AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dattatreya Hosabale: ‘ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ’-ಆರ್​ಎಸ್​ಎಸ್​ ಮುಖಂಡ ದತ್ತಾತ್ರೇಯ ಹೊಸಬಾಳೆ

ನಾನು ಆರ್​ಎಸ್​ಎಸ್​​ನಿಂದ ಬಂದವನು. ನಾವೆಂದೂ ನಮ್ಮ ಸಂಘದ ತರಬೇತಿ ಶಿಬಿರಗಳಲ್ಲಿ ನಡೆಯುವ ಪ್ರವಚನದ ವೇಳೆ ನಾವು ಬಲಪಂಥೀಯರು ಎಂದು ಹೇಳುವುದಿಲ್ಲ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

Dattatreya Hosabale: ‘ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ’-ಆರ್​ಎಸ್​ಎಸ್​ ಮುಖಂಡ ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ
TV9 Web
| Updated By: Lakshmi Hegde|

Updated on:Oct 23, 2021 | 11:37 AM

Share

ದೆಹಲಿ: ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ..ಬಲವೂ ಅಲ್ಲ ಎಂದು ಆರ್​ಎಸ್​ಎಸ್​ ಸಹ ಸರಕಾರ್ಯವಾಹ್​ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.  ಆರ್​ಎಸ್​ಎಸ್​ ನಾಯಕ ರಾಮ್​ ಮಾಧವ್​ ಬರೆದಿರುವ ಪುಸ್ತಕವನ್ನು ಬಿಡುಗಡೆ ಮಾಡಿದ ಅವರು, ಜಗತ್ತು ಎಡಕ್ಕೆ ಹೋಯಿತು..ಅಥವಾ ಅದನ್ನು ಬಲವಂತವಾಗಿ ಎಡಕ್ಕೆ ಕರೆದೊಯ್ಯಲಾಯಿತು. ಆದರೆ ಈಗ ಸಂದರ್ಭ ಬೇರೆಯಾಗಿದೆ. ಜಗತ್ತು ಮತ್ತೆ ಬಲಕ್ಕೆ ಬರುತ್ತಿದೆ. ಹಾಗಾಗಿ ಅದೀಗ ಕೇಂದ್ರದಲ್ಲಿದೆ. ಆದರೆ ಹಿಂದುತ್ವ ಎಂಬುದು ಎಡವೂ ಅಲ್ಲ, ಬಲವೂ ಅಲ್ಲ. ಎಲ್ಲವನ್ನೂ ಒಳಗೊಳ್ಳುವುದು ಇದರ ಸಿದ್ಧಾಂತ ಎಂದು ಹೇಳಿದರು. ಆರ್​ಎಸ್​ಎಸ್​ ನಾಯಕ ರಾಮ್​ ಮಾಧವ್​ ಬರೆದಿರುವ ಪುಸ್ತಕದ ಹೆಸರು The Hindutva Paradigm: Integral Humanism and the Quest for a Non-Western Worldview (ಹಿಂದುತ್ವ ಮಾದರಿ: ಸಮಗ್ರ ಮಾನವತಾವಾದ ಮತ್ತು ಪಾಶ್ಚಾತ್ಯೇತರ ವಿಶ್ವ ದೃಷ್ಟಿಕೋನಕ್ಕಾಗಿ ಅನ್ವೇಷಣೆ) ಎಂದಾಗಿದೆ. 

ನಾನು ಆರ್​ಎಸ್​ಎಸ್​​ನಿಂದ ಬಂದವನು. ನಾವೆಂದೂ ನಮ್ಮ ಸಂಘದ ತರಬೇತಿ ಶಿಬಿರಗಳಲ್ಲಿ ನಡೆಯುವ ಪ್ರವಚನದ ವೇಳೆ ನಾವು ಬಲಪಂಥೀಯರು ಎಂದು ಹೇಳುವುದಿಲ್ಲ. ನಮ್ಮ ಹಲವು ಅಭಿಪ್ರಾಯಗಳು ಎಡಪಂಥೀಯರಂತೆ ಇರುತ್ತವೆ. ಮತ್ತೊಂದಿಷ್ಟು ಖಂಡಿತ ಬಲಪಂಥೀಯವಾಗಿರುತ್ತವೆ. ಎಡಪಂಥೀಯ ಮತ್ತು ಬಲಪಂಥೀಯ ಎರಡೂ ವಿಧದ ವಿಚಾರಗಳಿಗೆ ಅವಕಾಶವಿದೆ. ಯಾಕೆಂದರೆ ಇವೆಲ್ಲವರೂ ಮಾನವರ ಅನುಭವಗಳೇ ಆಗಿವೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.

ಭಾರತೀಯ ಸಂಪ್ರದಾಯಕ್ಕೆ ಪೂರ್ಣವಿರಾಮ ಎಂಬುದು ಇಲ್ಲ. ಇಂದಿನ ರಾಜಕೀಯಕ್ಕೆ ಸೂಕ್ತವೆನಿಸಿಕೊಳ್ಳುವ ಸಲುವಾಗಿ ಎಡ-ಬಲ ಎಂದು ಕರೆಯಲಾಗಿದೆ. ಭೌಗೋಳಿಕ ಮತ್ತು ರಾಜಕೀಯವು ಪೂರ್ವ ಹಾಗೂ ಪಶ್ಚಿಮ ಎಂದು ವಿಭಾಗಿತವಾಗಿತ್ತು. ಆದರೆ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ನಂತರ ಅದು ಮುಸುಕಾಯಿತು..ಕರಗಲ್ಪಟ್ಟಿತು. ಇದೀಗ ಪಶ್ಚಿಮವು ಪೂರ್ಣವಾಗಿ ಪಶ್ಚಿಮವಲ್ಲ. ಪೂರ್ವವು ಪೂರ್ಣವಾಗಿ ಪೂರ್ವವಲ್ಲ. ಎಡ ಎಂಬುದು ಸಂಪೂರ್ಣವಾಗಿ ಎಡವೇ ಆಗಿದೆ. ಆದರೆ ಬಲವೆಂಬುದು ಪೂರ್ಣವಾಗಿ ಬಲವಾಗಿ ಉಳಿದಿಲ್ಲ ಎಂದು ಅವರು ವಿಶ್ಲೇಷಿಸಿದರು.

ಇದನ್ನೂ ಓದಿ: ಯೂಟ್ಯೂಬರ್​ಗಳ ಮೇಲೆ ಮಾನಹಾನಿ ಕೇಸ್​ ಹಾಕಿದ್ದ ಸಮಂತಾಗೆ ಮುಖಭಂಗ; ಕೋರ್ಟ್​ ಹೇಳಿದ್ದೇನು?

ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡದಿದ್ದರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಗೊತ್ತಾ?

Published On - 9:51 am, Sat, 23 October 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ