ಸಂಸತ್ತಿನಲ್ಲಿ ಭದ್ರತಾ ಲೋಪ (Parliament security breach) ಉಂಟಾಗಿದ್ದು, ಸಾಗರ್ ಶರ್ಮ ಮತ್ತು ಮನೋರಂಜನ್ ಎಂಬ ಇಬ್ಬರು ಯುವಕರು ಸಂಸತ್ ಅಧಿವೇಶದಲ್ಲಿ ನಿಂತ ಅಶ್ರುವಾಯು ಸಿಡಿಸಿದ ಘಟನೆ ನಡೆದಿದೆ. ಇದೀಗ ಒಟ್ಟು ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧನವಾಗಿರುವ ನಾಲ್ವರಲ್ಲಿ ಒಬ್ಬ ಮೈಸೂರಿನ ಮನೋಹರ್ ಎಂದು ಹೇಳಲಾಗಿದೆ. ಇವರಿಗೆ ಸಂಸತ್ ಒಳಗೆ ಹೋಗಲು ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಪಿಎ ಪಾಸ್ ನೀಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈ ವಿಸಿಟರ್ಸ್ ಪಾಸ್ ಎಂದರೇನು? ಸಂಸತ್ ಒಳಗೆ ಒಬ್ಬ ಸಾಮಾನ್ಯ ವ್ಯಕ್ತಿ ಹೋಗಬೇಕಾದರೆ ಯಾವೆಲ್ಲ ಕ್ರಮ ಮತ್ತು ಭದ್ರತೆಗಳನ್ನು ಪರಿಶೀಲನೆ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಸಂಸತ್ತಿನ ಸಂಕೀರ್ಣದೊಳಗೆ ಹೋಗಲು ನೀಡುವ ಗ್ಯಾಲರಿ ಪಾಸ್‌ಗಳ ವಿತರಣೆಯ ನಿಯಂತ್ರಣ ಪ್ರೋಟೋಕಾಲ್ ಹೊಂದಿರುತ್ತದೆ. ಸಂಸತ್ತಿನ ಸದಸ್ಯರು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸಬಹುದು, ಪತ್ರಕರ್ತರು, ಮಾಧ್ಯಮ ಮಿತ್ರರು ವೀಕ್ಷಕರಾಗಿ ಈ ಪಾಸ್ ಪಡೆಯಬಹುದು , ಪ್ರತಿ ಪಾಸ್‌ಗೆ ವಿಶಿಷ್ಟ ಐಡಿಯನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಈ ಪಾಸ್ ಐಡಿಯಲ್ಲೂ ಬೇರೆ ಬೇರೆ ವಿಧಗಳಿವೆ. ಪ್ರೇಕ್ಷಕರ ಗ್ಯಾಲರಿಗೆ ಪಾಸ್ ಪಡೆಯಬೇಕಾದರೆ ಸಂಸದ ಸಹಿ ಕೂಡ ಇರಬೇಕು. ಒಂದು ಪಾಸ್ನಲ್ಲಿ ಇಬ್ಬರು ಹೋಗಬಹುದು. ಆ ಪಾಸಿನಲ್ಲಿ ಒಬ್ಬ ಮತ್ತು ಪ್ಲಸ್ ಎಂದು ನಮೂದಿಸಿರುತ್ತಾರೆ. ಇನ್ನು ವಿದ್ಯಾರ್ಥಿಗಳು ಈ ಪಾಸ್ ಪಡೆಯಬೇಕಾದರೆ ಶಾಲೆಯಿಂದ ಒಂದು ಪತ್ರವನ್ನು ಪಡೆದು, ಅದಕ್ಕೆ ಸಂಸದರ ಸಹಿ ಇದ್ದು, ನಂತರ ಹೋಗಬಹುದು.
ಸಂಸತ್ತಿನ ಒಳಗೆ ಹಲವು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ಇದನ್ನು ನೋಡಿಕೊಳ್ಳುವವರು ಜಂಟಿ ಕಾರ್ಯದರ್ಶಿ. ಇದರಲ್ಲಿ ದೆಹಲಿ ಪೊಲೀಸ್, ಸಂಸತ್ತು ರಕ್ಷಕರು ಮತ್ತು ವಿವಿಧ ಮಿತ್ರ ಭದ್ರತಾ ಏಜೆನ್ಸಿಗಳನ್ನು ಒಳಗೊಂಡಿರುತ್ತಾರೆ. ಇನ್ನು ಸಂಸತ್ತಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಬಹು-ಪದರದಿಂದ ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸಾಂಪ್ರದಾಯಿಕ ಭದ್ರತಾ ಕ್ರಮಗಳನ್ನು ಒಳಗೊಂಡಿದೆ. ಇಲ್ಲಿ ಟೈರ್ ಕಿಲ್ಲರ್‌ಗಳು ಮತ್ತು ರೋಡ್ ಬ್ಲಾಕರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ.
ಇನ್ನು ಇಲ್ಲಿ ಪ್ರದೇಶವಾರು ಜವಾಬ್ದಾರಿಗಳನ್ನು ಹೊಂದಿರುತ್ತದೆ. ಭದ್ರತಾ ಅಧಿಕಾರಿ/ಸಹಾಯಕ ನಿರ್ದೇಶಕರು (ಭದ್ರತೆ) ಸಂಸತ್ ಭವನದ ಕಟ್ಟಡದೊಳಗೆ ಹೋಗುವ ವ್ಯಕ್ತಿಗಳ ಪಾಸ್‌ಗಳನ್ನು ಸರಿಯಾಗಿ ಪರಿಶೀಲಿಸುತ್ತಾರೆ ಮತ್ತು ಅವರನ್ನು ಕೂಡ ಪರಿಶೀಲಿಸುತ್ತಾರೆ. ಯಾವುದೇ ಅನುಮಾನ ಬಂದರು ಅವುಗಳನ್ನು ಹಿರಿಯ ಅಧಿಕಾರಿಗಳಿಗೆ ಹೇಳುತ್ತಾರೆ. ಅಲ್ಲಿ ಅನುಮಾನಾಸ್ಪ ವಿಚಾರಗಳು ತಿಳಿದುಬಂದಲ್ಲಿ ತಕ್ಷಣ ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ.
ಭದ್ರತಾ ಶಸ್ತ್ರಾಗಾರವು ಡೋರ್-ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳು, ಆಧುನಿಕ ಗ್ಯಾಜೆಟ್‌ಗಳು ಮತ್ತು ವಾಹನದ ಪ್ರವೇಶವನ್ನು ನಿಯಂತ್ರಿಸುವ ರೇಡಿಯೋ ಫ್ರೀಕ್ವೆನ್ಸಿ ಟ್ಯಾಗ್‌ಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಈ ಮೂಲಕ ಸಂಸತ್ತಿನಲ್ಲಿ ಸಂದರ್ಶಕನನ್ನು ಪರೀಕ್ಷಿಸಲಾಗುತ್ತದೆ ಮತ್ತು ಅವರ ಬ್ಯಾಗ್‌ಗಳನ್ನು ಕನಿಷ್ಠ ಮೂರು ಬಾರಿ ಪರಿಶೀಲಿಸಲಾಗುತ್ತದೆ. ಮೆಟಲ್ ಡಿಟೆಕ್ಟರ್‌ಗಳಲ್ಲಿ ಪರಿಶೀಲಿಸಿದ ನಂತರ ಮತ್ತೆ ಎರಡನೇ ಹಂತದ ಭದ್ರತಾ ತಪಾಸಣೆ ಮಾಡಲಾಗುತ್ತದೆ. ಸಂದರ್ಶಕರ ಗ್ಯಾಲರಿಗೆ ಪ್ರವೇಶಿಸುವ ಮೊದಲು ಮತ್ತೊಂದು ಭದ್ರತಾ ತಪಾಸಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾಲೋಪ: ಕಲಾಪದೊಳಗೆ ನುಗ್ಗಿದ್ದವ ಗುರುತು ಪತ್ತೆ, ಪ್ರತಾಪ್ ಸಿಂಹ ಪಿಎ ಕಡೆಯಿಂದ ಪಾಸ್
ಸಂಸತ್ತಿನ ಕೆಲವು ಸದಸ್ಯರಿಗೆ ಭದ್ರತಾ ಸಿಬ್ಬಂದಿಗಳನ್ನು ನೀಡಲಾಗಿದೆ. ಆದರೆ ಅವರು ಅಧಿವೇಶನದ ಒಳಗೆ ಬರುವಂತಿಲ್ಲ. ಸಂಸತ್ ಭವನದ ಸಂಕೀರ್ಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರತಿ ಗೇಟ್‌ನಲ್ಲಿ ನಿಖರವಾದ ತಪಾಸಣೆ ನಂತರವೇ ಭದ್ರತಾ ಸಿಬ್ಬಂದಿಗೆ ಸಂಸತ್ತಿನ ಒಳಗೆ ಬರಬಹುದು
ಸಂಸತ್ತಿನ ಒಳಗಿನ ಪ್ರವೇಶವು ವಿವಿಧ ಭದ್ರತಾ ಏಜೆನ್ಸಿಗಳ ನಡುವೆ ಗುರುತಿಸುವಿಕೆ ಮತ್ತು ಪರಿಶೀಲನೆ ಹಾಗೂ ಸಮನ್ವಯವನ್ನು ಸಾಧಿಸಲಾಗುತ್ತದೆ. ದೆಹಲಿ ಪೊಲೀಸ್, ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್, ಇಂಟೆಲಿಜೆನ್ಸ್ ಬ್ಯೂರೋ, ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಮತ್ತು ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಸಂಸತ್ತಿನ ಭದ್ರತಾ ಸೇವೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Wed, 13 December 23