ಗೃಹ ಸಚಿವ ಅಮಿತ್ ಶಾ ಇಂದಿನಿಂದ ಜಮ್ಮು-ಕಾಶ್ಮೀರ ಪ್ರವಾಸ; 2 ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ

| Updated By: Lakshmi Hegde

Updated on: Oct 23, 2021 | 8:51 AM

ಗೃಹ ಸಚಿವರ ಭೇಟಿ ನಿಮಿತ್ತ ಶ್ರೀನಗರ, ಜಮ್ಮು ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲಲ್ಲಿ ತಾತ್ಕಾಲಿಕ ಚೆಕ್​ಪೋಸ್ಟ್​​ಗಳನ್ನು ರಚಿಸಲಾಗಿದೆ. ಜನರ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. 

ಗೃಹ ಸಚಿವ ಅಮಿತ್ ಶಾ ಇಂದಿನಿಂದ ಜಮ್ಮು-ಕಾಶ್ಮೀರ ಪ್ರವಾಸ; 2 ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ
ಅಮಿತ್ ಶಾ (ಸಂಗ್ರಹ ಚಿತ್ರ)
Follow us on

ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ಇಂದು ಜಮ್ಮು-ಕಾಶ್ಮೀರ (Jammu Kashmir)ಕ್ಕೆ ಭೇಟಿ ನೀಡಲಿದ್ದು, ಮೂರು ದಿನ ಅಲ್ಲಿಯೇ ಇರಲಿದ್ದಾರೆ. 2019ರಲ್ಲಿ ಇಲ್ಲಿನ ವಿಶೇಷ ಸ್ಥಾನಮಾನ ತೆಗೆದು, ಅದನ್ನು ಲಡಾಖ್​ ಮತ್ತು ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಬದಲಿಸಿದ ಬಳಿಕ ಇದು ಅಮಿತ್ ಶಾ ಅವರ ಮೊದಲ ಭೇಟಿಯಾಗಿದೆ. ಹಾಗೇ ಇವರೊಂದಿಗೆ ಗೃಹ ಇಲಾಖೆ ಕಾರ್ಯದರ್ಶಿಎ.ಕೆ.ಭಲ್ಲಾ ಸೇರಿ ಇತರ ಹಿರಿಯ ಅಧಿಕಾರಿಗಳು ಇರುವರು. ಕೇಂದ್ರೀಯ ಸಶಸ್ತ್ರ ಪೊಲೀಸ್​ ಪಡೆ (CAPFs)ಯ ಮುಖ್ಯಸ್ಥರು, ಗುಪ್ತಚರ ದಳದ ಮುಖ್ಯಸ್ಥರು ಇರುವರು.  

ಜಮ್ಮು-ಕಾಶ್ಮೀರದ ಮೂರು ದಿನದ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕ ರ್ಯಾಲಿ ನಡೆಸಲಿದ್ದಾರೆ. ಶ್ರೀನಗರ-ಶರ್ಜಾಹ್​​ ಮೊದಲ ನೇರ ವಿಮಾನ ಸಂಚಾರಕ್ಕೆ ಚಾಲನೆ ನೀಡುವರು. ಜಮ್ಮವಿನಲ್ಲಿ ಐಟಿ ಬ್ಲಾಕ್​ ಉದ್ಘಾಟನೆ ಮಾಡಲಿದ್ದಾರೆ. ಎರಡು ವೈದ್ಯಕೀಯ ಉಧಾಂಪುರ ಮತ್ತು ಹಂದ್ವಾರದಲ್ಲಿ 2 ಕಾಲೇಜುಗಳ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡುವ ಜತೆ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ ನಡೆಸಲಿದ್ದಾರೆ.  ಈ ಸಭೆಯಲ್ಲಿ ಸಚಿವ ಜಿತೇಂದ್ರ ಸಿಂಗ್​, ಜಮ್ಮು-ಕಾಶ್ಮೀರ ಲೆಫ್ಟಿನೆಂಟ್​ ಗವರ್ನರ್​ ಇರುವರು.

ಗೃಹ ಸಚಿವರ ಭೇಟಿ ನಿಮಿತ್ತ ಶ್ರೀನಗರ, ಜಮ್ಮು ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲಲ್ಲಿ ತಾತ್ಕಾಲಿಕ ಚೆಕ್​ಪೋಸ್ಟ್​​ಗಳನ್ನು ರಚಿಸಲಾಗಿದೆ. ಜನರ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.  ಸಿಸಿಟಿವಿ ಕ್ಯಾಮರಾಗಳು, ಚಾಲಕ ರಹಿತ ವೈಮಾನಿಕ ವಾಹನಗಳು, ಸ್ನಿಫರ್​ ಶ್ವಾನಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Karwa Chauth 2021: ಈ ಮೂರು ಕಾಯಿಲೆಯಿಂದ ಬಳಲುತ್ತಿರುವವರು ಕರ್ವಾ ಚೌತ್ ಉಪವಾಸ ಮಾಡುವ ಮುನ್ನ ಇರಲಿ ಎಚ್ಚರ

Petrol Price Today: ಮತ್ತಷ್ಟು ಏರಿಕೆಯಾಯ್ತು ಇಂಧನ ದರ; ಲೀಟರ್​ ಪೆಟ್ರೋಲ್​, ಡೀಸೆಲ್​ ಬೆಲೆ ಎಷ್ಟು ಗೊತ್ತಾ?