‘ಹರ್ ಘರ್ ಭಗವಾ’ ಅಭಿಯಾನ: ಮನೆ ಮೇಲೆ ಧ್ವಜ ಹಾರಿಸಿದ್ರೆ ‘ಹಿಂದೂ ರಾಷ್ಟ್ರ ವೀರ’ ಪ್ರಮಾಣಪತ್ರ
ಹಿಂದೂ ಜನಜಾಗೃತಿ ಸಮಿತಿಯ 20 ವರ್ಷ ತುಂಬಿದ ಹಿನ್ನಲೆಯಲ್ಲಿ 'ಹರ್ ಘರ್ ಭಗವಾ' ಅಭಿಯಾನಕ್ಕೆ ಕರೆ ಕೊಟ್ಟಿದೆ.
ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯ 20 ವರ್ಷದ ವರ್ಷಾಚರಣೆಯ ನಿಮಿತ್ತ ದೇಶದಾದ್ಯಂತ ‘ಹರ್ ಘರ್ ಭಗವಾ’ ಅಭಿಯಾನ (Har Ghar Bhagwa Campaign)ಹಮ್ಮಿಕೊಂಡಿದೆ.
ಇದೇ ಅಕ್ಟೋಬರ್ 3ರಿಂದ 5ರ ವರಗೆ ಈ ಅಭಿಯಾನ ನಡೆಯಲಿದ್ದು, ಹರ್ ಘರ್ ಭಗವಾ ಅಭಿಯಾನದಡಿಯಲ್ಲಿ ಮನೆ-ಮನೆಯಲ್ಲಿ ಭಗವಧ್ವಜ ಹಾರಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಕರೆ ಕೊಟ್ಟಿದೆ.
ಒಂದು ಕೋಟಿ ಹಿಂದೂಗಳ ಮನೆ ಮೇಲೆ ಹರ್ ಘರ್ ಭಗವಾ ಹಾರಿಸುವ ಗುರಿ ಹೊಂದಿದೆ. ನಾಳೆಯಿಂದ ಈ ಬಗ್ಗೆ ಟ್ವಿಟರ್ ನಲ್ಲಿ ಅಭಿಯಾನ ಆರಂಭವಾಗಲಿದೆ. ಈ ಅಭಿಯಾನದಲ್ಲಿ ಭಾಗವಹಿಸುವವರಿಗೆ ಹಿಂದೂ ರಾಷ್ಟ್ರ ವೀರ ಎಂಬ ಪ್ರಮಾಣಪತ್ರ ನೀಡಲಾಗುವುದು ಸಮಿತಿ ತಿಳಿಸಿದೆ. ಈ ಪ್ರಮಾಣ ಪತ್ರ ಪಡೆಯಲು ನೀವು ಮಾಡಬೇಕಿರವ ವಿಧಾನ ಈ ಕೆಳಗಿನಂತಿದೆ ನೋಡಿ. ತಮ್ಮ ಮನೆಯ ಮೇಲೆ ಭಗವಾ ಧ್ವಜವನ್ನು ಹಾರಾಡಿಸಬೇಕು. ಅದರ ಫೋಟೋ ಜತೆಗೆ ನಿಮ್ಮ ಹೆಸರು ಮತ್ತು ವಾಟ್ಸಪ್ ನಂಬರ್ https://Hindurashtra.hindujagruti.org ಈ ಲಿಂಕ್ನಲ್ಲಿ ಹಾಕಬೇಕು.
ಹೀಗೆ ಮಾಡಿದರೆ ‘ಹಿಂದೂ ರಾಷ್ಟ್ರ ವೀರ’ ಎಂಬ ಪ್ರಮಾಣಪತ್ರ ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಲಾಗುವುದು ಎಂದು ಸಮಿತಿ ಹೇಳಿದೆ. ಮನೆಯಲ್ಲಿ ಹಾರಾಡಿಸಿದ ಭಗವಾ ಧ್ವಜದ ಪೋಟೋವನ್ನು ಈ ಕೆಳಗಿನ ಸೋಷಿಯಲ್ ಮೀಡಿಯಾ ಅಕೌಂಟ್ಗೆ ಟ್ಯಾಗ್ ಮಾಡಬೇಕು ಹಾಗೇ #HarGharBhagwa ಅಂತ ಹ್ಯಾಶ್ ಟ್ಯಾಗ್ ಹಾಕಬೇಕು ಅಂತಲೂ ತಿಳಿಸಿದೆ.
ಟ್ವಿಟರ್ : @HinduJagrutiorg, @HJSKarnataka
ಫೇಸ್ಬುಕ್ : @JagoHinduBharat, @JagoHinduKarnataka,
Instagram : @JagoHinduBharat
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Sat, 1 October 22