‘ನರೇಂದ್ರ ಮೋದಿ ಒಬಿಸಿ ಆದದ್ದು ಹೇಗೆ?’; ಜಾತಿ ಗಣತಿ ಪರ ಮತ್ತೆ ರಾಹುಲ್ ಗಾಂಧಿ ಬ್ಯಾಟಿಂಗ್

|

Updated on: May 27, 2024 | 9:05 PM

Caste Census: ಮೀಸಲಾತಿಯ ಬಗ್ಗೆ ಕಾಂಗ್ರೆಸ್, ಬಿಜೆಪಿ ಮತ್ತು ಎಡಪಕ್ಷಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಸ್​ಸಿ, ಎಸ್​ಟಿಗಳ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುತ್ತದೆ ಎಂದು ಬಿಜೆಪಿ ಆರೋಪಿಸಿದೆ. ಹಾಗೇ, ಪ್ರಧಾನಿ ಮೋದಿ ಜಗತ್ತಿನಲ್ಲಿ ಇರುವುದು ಶ್ರೀಮಂತರು ಮತ್ತು ಬಡವರು ಎಂಬ 2 ಜಾತಿ ಮಾತ್ರ ಎಂದಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ನರೇಂದ್ರ ಮೋದಿ ಒಬಿಸಿ ಆದದ್ದು ಹೇಗೆ?; ಜಾತಿ ಗಣತಿ ಪರ ಮತ್ತೆ ರಾಹುಲ್ ಗಾಂಧಿ ಬ್ಯಾಟಿಂಗ್
ರಾಹುಲ್ ಗಾಂಧಿ
Follow us on

ನವದೆಹಲಿ: ಮೀಸಲಾತಿ ಕುರಿತು ನಡೆಯುತ್ತಿರುವ ಆರೋಪಗಳ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ ನಡೆಸಲಿದೆ ಎಂದು ರಾಹುಲ್ ಗಾಂಧಿ ಪುನರುಚ್ಛರಿಸಿದ್ದಾರೆ. ಬಿಹಾರದ ಭೋಜ್‌ಪುರದಲ್ಲಿ ಲೋಕಸಭಾ ಚುನಾವಣಾ ರ್ಯಾಲಿಯನ್ನು (Lok Sabha Election Rally) ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಗತ್ತಿನಲ್ಲಿ ಕೇವಲ 2 ಜಾತಿಗಳಿವೆ ಎಂದು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ತನ್ನನ್ನು ಒಬಿಸಿ ಎಂದು ಏಕೆ ಗುರುತಿಸಿಕೊಳ್ಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ನಾನು ಜಾತಿ ಗಣತಿಯ ವಿಷಯವನ್ನು ಪ್ರಸ್ತಾಪಿಸಿದಾಗ, ನರೇಂದ್ರ ಮೋದಿ ಅವರು ಭಾರತದಲ್ಲಿ ಕೇವಲ 2 ಜಾತಿಗಳಿವೆ. ಅವುಗಳೆಂದರೆ, ಶ್ರೀಮಂತರು ಮತ್ತು ಬಡವರು. ಕೇವಲ ಎರಡೇ ಜಾತಿಗಳಿದ್ದರೆ ನರೇಂದ್ರ ಮೋದಿ ಹೇಗೆ ಒಬಿಸಿ ಆದರು? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜಾತಿಗಣತಿ ವರದಿಯಲ್ಲಿ ಜನಸಂಖ್ಯೆ ಬಹಿರಂಗ: ಎಸ್ಸಿ ಫಸ್ಟ್‌, ಕುರುಬ ಜನಾಂಗವೇ ಅತಿ ಹಿಂದುಳಿದ ವರ್ಗ!

‘‘ಭಾರತ ದೇಶದಲ್ಲಿ ಶೇ.50ರಷ್ಟು ಜನಸಂಖ್ಯೆ ಹಿಂದುಳಿದವರು, ಶೇ.15ರಷ್ಟು ದಲಿತರು, ಶೇ.8ರಷ್ಟು ಆದಿವಾಸಿಗಳು ಇದ್ದಾರೆ. ಹಿಂದುಳಿದವರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ಎಷ್ಟು ಮಂದಿ ಇದ್ದಾರೆ ಎಂಬುದು ದೇಶಕ್ಕೆ ಗೊತ್ತಾಗಬೇಕು. ನಾವೂ ಕೂಡ ಆರ್ಥಿಕ ಸಮೀಕ್ಷೆ ನಡೆಯಬೇಕು ಎಂದು ಹೇಳಿದ್ದೆವು. ದೇಶದಲ್ಲಿ ಕೇವಲ 2 ಜಾತಿಗಳಿದ್ದರೆ ಮೋದಿಯವರು ಒಬಿಸಿ ಆಗಿದ್ದು ಹೇಗೆ? ನಮ್ಮ ಸರ್ಕಾರ ಬಂದ ಕೂಡಲೇ ಜಾತಿ ಗಣತಿ, ಆರ್ಥಿಕ ಸಮೀಕ್ಷೆ ಮತ್ತು ಸಾಂಸ್ಥಿಕ ಸಮೀಕ್ಷೆ ನಡೆಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಿಂದ ರಾಹುಲ್ ಗಾಂಧಿ, ಕೇಜ್ರಿವಾಲ್​ಗೆ ಬೆಂಬಲ; ಮೋದಿ ಹೇಳಿದ್ದೇನು?

2023ರ ನವೆಂಬರ್​ನಲ್ಲಿ ಛತ್ತೀಸ್‌ಗಢದ ದುರ್ಗ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಭಾರತದಲ್ಲಿ ಒಂದೇ ಜಾತಿ ಇದೆ. ಅದು ಬಡತನ ಎಂದು ಹೇಳಿದ್ದರು. “ಬಡವರಿಗೆ ಮೋದಿ ಅವರ ಸೇವಕ, ಅವರ ಸಹೋದರ ಮತ್ತು ಅವರ ಮಗ” ಎಂದು ಕೂಡ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ