ತಮಿಳುನಾಡು: ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕಿ ಮೇಲೆ ದಾಳಿ ನಡೆಸಿ ಅರೆ ಜೀವ ಮಾಡಿದ ಹಸು

|

Updated on: Aug 11, 2023 | 10:06 AM

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಬಾಲಕಿ ಮೇಲೆ ಹಸುವೊಂದು ದಾಳಿ ನಡೆಸಿರುವ ಘಟನೆ ಚೆನ್ನೈನ ಎಂಎಂಡಿಎ ಕಾಲೋನಿಯಲ್ಲಿ ನಡೆದಿದೆ. ಬಾಲಕಿ ತಾಯಿ ಹಾಗೂ ತನ್ನ 5 ವರ್ಷದ ಸಹೋದರನೊಂದಿಗೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ

ತಮಿಳುನಾಡು: ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕಿ ಮೇಲೆ ದಾಳಿ ನಡೆಸಿ ಅರೆ ಜೀವ ಮಾಡಿದ ಹಸು
ಹಸು ದಾಳಿ
Follow us on

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಬಾಲಕಿ ಮೇಲೆ ಹಸುವೊಂದು ದಾಳಿ ನಡೆಸಿರುವ ಘಟನೆ ಚೆನ್ನೈನ ಎಂಎಂಡಿಎ ಕಾಲೋನಿಯಲ್ಲಿ ನಡೆದಿದೆ. ಬಾಲಕಿ ತಾಯಿ ಹಾಗೂ ತನ್ನ 5 ವರ್ಷದ ಸಹೋದರನೊಂದಿಗೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ನಡೆದುಕೊಂಡು ಹೋಗುತ್ತಿರುವಾಗ ಎರಡು ಹಸುಗಳು ಬಂದಿವೆ, ಅದರಲ್ಲಿ ಒಂದು ಹಸು ಬಾಲಕಿ ಮೇಲೆ ಕೋಡಗಿನಿಂದ ತಿವಿದು, ಕಾಲಿನಿಂದ ಮೆಟ್ಟಿ ದಾಳಿ ನಡೆಸಿ ಅರೆ ಜೀವ ಮಾಡಿದೆ.

ಆಕೆಯ ತಾಯಿ ಮಗಳ ಸಹಾಯಕ್ಕೆಂದು ಮುಂದಾದರೂ ಆ ಹಸು ತಾಯಿಯನ್ನು ಗದರಿಸಿ ಬಾಲಕಿ ಮೇಲೆ ದಾಳಿ ಮಾಡಿದೆ. ಕೊನೆಗೆ ಅಲ್ಲಿದ್ದವರು ಕಲ್ಲು, ಇಟ್ಟಿಗೆಗಳನ್ನು ಹಸುವಿನ ಮೇಲೆಸದರೂ ಯಾವುದೇ ಪ್ರಯೋಜನವಾಗಲಿಲ್ಲ, ಮಧ್ಯದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬ ಕಲ್ಲೆಸೆದು ಬಾಲಕಿಯನ್ನು ರಕ್ಷಿಸಬೇಕು ಎಂದುಕೊಂಡು ಬಾಲಕಿಯನ್ನು ಎಳೆದುಕೊಳ್ಳುವಷ್ಟರಲ್ಲಿ ಮತ್ತೆ ದಾಳಿ ನಡೆಸಿದೆ.

ಮತ್ತಷ್ಟು ಓದಿ: ದಾವಣಗೆರೆ: ಚಿರತೆ ದಾಳಿಯಿಂದ ಮಾಲೀಕನನ್ನು ಕಾಪಾಡಿದ ಹಸು ಗೌರಿ

ಅಂತ್ಯದಲ್ಲಿ ಹಿಂದಿನಿಂದ ವ್ಯಕ್ತಿಯ ಕೋಲಿನಿಂದ ಹೊಡೆದಾಗ ಬಾಲಕಿಯನ್ನು ಬಿಟ್ಟು ಓಡಿ ಹೋಗಿದೆ. ಆಗ ತಕ್ಷಣವೇ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡ ಬಾಲಕಿಯನ್ನು ಆಯೆಷಾ ಎಂದು ಹೇಳಲಾಗುತ್ತಿದೆ, ಈ ಘಟನೆ ಆಗಸ್ಟ್ 9ಕ್ಕೆ ನಡೆದಿದ್ದು, ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಮಗುವಿನ ತಾಯಿ ನೀಡಿದ ದೂರು ಮತ್ತು ಹೆಚ್ಚಿನ ತನಿಖೆಯ ನಂತರ ಹಸುವಿನ ಮಾಲೀಕನನ್ನು ಬಂಧಿಸಲಾಗಿದೆ. ಜಾನುವಾರ ಮಾಲೀಕನಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.

ಹಸು ಯಾವುದಾದರೂ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆಯೇ ಮತ್ತು ಯಾವುದಾದರೂ ಕಾಯಿಲೆಯಿಂದಾಗಿ ಈ ರೀತಿ ವರ್ತಿಸಿದೆಯೇ ಖಚಿತಪಡಿಸಿಕೊಳ್ಳಲಾಗುವುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ