AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶ: ಒಂದೇ ವಧುವನ್ನು ವರಿಸಿದ ಸಹೋದರರು

ನೀವು ಮಹಾಭಾರತದ ಕಥೆ ಕೇಳಿರಬಹುದು ಅಲ್ಲಿ ಪಂಚ ಪಾಂಡವರು ದ್ರೌಪದಿಯನ್ನು ವರಿಸಿದಂತೆ ಹಿಮಾಚಲ ಪ್ರದೇಶದಲ್ಲೂ ಬಹುಪತಿತ್ವ ಪದ್ಧತಿ ಪದ್ಧತಿ ಇನ್ನೂ ಜೀವಂತವಾಗಿದೆ. ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿಯೂ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಅಂದರೆ ಒಂದು ಕುಟುಂಬದಲ್ಲಿ ಸಹೋದರರಿಗೆ ಒಬ್ಬಳೇ ಹೆಂಡತಿ ಇರುತ್ತಾಳೆ. ಸಹಜವಾಗಿ, ಕಾಲಾನಂತರದಲ್ಲಿ ಜನರು ಆಧುನಿಕತೆಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಈ ಸಂಪ್ರದಾಯ ಇನ್ನೂ ಕೆಲವು ಹಳ್ಳಿಗಳಲ್ಲಿ ಮುಂದುವರೆದಿದೆ .ಸಿರ್ಮೌರ್‌ನ ಶಿಲೈ ಗ್ರಾಮದಲ್ಲಿ, ಇಬ್ಬರು ಸಹೋದರರು ಈಗ ಒಂದೇ ವಧುವನ್ನು ಮದುವೆಯಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಹಿಮಾಚಲ ಪ್ರದೇಶ: ಒಂದೇ ವಧುವನ್ನು ವರಿಸಿದ ಸಹೋದರರು
ಮದುವೆ
ನಯನಾ ರಾಜೀವ್
|

Updated on: Jul 20, 2025 | 2:47 PM

Share

ಹಿಮಾಚಲ ಪ್ರದೇಶ, ಜುಲೈ 20: ನೀವು ಮಹಾಭಾರತದ ಕಥೆ ಕೇಳಿರಬಹುದು ಅಲ್ಲಿ ಪಂಚ ಪಾಂಡವರು ದ್ರೌಪದಿಯನ್ನು ವರಿಸಿದಂತೆ ಹಿಮಾಚಲ ಪ್ರದೇಶದಲ್ಲೂ ಬಹುಪತಿತ್ವ ಪದ್ಧತಿ  ಇನ್ನೂ ಜೀವಂತವಾಗಿದೆ. ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿಯೂ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಅಂದರೆ ಒಂದು ಕುಟುಂಬದಲ್ಲಿ ಸಹೋದರರಿಗೆ ಒಬ್ಬಳೇ ಹೆಂಡತಿ ಇರುತ್ತಾಳೆ.

ಸಹಜವಾಗಿ, ಕಾಲಾನಂತರದಲ್ಲಿ ಜನರು ಆಧುನಿಕತೆಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಈ ಸಂಪ್ರದಾಯ ಇನ್ನೂ ಕೆಲವು ಹಳ್ಳಿಗಳಲ್ಲಿ ಮುಂದುವರೆದಿದೆ .ಸಿರ್ಮೌರ್‌ನ ಶಿಲೈ ಗ್ರಾಮದಲ್ಲಿ, ಇಬ್ಬರು ಸಹೋದರರು ಈಗ ಒಂದೇ ವಧುವನ್ನು ಮದುವೆಯಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ಸಂಪ್ರದಾಯವನ್ನು ಬಹುಪತಿತ್ವ ಎಂದು ಕರೆಯಲಾಗುತ್ತದೆ. ಈ ಸಂಪ್ರದಾಯದಿಂದಾಗಿ, ಶಿಲೈ ಗ್ರಾಮದ ಹಟ್ಟಿ ಬುಡಕಟ್ಟಿನ ಇಬ್ಬರು ಸಹೋದರರು ಒಂದೇ ವಧುವನ್ನು ವಿವಾಹವಾಗಿದ್ದಾರೆ.ವಧು ಸುನೀತಾ ಚೌಹಾಣ್ ಅವರು ಯಾವುದೇ ಒತ್ತಡವಿಲ್ಲದೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ವರರಾದ ಪ್ರದೀಪ್ ಮತ್ತು ಕಪಿಲ್ ನೇಗಿ ಇಬ್ಬರೂ ಕೂಡ ಇದೇ ಹೇಳಿಕೆ ನೀಡಿದ್ದಾರೆ.

ಮತ್ತಷ್ಟು ಓದಿ: ಅನ್ಯಕೋಮಿನವನೊಂದಿಗೆ ಹಿಂದೂ ಯುವತಿ ಮದುವೆ: ವಿವಾಹ ಮಾಡಿಸಿದ್ದನಿಗೆ ಹಿಂದೂಗಳಿಂದ ಬೆದರಿಕೆ

ಜುಲೈ 12 ರಂದು ಸಿರ್ಮೌರ್ ಜಿಲ್ಲೆಯ ಟ್ರಾನ್ಸ್-ಗಿರಿ ಪ್ರದೇಶದಲ್ಲಿ ಪ್ರಾರಂಭವಾದ ಈ ಮೂರು ದಿನಗಳ ಕಾಲ ನಡೆದ ಸಮಾರಂಭದಲ್ಲಿ ಜನರು ಸ್ಥಳೀಯ ಜಾನಪದ ಹಾಡುಗಳು ಮತ್ತು ನೃತ್ಯಗಳನ್ನು ಆನಂದಿಸಿದರು.ಹಿಮಾಚಲ ಪ್ರದೇಶ-ಉತ್ತರಾಖಂಡದ ಗಡಿಯಲ್ಲಿ ವಾಸಿಸುವ ಹಟ್ಟಿ ಸಮುದಾಯವನ್ನು ಮೂರು ವರ್ಷಗಳ ಹಿಂದೆ ಪರಿಶಿಷ್ಟ ಪಂಗಡ ಎಂದು ಘೋಷಿಸಲಾಯಿತು.

ಶತಮಾನಗಳಿಂದ ಈ ಬುಡಕಟ್ಟು ಜನಾಂಗದಲ್ಲಿ ಬಹುಪತಿತ್ವ ಪದ್ಧತಿ ಪ್ರಚಲಿತವಾಗಿದೆ. ಈಗ ಮಹಿಳೆಯರಲ್ಲಿ ಹೆಚ್ಚುತ್ತಿರುವ ಶಿಕ್ಷಣ ಮತ್ತು ಆರ್ಥಿಕ ಪ್ರಗತಿಯಿಂದಾಗಿ, ಬಹುಪತಿತ್ವ ಪ್ರಕರಣಗಳು ಕಡಿಮೆಯಾಗುತ್ತಿವೆ. ಗ್ರಾಮದ ಹಿರಿಯರು ಹೇಳುವಂತೆ ಅಂತಹ ವಿವಾಹಗಳು ರಹಸ್ಯವಾಗಿ ನಡೆಯುತ್ತವೆ. ಸಮಾಜವು ಈ ವಿವಾಹಗಳನ್ನು ಒಪ್ಪಿಕೊಳ್ಳುತ್ತದೆ ಆದರೆ ಈಗ ಅಂತಹ ಪ್ರಕರಣಗಳು ಕಡಿಮೆಯಾಗುತ್ತಿವೆ. ಈ ಸಂಪ್ರದಾಯದ ಹಿಂದಿನ ಮುಖ್ಯ ಆಲೋಚನೆ ಪೂರ್ವಜರ ಆಸ್ತಿಯನ್ನು ವಿಭಜಿಸಬಾರದು ಎಂಬುದು .

ಹಿಮಾಚಲ ಪ್ರದೇಶದ ಮೊದಲ ಮುಖ್ಯಮಂತ್ರಿ ವೈ.ಎಸ್. ಪರ್ಮಾರ್ ಈ ಸಂಪ್ರದಾಯವನ್ನು ಸಂಶೋಧಿಸಿ ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದ್ದರು.ಹಿಮಾಚಲ ಪ್ರದೇಶದಲ್ಲಿ, ಸಿರ್ಮೌರ್‌ನಲ್ಲಿ ಮಾತ್ರವಲ್ಲದೆ ಕಿನ್ನೌರ್ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿಯೂ ಬಹುಪತಿತ್ವವನ್ನು ಆಚರಿಸಲಾಗುತ್ತದೆ.

ಇದು ನಮ್ಮ ಹಿರಿಯರು ಅನುಸರಿಸುವ ಸಂಪ್ರದಾಯ. ಕುಟುಂಬದಲ್ಲಿ ಯಾರಿಗೂ ಈ ಸಂಪ್ರದಾಯದಿಂದ ಯಾವುದೇ ಸಮಸ್ಯೆ ಇಲ್ಲ. ಇದನ್ನು ಮುಂದುವರಿಸಲು ಬಯಸುವವರು ಹಾಗೆ ಮಾಡುತ್ತಾರೆ. ಯಾರಾದರೂ ಈ ಸಂಪ್ರದಾಯದ ಪ್ರಕಾರ ಮದುವೆಯಾಗಲು ಬಯಸದಿದ್ದರೆ, ಅವರ ಮೇಲೆ ಯಾವುದೇ ಬಲವಂತ ಮಾಡುವುದಿಲ್ಲ.

ಅವರು ಒಬ್ಬ ಪುರುಷನನ್ನು ಮಾತ್ರ ಮದುವೆಯಾಗಲು ಸ್ವತಂತ್ರರು. ಈ ಪದ್ಧತಿಯು ಕುಟುಂಬ ಏಕತೆ ಮತ್ತು ಪರಸ್ಪರ ತಿಳಿವಳಿಕೆಯನ್ನು ಉತ್ತೇಜಿಸುತ್ತದೆ ಎಂದು ಕೆಲವರು ನಂಬುತ್ತಾರೆ. ಕಿನ್ನೌರ್‌ನಲ್ಲಿ, ಬಹುಪತಿತ್ವಕ್ಕೆ ಮುಖ್ಯ ಕಾರಣವೆಂದರೆ ಭೂಮಿ ವಿಭಜನೆಯಾಗದಂತೆ ರಕ್ಷಿಸುವುದು, ಇದರಿಂದಾಗಿ ಕುಟುಂಬದ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ