು ಒಂದು ಕಾಲದ ಬಹುಬೇಡಿಕೆಯ ಹೀರೋಯಿನ್​ ಆಗಿದ್ದರು. ಅನೇಕ ಸ್ಟಾರ್​ ನಟರ ಜೊತೆ ಅಭಿನಯಿಸಿ ಫೇಮಸ್​ ಆಗಿದ್ದರು. ಕನ್ನಡದ ‘ಸಿಂಹಾದ್ರಿಯ ಸಿಂಹ’, ‘ರಸಿಕ’, ‘ದೇವರ ಮಗ’, ‘ಕದಂಬ’ ಮುಂತಾದ ಸಿನಿಮಾಗಳಲ್ಲಿ ಭಾನುಪ್ರಿಯಾ ನಟಿಸಿದ್ದಾರೆ. ಆದರೆ ಈಗ ಅವರ ಬದುಕಿನ ಬಗ್ಗೆ ಕೆಲವು ಅಚ್ಚರಿಯ ವಿಚಾರಗಳ ಬಹಿರಂಗ ಆಗಿವೆ. ಭಾನುಪ್ರಿಯಾ ಅವರು ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮೆಮೊರಿ ಲಾಸ್​ (Memory Loss) ಆಗುತ್ತಿರುವುದರಿಂದ ಅವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹಾಗಂತ ಇದು ಗಾಸಿಪ್​ ಅಲ್ಲ. ಇತ್ತೀಚೆಗೆ ‘ತೆಲುಗು ಒನ್​’ ನಡೆಸಿದ ಸಂದರ್ಶನದಲ್ಲಿ (Bhanupriya Interview) ಸ್ವತಃ ಭಾನುಪ್ರಿಯಾ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.

ಒಂದು ಕಾಲದಲ್ಲಿ ಹೀರೋಯಿನ್​ ಆಗಿದ್ದ ಭಾನುಪ್ರಿಯಾ ಅವರು ನಂತರದ ದಿನಗಳಲ್ಲಿ ಪೋಷಕ ಪಾತ್ರಗಳನ್ನು ಒಪ್ಪಿಕೊಂಡರು. ಆಗಲೂ ಅವರು ಬ್ಯುಸಿ ನಟಿಯಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಹೆಚ್ಚಾಗಿ ಯಾವುದೇ ಸಿನಿಮಾಗಳಿಗೂ ಸಹಿ ಮಾಡುತ್ತಿಲ್ಲ. ಅದಕ್ಕೆ ಕಾರಣ ಏನೆಂಬುದನ್ನು ಅವರು ತಿಳಿಸಿದ್ದಾರೆ. ನೆನಪಿನ ಶಕ್ತಿ ಕುಂದುತ್ತಿರುವ ಕಾರಣದಿಂದ ಡೈಲಾಗ್​ಗಳನ್ನು ಹೇಳಲು ಅವರಿಗೆ ಆಗುತ್ತಿಲ್ಲ. ಇದರಿಂದ ಸಿನಿಮಾದಲ್ಲಿ ನಟಿಸುವುದು ಭಾನುಪ್ರಿಯಾ ಅವರಿಗೆ ಕಷ್ಟ ಆಗುತ್ತಿದೆ.

ಭಾನುಪ್ರಿಯಾ ಅವರು ಅತ್ಯುತ್ತಮ ಡ್ಯಾನ್ಸರ್​. 80ರ ದಶಕದ ಸಿನಿಮಾಗಳಲ್ಲಿ ಅವರು ನೃತ್ಯದ ಮೂಲಕ ಗಮನ ಸೆಳೆದಿದ್ದರು. ಶಾಕಿಂಗ್​ ವಿಚಾರ ಏನೆಂದರೆ, ಈಗ ಅವರು ಡ್ಯಾನ್ಸ್​ ಸ್ಟೆಪ್​ಗಳನ್ನು ಕೂಡ ಮರೆಯುತ್ತಿದ್ದಾರೆ. ಮನೆಯಲ್ಲಿಯೂ ನೃತ್ಯಾಭ್ಯಾಸ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಈ ವಿಚಾರ ಕೇಳಿ ಭಾನುಪ್ರಿಯಾ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.

ಇದನ್ನೂ ಓದಿ
Image
Ram Charan: ‘ಆರ್​ಆರ್​ಆರ್​’ ಗೆದ್ದ ಬಳಿಕ ರಾಮ್​ ಚರಣ್​ ಸಖತ್​ ಬ್ಯುಸಿ; ಕೈಯಲ್ಲಿವೆ ಬಹುನಿರೀಕ್ಷಿತ​ ಚಿತ್ರಗಳು
Image
Daali Dhananjay: ಒಳ್ಳೆಯವನಾ? ಕೆಟ್ಟವನಾ? ಕೌತುಕ ಮೂಡಿಸಿದ ‘ಹೊಯ್ಸಳ’ ಟೀಸರ್​; ಪೊಲೀಸ್​ ಗೆಟಪ್​ನಲ್ಲಿ ಬಂದ ಡಾಲಿ
Image
Ramesh Aravind: ‘ವೀಕೆಂಡ್​ ವಿತ್​ ರಮೇಶ್​’ 5ನೇ ಸೀಸನ್​ಗೆ ದಿನಗಣನೆ; ರಿಷಬ್​, ಅನಿಲ್​ ಕುಂಬ್ಳೆ, ದ್ರಾವಿಡ್​, ಮಾಲಾಶ್ರೀಗೆ ಬೇಡಿಕೆ
Image
ಮದುವೆ ನಡೆಯೋ ಸ್ಥಳಕ್ಕೆ ಆಗಮಿಸಿದ ನಟಿ ಕಿಯಾರಾ ಅಡ್ವಾಣಿ; ಖಚಿತವಾಯ್ತು ಸುದ್ದಿ

ಇದನ್ನೂ ಓದಿ: ಗ್ಲಾಮರ್​ ಪಾತ್ರ ಮಾಡದೇ ಮನಗೆದ್ದ ನಟಿಯರು

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾನುಪ್ರಿಯಾ ಅವರು ಡ್ಯಾನ್ಸ್​ ಸ್ಕೂಲ್​ ಆರಂಭ ಮಾಡಬೇಕಿತ್ತು. ಆದರೆ ಮರೆವಿನ ಕಾಯಿಲೆ ಶುರು ಆಗಿರುವುದರಿಂದ ನೃತ್ಯ ಪಾಠಶಾಲೆ ನಡೆಸಲು ಅವರಿಗೆ ಸಾಧ್ಯವಾಗಲೇ ಇಲ್ಲ. ಯಾವುದೇ ಖಿನ್ನತೆಯ ಕಾರಣಕ್ಕೆ ಅವರಿಗೆ ಮೆಮೊರಿ ಲಾಸ್​ ಆಗಿಲ್ಲ. ಬದಲಿಗೆ ಅನಾರೋಗ್ಯವೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಸದ್ಯ ಅವರು ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ವಿಚಿತ್ರ ಕಾಯಿಲೆ ಹಾಗೂ ನಿರುದ್ಯೋಗಕ್ಕೆ ರೋಸಿಹೋದ ಕಿರುತೆರೆ ನಟಿ; ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ

1998ರಲ್ಲಿ ಆದರ್ಶ್​ ಕೌಶಲ್​ ಜೊತೆ ಭಾನುಪ್ರಿಯಾ ಅವರ ಮದುವೆ ನಡೆಯಿತು. 2018ರಲ್ಲಿ ಹೃದಯಾಘಾತದಿಂದ ಆದರ್ಶ್​ ಕೌಶಲ್​ ನಿಧನರಾದರು. 2005ರಲ್ಲಿಯೇ ಅವರು ವಿಚ್ಛೇದನ ಪಡೆದಿದ್ದರು ಎಂಬ ಸುದ್ದಿ ಹರಡಿತ್ತು. ಆ ಬಗ್ಗೆ ಭಾನುಪ್ರಿಯಾ ಅವರು ಈಗ ಸ್ಪಷ್ಟನೆ ನೀಡಿದ್ದಾರೆ. ‘ನಾವು ಡಿವೋರ್ಸ್​ ಪಡೆದಿರಲಿಲ್ಲ. ಕೆಲಸದ ಕಾರಣಕ್ಕೆ ಬೇರೆ ಬೇರೆ ಕಡೆ ವಾಸಿಸುತ್ತಿದ್ದೆವು’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?