N-95 ಮಾಸ್ಕ್ ಕೊರೊನಾ ತಡೆಯುತ್ತಾ? ಮಾಸ್ಕ್ ಬಳಸುವ ಮುನ್ನ ಇರಲಿ ಎಚ್ಚರಾ

ದೆಹಲಿ: ಮಹಾಮಾರಿ ಕೊರೊನಾದಿಂದ ಜನ ಮುಖ ಮುಚ್ಚಿ ನಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಾವು ಬಳಸುತ್ತಿರೋ ಫೇಸ್ ಮಾಸ್ಕ್ ಎಷ್ಟು ಸೂಕ್ತ? ಫೇಸ್ ಮಾಸ್ಕ್ ಧರಿಸುವುದರಿಂದ ವೈರಸ್ ತಡೆಯಬಹುದು. ಆದರೆ N-95 ಮಾಸ್ಕ್ ಸರಿಯಾದ ರೀತಿಯಲ್ಲಿ ಬಳಸದಿದ್ರೆ ಹೆಮ್ಮಾರಿ ವಕ್ಕರಿಸುತ್ತೆ ಅಂತ ಕೇಂದ್ರ ಸರ್ಕಾರ ಎಚ್ಚರಿಸಿದೆ. N-95 ಮಾಸ್ಕ್ ಬಳಸುವ ಮುನ್ನ ಎಚ್ಚರ ಕೇಂದ್ರ ಆರೋಗ್ಯ ‌ಇಲಾಖೆ ಪ್ರಕಾರ ಎನ್-95 ಮಾಸ್ಕ್ ಬಳಕೆದಾರರು ಮಾಸ್ಕ್​ ಬಳಸುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ N -95 ಮಾಸ್ಕ್ ಗಳು‌ […]

N-95 ಮಾಸ್ಕ್ ಕೊರೊನಾ ತಡೆಯುತ್ತಾ? ಮಾಸ್ಕ್ ಬಳಸುವ ಮುನ್ನ ಇರಲಿ ಎಚ್ಚರಾ
Edited By:

Updated on: Jul 21, 2020 | 8:57 AM

ದೆಹಲಿ: ಮಹಾಮಾರಿ ಕೊರೊನಾದಿಂದ ಜನ ಮುಖ ಮುಚ್ಚಿ ನಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಾವು ಬಳಸುತ್ತಿರೋ ಫೇಸ್ ಮಾಸ್ಕ್ ಎಷ್ಟು ಸೂಕ್ತ? ಫೇಸ್ ಮಾಸ್ಕ್ ಧರಿಸುವುದರಿಂದ ವೈರಸ್ ತಡೆಯಬಹುದು. ಆದರೆ N-95 ಮಾಸ್ಕ್ ಸರಿಯಾದ ರೀತಿಯಲ್ಲಿ ಬಳಸದಿದ್ರೆ ಹೆಮ್ಮಾರಿ ವಕ್ಕರಿಸುತ್ತೆ ಅಂತ ಕೇಂದ್ರ ಸರ್ಕಾರ ಎಚ್ಚರಿಸಿದೆ.

N-95 ಮಾಸ್ಕ್ ಬಳಸುವ ಮುನ್ನ ಎಚ್ಚರ
ಕೇಂದ್ರ ಆರೋಗ್ಯ ‌ಇಲಾಖೆ ಪ್ರಕಾರ ಎನ್-95 ಮಾಸ್ಕ್ ಬಳಕೆದಾರರು ಮಾಸ್ಕ್​ ಬಳಸುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ N -95 ಮಾಸ್ಕ್ ಗಳು‌ ಕೊರೊನಾ ವೈರಸ್ ಹರಡದಂತೆ ತಡೆಯುತ್ತೆ. ಆದ್ರೆ ಅದನ್ನ ಸರಿಯಾದ ಕ್ರಮದಲ್ಲಿ ಬಳಕೆ ಮಾಡಬೇಕು ಹಾಗೂ ವಿಲೇವಾರಿ ಮಾಡಬೇಕು. ಉಸಿರಾಟದ ಸಮಸ್ಯೆ ಇರುವವರು ಮಾಸ್ಕ್ ಸರಿಯಾದ ಕ್ರಮದಲ್ಲಿ ಬಳಕೆ ಮಾಡಬೇಕು.

ಸಾರ್ವಜನಿಕರು ಎನ್-95 ಮಾಸ್ಕ್ ಸರಿಯಾದ ರೀತಿಯಲ್ಲಿ ಬಳಕೆ ಮಾಡ್ತಿಲ್ಲಾ. N-95 ಮಾಸ್ಕ್​ಗಳನ್ನ ತಪ್ಪಾಗಿ‌ ಬಳಕೆ ಮಾಡ್ತಾ ಇದ್ದಾರೆ. ಮಾಸ್ಕ್ ಧರಿಸುವ ಮತ್ತು ವಿಲೇವಾರಿ ಮಾರ್ಗಸೂಚಿಗಳನ್ನ ಪಾಲಿಸುವಂತೆ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ರಾಜೀವ್ ಗರ್ಗ್ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಹಾಗೂ ಸಾರ್ವಜನಿಕರು ಮನೆಯಲ್ಲಿಯೇ ತಯಾರಿಸಿದ ಬಟ್ಟೆ ಮಾಸ್ಕ್ ಧರಿಸುವಂತೆ ಸೂಚಿಸಿದ್ದಾರೆ.

Follow Us