ದಾವಣಗೆರೆ: ಚಿರತೆ ದಾಳಿಯಿಂದ ಮಾಲೀಕನನ್ನು ಕಾಪಾಡಿದ ಹಸು ಗೌರಿ

ತನ್ನ ಮಾಲೀಕನ ಮೇಲೆ ದಾಳಿ ನಡೆಸಿದ ಚಿರತೆಗೆ ಕೊಂಬಿನಿಂದ ತಿವಿದು ರಕ್ಷಿಸಿದ ಅಪರೂಪದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ. ಇತ್ತ ಮನೆಯ ಯಜಮಾನನ್ನು ಉಳಿಸಿದ್ದಕ್ಕೆ ಹಸುವಿನ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದಾರೆ.

ದಾವಣಗೆರೆ: ಚಿರತೆ ದಾಳಿಯಿಂದ ಮಾಲೀಕನನ್ನು ಕಾಪಾಡಿದ ಹಸು ಗೌರಿ
ಚಿರತೆ ದಾಳಿಯಿಂದ ಮಾಲೀಕನನ್ನು ಕಾಪಾಡಿದ ಹಸು ಗೌರಿ
Follow us
Rakesh Nayak Manchi
|

Updated on: Jun 09, 2023 | 9:55 PM

ದಾವಣಗೆರೆ: ತನ್ನ ಮಾಲೀಕನ ಮೇಲೆ ದಾಳಿ ನಡೆಸಿದ ಚಿರತೆಗೆ (Leopard Attack) ಕೊಂಬಿನಿಂದ ತಿವಿದು ರಕ್ಷಿಸಿದ ಅಪರೂಪದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ. ಇತ್ತ ಮನೆಯ ಯಜಮಾನನ್ನು ಉಳಿಸಿದ್ದಕ್ಕೆ ಗೌರಿ ಮೇಲೆ ಕುಟುಂಬಸ್ಥರು ಇನ್ನಿಲ್ಲದ ಪ್ರೀತಿ ತೋರಿಸುತ್ತಿದ್ದಾರೆ. ಸದ್ಯ ಚಿರತೆಯ ದಾಳಿಯಿಂದ ಕೊಡಕಿನಕೆರೆ ಮತ್ತು ಸುತ್ತಮುತ್ತ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

ಚನ್ನಗಿರಿ ತಾಲೂಕಿನ ಉಬ್ರಾಣಿ ಹತ್ತಿರ ಕೊಡಕಿನಕೆರೆ ಗ್ರಾಮದ ಕರಿಹಾಲಪ್ಪ ಅವರು ತೋಟದಲ್ಲಿ ಹಸು ಮೇಯಿಸಲು ತೆರಳಿದ್ದರು. ಈ ವೇಳೆ ಕರಿಹಾಲಪ್ಪ ಅವರ ಮೇಲೆ ಚಿರತೆ ಏಕಾಏಕಿಯಾಗಿ ದಾಳಿ ನಡೆಸಿದೆ. ಇದನ್ನು ನೋಡಿದ ಹಸು ಗೌರಿ, ಚಿರತೆ ಮೇಲೆ ದಾಳಿ ನಡೆಸಿ ತಲೆಯಿಂದ ಗುದ್ದಿ ದೂರಕ್ಕೆ ಸರಿಸಿದೆ. ಹಸುವಿನ ಏಟು ತಿಂದರೂ ಸುಮ್ಮನಾಗದ ಚಿರತೆ ಮತ್ತೆ ದಾಳಿಗೆ ಮುಂದಾಗಿದೆ.

ಇದನ್ನೂ ಓದಿ: Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಎರಡನೇ ಬಾರಿ ದಾಳಿ ನಡೆಸಲು ಮುಂದಾದಾಗ ಕರಿಹಾಲಪ್ಪ ಅವರು ಕೈಯಲ್ಲಿರುವ ದೊಣ್ಣೆ ಹಿಡಿದು ಬೆದರಿಸಿದ್ದಾರೆ. ಇದರಿಂದ ಬೆದರಿದ ಚಿರತೆ ಕಾಡಿನೊಳಗೆ ಓಡಿದೆ. ಸದ್ಯ ಕರಿಹಾಲಪ್ಪ ಅವರ ಜೀವ ಉಳಿಸಿದ ಗೌರಿ ಮೇಲೆ ಕುಟುಂಬಸ್ಥರು ಸಂತೋಷಗೊಂಡಿದ್ದಾರೆ. ಇತ್ತ ಚಿರತೆ ದಾಳಿಯಿಂದಾಗಿ ಕೊಡಕಿನಕೆರೆ ಮತ್ತು ಸುತ್ತಮುತ್ತ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ಸೋಮವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೆಲವು ತಿಂಗಳ ಹಿಂದೆಯಷ್ಟೇ, ಕರುವಿನ ಮೇಲೆ ದಾಳಿ ನಡೆಸಿದ್ದ ಹುಲಿಯನ್ನು ಬೆನ್ನಟ್ಟಿದ್ದ ಹಸುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕರ್ನಾಟಕದಲ್ಲೂ ಇಂದತಹದ್ದೇ ಒಂದು ಘಟನೆ ನಡೆದಿತ್ತು. ಜಾನುವಾರುಗಳನ್ನು ರಕ್ಷಿಸಲು ಹೋದ ನಾಯಿಯೊಂದು ಚಿರತೆ ಬಾಯಿಗೆ ತುತ್ತಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ