ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಇಂದಿನಿಂದ ಎರಡು ದಿನಗಳ ಕಾಲ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.ಶಾ ಅವರು ಗೆಜ್ಜಲಗೆರೆ (Gejjalagere), ಮಂಡ್ಯ, ಅರಮನೆ ಮೈದಾನ, ಬೆಂಗಳೂರು , ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರು ತಮ್ಮ ಎರಡು ದಿನಗಳ ಕರ್ನಾಟಕ (Karnataka) ಪ್ರವಾಸದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯ ವಿಧಾನಸಭೆಯ ಅಧಿಕಾರಾವಧಿಯು ಮೇ 28, 2023 ರಂದು ಮುಕ್ತಾಯಗೊಳ್ಳುತ್ತಿರುವ ಕಾರಣ ಮುಂದಿನ ವರ್ಷ 224 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ಹಿನ್ನಲೆಯಲ್ಲಿ ಶಾ ಅವರ ಈ ಭೇಟಿ ಬಂದಿದೆ. ಗೃಹ ಸಚಿವರು ಶುಕ್ರವಾರ ಮಧ್ಯಾಹ್ನ ಮಂಡ್ಯದಲ್ಲಿ ಮೆಗಾ ಡೈರಿಯನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.ಸಹಕಾರಿಸಂಘಗಳಿಂದ ರೈತರ ಅಭಿವೃದ್ಧಿ ಆಗಿದೆ. ಮೋದಿ ಸಹಕಾರಿ ಸಚಿವಾಲಯ ಮಾಡಿದರು,ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಶಾ ಹೇಳಿದ್ದಾರೆ. ಅಮೂಲ್ ಹಾಗೂ ನಂದಿನಿ ಒಟ್ಟಿಗೆ ಕೆಲಸ ಮಾಬೇಕು ಎಂದು ಹೇಳಿದ ಗೃಹ ಸಚಿವರು ಪ್ರತಿ ಪಂಚಾಯತಿಯಲ್ಲಿಯೂ ಡೇರಿ ಘಟಕ ಸ್ಥಾಪನೆಯಾಗಬೇಕು ಎಂದಿದ್ದಾರೆ.
Inaugurating the Mega dairy project by Mandya District Cooperative Milk Producers Union Ltd in Mandya.
ಮಂಡ್ಯದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮೆಗಾ ಡೇರಿ ಉದ್ಘಾಟನೆ. https://t.co/ou95GbXHzP
— Amit Shah (@AmitShah) December 30, 2022
ಸುಮಾರು 5 ಎಕರೆಯಲ್ಲಿ ನಿರ್ಮಾಣವಾಗಿರುವ ಗೆಜ್ಜಲಗೆರೆ ಮೆಗಾಡೇರಿಯಲ್ಲಿ ಹಾಲಿನ ಪುಡಿ ಉತ್ಪಾದನಾ ಘಟಕ, ಹಾಲು ಸಂಸ್ಕರಣಾ ಘಟಕಗಳಿವೆ. ಡೇರಿ ನಿರ್ಮಾಣಕ್ಕಾಗಿ ₹ 260 ಕೋಟಿ ವೆಚ್ಚವಾಗಿದ್ದು, ಕಟ್ಟಡದ ಹೊರಭಾಗದಲ್ಲಿ ಒಟ್ಟು 6 ಲಕ್ಷ ಲೀಟರ್ ಸಾಮರ್ಥ್ಯದ 4 ಬೃಹತ್ ಹಾಲು ಸಂಗ್ರಹಣಾ ಟ್ಯಾಂಕ್‌ಗಳಿವೆ. ಪ್ರತಿ ಟ್ಯಾಂಕ್ಗಳಲ್ಲಿ ತಲಾ 1.5 ಲಕ್ಷ ಲೀಟರ್ ಹಾಲು ಸಂಗ್ರಹ ಸಾಧ್ಯವಿದೆ. ಇದು ರಾಜ್ಯದ ಎರಡನೇ ಅತಿ ದೊಡ್ಡ ಮೆಗಾ ಡೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಮ್ಮೆಲ್ಲರ ಪ್ರೀತಿಯ ನೇತಾರ ಎಚ್ ಡಿ ದೇವೇಗೌಡ ಎಂದು ಅಮಿತ್ ಶಾ ಭಾಷಣ ಆರಂಭಿಸಿದ್ದಾರೆ. ಅಮಿತ್ ಶಾ ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅದನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Fri, 30 December 22