ಅಪ್ಪ-ಅಮ್ಮ ಹಿಂಸೆ ನೀಡುತ್ತಾರೆಂದು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ 10 ವರ್ಷದ ಬಾಲಕಿ!
ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ 10 ವರ್ಷದ ಬಾಲಕಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನ ಪೋಷಕರ ದೌರ್ಜನ್ಯದ ಆರೋಪ ಮಾಡಿದ್ದಾಳೆ. ಆಕೆಯ ಪೋಷಕರು ಇನ್ನುಮುಂದೆ ತಮ್ಮ ಮಗಳನ್ನು ಚೆನ್ನಾಗಿ ನಡೆಸಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಲಾಗಿದೆ. ಆದರೆ, ಆ ಬಾಲಕಿ ತನ್ನ ಪೋಷಕರೊಂದಿಗೆ ವಾಸ ಮಾಡಲು ನಿರಾಕರಿಸಿದ್ದಾಳೆ.

ಬಿಲಾಸ್‌ಪುರ, ಅಕ್ಟೋಬರ್ 28: ಹಿಮಾಚಲ ಪ್ರದೇಶದ (Himachal Pradesh) ಬಿಲಾಸ್‌ಪುರದಲ್ಲಿ 10 ವರ್ಷದ ಬಾಲಕಿಯೊಬ್ಬರು ಮಕ್ಕಳ ಸಹಾಯವಾಣಿಗೆ (Child Helpline) ಕರೆ ಮಾಡಿ ತನ್ನ ಪೋಷಕರಿಂದ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾಳೆ. ಅವರ ಪೋಷಕರ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಂದು ದೂರು ನೀಡಿದೆ.
ಮಕ್ಕಳ ಸಹಾಯವಾಣಿ 1098ಗೆ ನೀಡಿದ ದೂರಿನಲ್ಲಿ ಆ ಬಾಲಕಿ ತನ್ನ ಪೋಷಕರು ಆಗಾಗ ನನ್ನನ್ನು ಹೊಡೆಯುತ್ತಾರೆ ಮತ್ತು ಗದರಿಸುತ್ತಾರೆ. ಇದರಿಂದಾಗಿ ಮನೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಅಪ್ರಾಪ್ತ ಬಾಲಕಿ ಹೇಳಿದ್ದಾಳೆ. ಈ ಕುರಿತಾದ ದೂರಿನ ನಂತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಮಕ್ಕಳ ಸಹಾಯವಾಣಿಯನ್ನು 112 ನಲ್ಲಿ ವಿಲೀನಕ್ಕೆ ಮುಂದಾದ ಕೇಂದ್ರ ಸರ್ಕಾರ: ಆತಂಕದಲ್ಲಿ ಚೈಲ್ಡ್ ಲೈನ್ ಸಿಬ್ಬಂದಿ
ಬಳಿಕ ಮಹಿಳಾ ಅಧಿಕಾರಿಯ ನೇತೃತ್ವದ ಪೊಲೀಸ್ ತಂಡವು ಆ ಬಾಲಕಿಯ ಮನೆಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ವಿಚಾರಿಸಿದೆ. ಪೊಲೀಸರು ಬಾಲಕಿಯ ಪೋಷಕರಿಗೆ ಭವಿಷ್ಯದಲ್ಲಿ ಯಾವುದೇ ರೀತಿಯ ದೈಹಿಕ ಹಿಂಸೆ ನೀಡದಂತೆ, ಗದರದಂತೆ ಎಚ್ಚರಿಕೆ ನೀಡಿದ್ದಾರೆ. ಆಕೆಯ ಪೋಷಕರು ಇನ್ನುಮುಂದೆ ತಮ್ಮ ಮಗಳನ್ನು ಚೆನ್ನಾಗಿ ನಡೆಸಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಲಾಗಿದೆ. ಆದರೆ, ಆ ಬಾಲಕಿ ತನ್ನ ಪೋಷಕರೊಂದಿಗೆ ವಾಸ ಮಾಡಲು ನಿರಾಕರಿಸಿದ್ದಾಳೆ.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿಯಲ್ಲಿ ಶೇ 94 ಅಂಕ ಪಡೆದಿದ್ದ ವಿದ್ಯಾರ್ಥಿನಿಗೆ ವಿವಾಹ ಯತ್ನ, ಸಹಾಯವಾಣಿಗೆ ಕರೆ ಮಾಡಿ ದಿಟ್ಟತನ ಮೆರೆದ ಬಾಲಕಿ
ಪೊಲೀಸರು ಪಂಚಾಯತ್ ಪ್ರತಿನಿಧಿಗಳನ್ನು ಕೂಡ ಸ್ಥಳಕ್ಕೆ ಕರೆಸಿದ್ದಾರೆ. ಅವರು ಕೂಡ ಹುಡುಗಿಯನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವಳು ಅಪ್ಪ-ಅಮ್ಮನ ಜೊತೆ ಇರಲು ಒಪ್ಪಲಿಲ್ಲ. ನಂತರ, ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹುಡುಗಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
