
ನವದೆಹಲಿ, (ಮೇ 14): ಪಾಕಿಸ್ತಾನಿ ಮೂಲದ ಪತ್ರಕರ್ತರೇ ಹೆಚ್ಚಿರುವ ಅಂತಾರಾಷ್ಟ್ರೀಯ ನ್ಯೂಸ್ ಚಾನಲ್ ಮತ್ತು ಪತ್ರಿಕೆಗಳ ಮೂಲಕ ಭಾರತದ ಬಗ್ಗೆ ಪಾಕ್ ಹಸಿ ಹಸಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಭಾರತದ ರಫೇಲ್ (rafale jet) ಯುದ್ಧ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎನ್ನುವ ಸುದ್ದಿ ಹಬ್ಬಿಸಲಾಗಿದೆ. ಪಾಕ್ ಸೇನೆ ಭಾರತದ ರಫೇಲ್ ಹೊಡೆದುರುಳಿಸಿದೆ ಎಂದು ಸಾಯೀದ್ ಶಾ ಎನ್ನುವರ ಹೆಸರಿನಲ್ಲಿ ಲೇಖನ ಪ್ರಕಟವಾಗಿದೆ. ಆದ್ರೆ, ಈ ಲೇಖನ ಬರೆದ ಸಾಯೀದ್ ಶಾ ಯಾರು ಎನ್ನುವುದು ನೋಡಿದಾಗ ಆತನ ಹೆಸರಿನಲ್ಲಿ ಇಲ್ಲಿವರೆಗೆ ಕೇವಲ ಮೂರೇ ಮೂರು ಲೇಖನಗಳು ಪ್ರಕಟವಾಗಿವೆ. ಅದೂ ಭಾರತದ ವಿರುದ್ಧವಾಗಿರುವ ಲೇಖನಗಳು. ಹೀಗಾಗಿ ವಿಶ್ವಮಟ್ಟದ ಮಾಧ್ಯಮ ರಾಯಿಟರ್ಸ್ ಮೂಲಕ ಭಾರತದ ರಫೇಲ್ ಫೈಟರ್ ಜೆಟ್ ಉಡೀಸ್ ಮಾಡಲಾಗಿದೆ ಎನ್ನುವ ಸುಳ್ಳು ಸುದ್ದಿ ಬಿತ್ತರಿಸಿರುವುದು ಬೆಳಕಿಗೆ ಬಂದಿದೆ.
ಮೇ 9, 2025 ರಂದು, ರಾಯಿಟರ್ಸ್ “ಪಾಕಿಸ್ತಾನದ ಚೀನಾ ನಿರ್ಮಿತ ಜೆಟ್ ಮೂಲಕ ಎರಡು ಭಾರತೀಯ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳುತ್ತಾರೆ” ಎಂಬ ಶೀರ್ಷಿಕೆಯ ಲೇಖನವನ್ನು ಪ್ರಕಟಿಸಿತು. ಪಾಕಿಸ್ತಾನದ ಸೇನೆಯು ಚೀನಾ ನಿರ್ಮಿತ ಜೆಟ್‌ಗಳನ್ನು ಬಳಸಿಕೊಂಡು ಎರಡು ಭಾರತೀಯ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ವರದಿಯಲ್ಲಿ ಬರೆಯಲಾಗಿದೆ. ಆದ್ರೆ, ಲೇಖನದಲ್ಲಿ ಯಾವುದೇ ಪುರಾವೆಗಳು ಇಲ್ಲ. ಹಾಗೇ ಲೇಖನದಲ್ಲಿ ಅಸ್ಪಷ್ಟವಾಗಿ ವಿವರಿಸಲಾಗಿದೆ.
ರಾಯಿಟರ್ಸ್ನ ಲೇಖನದಲ್ಲಿ “ಇಬ್ಬರು ಯುಎಸ್ ಅಧಿಕಾರಿಗಳನ್ನು” ಉಲ್ಲೇಖಿಸಿದೆ. ಅವರು ಯಾರು? ಏನು ಎನ್ನುವುದನ್ನು ದೃಢಪಡಿಸಿಲ್ಲ. ಬದಲಿಗೆ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು ಆ ಲೇಖನದಲ್ಲಿ ಹೈಲೈಟ್ ಮಾಡಲಾಗಿದೆ. ಇನ್ನು ಈ ಲೇಖನ ಬರೆದ ಸಾಯೀದ್ ಶಾ ಯಾರು ಎನ್ನುವುದನ್ನು ನೋಡಿದಾಗ ಈತನ ಹೆಸರಿನಲ್ಲಿ ಕೇವಲ 3 ಲೇಖನಗಳು ಪ್ರಕಟವಾಗಿವೆ. ಅವು ಎಲ್ಲವೂ ಪಾಕಿಸ್ತಾನದ ಪರವಾಗಿವೆ. ಈ ಎಲ್ಲಾವನ್ನು ಪರಿಶೀಲನೆ ಮಾಡಿದಾಗ ಕಂತೆ ಕಂತೆ ಸುಳ್ಳು ಬಯಲಾಗಿದೆ.
6. On diving a little deeper, it was found that “Saeed Shah” has written only three articles for Reuters to date.
His first article was on 5th May, 2025 and last article on 9th May, 2025. All these 3 articles are Pro-Pakistan. He was hired for the hit job.
So this exposes… pic.twitter.com/JlOq5JSkXb
— Dr. Anita Vladivoski (@anitavladivoski) May 14, 2025
ಇನ್ನು ಇದೇ ವಿಚಾರವಾಗಿ ಪಾಕಿಸ್ತಾನದ ರಕ್ಷಣಾ ಸಚಿವರು ಸಹ ಮಾಧ್ಯಮಮದ ಸಂದರ್ಶನವೊಂದರಲ್ಲಿ, ಈ ಬಗ್ಗೆ ಮಾತನಾಡಿ “ಸಾಕ್ಷ್ಯಗಳು ಸಾಮಾಜಿಕ ಜಾಲತಾಣಗಳಲ್ಲಿವೆ ಎಂದು ಹೇಳಿದ್ದರು. ಈ ಹೇಳಿಕೆಯು ರಾಯಿಟರ್ಸ್ನಲ್ಲಿನ ಲೇಖನದ ಸತ್ಯಾಸತ್ಯತೆಯ ಬಗ್ಗೆ ಸಂದೇಹವನ್ನು ಮತ್ತಷ್ಟು ಹೆಚ್ಚಿಸಿತ್ತು.
ಆಪರೇಷನ್ ಸಿಂಧೂರ್ ವೇಳೆ ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನ ಸೇನೆಯ ಹೇಳಿಕೆಯನ್ನು ಭಾರತೀಯ ವಾಯುಪಡೆ ತಳ್ಳಿಹಾಕಿದೆ. ಈ ಬಗ್ಗೆ ಮಾತನಾಡಿದ ಏರ್ ಮಾರ್ಷಲ್ ಎ.ಕೆ. ಭಾರ್ತಿ, ಪಾಕಿಸ್ತಾನದ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತ. ಯುದ್ದದ ಸಂದರ್ಭದಲ್ಲಿ ಕೆಲವು ನಷ್ಟವಾಗೋದು ಸಾಮಾನ್ಯ, ಆದರೆ ನಮ್ಮ ಎಲ್ಲಾ ರಫೇಲ್ ಜೆಟ್‌ಗಳು ಸುರಕ್ಷಿತವಾಗಿವೆ. ನಾವು ನಿಗದಿತ ಗುರಿಗಳನ್ನು ಸಾಧಿಸಿದ್ದೇವೆ ಮತ್ತು ನಮ್ಮ ಎಲ್ಲಾ ಪೈಲಟ್‌ಗಳು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಭಾರತದ ರಫೇಲ್ ಯುದ್ಧ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎನ್ನುವ ಸುದ್ದಿಯ ಸುಳ್ಳಿನ ಕಂತೆ ಬಯಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Wed, 14 May 25