ಮಾತಿಗೆ ನಿಲುಕದ ದುರಂತ, ಮಗಳ ಮದುವೆಗಾಗಿ ಸಿದ್ಧತೆ ನಡೆಸಿದ್ದ ಮನೆ ಬೆಂಕಿಗೆ ಆಹುತಿ, ಭಸ್ಮವಾದ ಹಣ ಚಿನ್ನಾಭರಣ

Wedding Tragedy: ಮನೆಯಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ನಗದು, ಚಿನ್ನಾಭರಣ, ಬೆಳ್ಳಿಯ ಆಭರಣಗಳು ಬೆಂಕಿಗೆ ಆಹುತಿಯಾಗಿವೆ. ಮದುವೆ ದಿನ ಸಮೀಪಿಸುತ್ತಿದ್ದಂತೆ ಮುಂದೇನು ಮಾಡಬೇಕು ಎಂದು ತೋಚದೆ ಮನೆಯವರು ತೀವ್ರ ಅಳಲು ತೋಡಿಕೊಳ್ಳುತ್ತಿದ್ದಾರೆ.

ಮಾತಿಗೆ ನಿಲುಕದ ದುರಂತ, ಮಗಳ ಮದುವೆಗಾಗಿ ಸಿದ್ಧತೆ ನಡೆಸಿದ್ದ ಮನೆ ಬೆಂಕಿಗೆ ಆಹುತಿ, ಭಸ್ಮವಾದ ಹಣ ಚಿನ್ನಾಭರಣ
ಮದುವೆಗಾಗಿ ಸಿದ್ಧತೆ ನಡೆಸಿದ್ದ ಮನೆ ಬೆಂಕಿಗೆ ಆಹುತಿ, ಭಸ್ಮವಾದ ಹಣ ಆಭರಣ
Follow us
ಸಾಧು ಶ್ರೀನಾಥ್​
|

Updated on: Feb 21, 2024 | 1:14 PM

ಕರ್ನೂಲ್ ಜಿಲ್ಲೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಸಂಭ್ರಮ ಮನೆಮಾಡಿದ್ದ ಆ ಮನೆಯಲ್ಲಿ ವಿಷಾದವಷ್ಟೇ ಉಳಿದಿದೆ. ಹೆಣ್ಣು ಮಗಳಿಗಾಗಿ ಮದುವೆ ಮಾಡಲು ಪಟ್ಟ ಶ್ರಮವೆಲ್ಲ ವ್ಯರ್ಥವಾಗಿದೆ. ಮದುವೆ ದಿನಾಂಕದ ಬಗ್ಗೆಯೂ ಸಂಬಂಧಿಕರಿಗೆ ಮಾಹಿತಿ ನೀಡಿ, ಆಹ್ವಾನಿಸಲಾಗಿತ್ತು. ಮದುವೆಯ ದಿನ ಹತ್ತಿರವಾಗುತ್ತಿದಂತೆ ಸಾಲಸೋಲ ಮಾಡಿ ನಗದು, ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಮನೆಯಲ್ಲಿ ಎತ್ತಿಟ್ಟಿದ್ದಾರೆ. ಸರಿಯಾಗಿ ಅದೇ ವೇಳೆಗೆ ದುರಂತ ಕ್ಷಣ ಎದುರಾಗಿದೆ. ಅಗ್ನಿ ಅನಾಹುತ ಘಟಿಸಿ, ಆಭರಣ, ಹಣ ಎಲ್ಲಾ ಬೆಂಕಿಗೆ ಆಹುತಿಯಾಗಿದೆ. ಈ ಅಚಾನಕ್ಕಾದ ಪ್ರಮಾದವು ನಡೆಯಬೇಕಿದ್ದ ಮದುವೆಗೆ ವಿಘ್ನ ತಂದಿದೆ. ಮನೆಯಲ್ಲಿ ದುಃಖ ಮಡುಗಟ್ಟಿದೆ.

ಕಟಿಕೆ ಮೋಹನ್ ರಾವ್, ನಾಗೇಶ್ವರ್ ರಾವ್ ಅವರು ಕರ್ನೂಲ್ ಜಿಲ್ಲೆಯ ದೇವನಕೊಂಡ ಮಂಡಲದ ಕರಿವೇಮಲ್ ಗ್ರಾಮದ ನಿವಾಸಿಗಳು. ತಮ್ಮ ಸಹೋದರಿಗೆ ವಿವಾಹ ನಿಶ್ಚಯ ಮಾಡಿದರು. ಅದಕ್ಕಾಗಿ ಅಲ್ಲಿ ಇಲ್ಲಿ ಸಾಲಸೋಲ ಮಾಡಿ 15 ಲಕ್ಷ ರೂಪಾಯಿ ನಗದು, 10 ತೊಲೆ ಚಿನ್ನ, 20 ಪೌಂಡ್ ಬೆಳ್ಳಿಯನ್ನು ತಂದು ಮನೆಯಲ್ಲಿ ಮದುವೆ ಸಮಾರಂಭಕ್ಕಾಗಿ ಇಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಆ ಮನೆ ಬೆಂಕಿ ಬಿದ್ದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ.

Also Read:  ಶ್ರೀಕಾಕುಳಂನಲ್ಲಿ ನಡುರಾತ್ರಿ ಜ್ಯುವೆಲ್ಲರಿ ಶಾಪ್​​ ದರೋಡೆ.. ಅಸಲಿಗೆ ಅವರಿಗೆ ಪಿಸ್ತೂಲು ಎಲ್ಲಿಂದ ಬಂತು?

ಮನೆಯಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ನಗದು, ಚಿನ್ನಾಭರಣ, ಬೆಳ್ಳಿಯ ಆಭರಣಗಳು ಬೆಂಕಿಗೆ ಆಹುತಿಯಾಗಿವೆ. ಸಂತ್ರಸ್ತ ಕುಟುಂಬದವರು ತೀವ್ರ ಶೋಕ ವ್ಯಕ್ತಪಡಿಸುತ್ತಿದ್ದಾರೆ. ಮದುವೆ ದಿನ ಸಮೀಪಿಸುತ್ತಿದ್ದಂತೆ ಮುಂದೇನು ಮಾಡಬೇಕು ಎಂದು ತೋಚದೆ ಮನೆಯವರು ತೀವ್ರ ಅಳಲು ತೋಡಿಕೊಳ್ಳುತ್ತಿದ್ದಾರೆ. ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ