ಕೊರೊನಾ ಲಸಿಕೆ ವಿತರಣೆಯ ಎರಡನೇ ಹಂತಕ್ಕೆ ಭಾರತ ಸಜ್ಜಾಗಿ ನಿಂತಿಗೆ. ಮೊದಲ ಮತ್ತು ಎರಡನೇ ಹಂತದಲ್ಲಿ ಆರೋಗ್ಯ ಮತ್ತು ಮುಂಚೂಣಿಯ ಕೊವಿಡ್ ಕಾರ್ಯಕರ್ತರಿಗೆ ಲಸಿಕೆ ವಿತರಿಸಲಾಗಿತ್ತು. ಈ ಬಾರಿ ಮೂರನೇ ಹಂತದ ಲಸಿಕೆ ವಿತರಣೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ವಯಸ್ಸು ಮೀರಿ ಆರೋಗ್ಯ ಸಮಸ್ಯೆ ಇರುವವರಿಗೆ ಲಸಿಕೆ ನೀಡಲಾಗುತ್ತಿದೆ. ಕೊವಿಡ್ ಲಸಿಕೆ ಪಡೆಯಲು ಹಿರಿಯ ನಾಗರಿಕರು ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದಾಗಿದೆ. ಕೊರೊನಾ ಚುಚ್ಚುಮದ್ದು ಪಡೆಯಲು Co-Win ಪೋರ್ಟಲ್ ಮೂಲಕ ರಿಜಿಸ್ಟ್ರೇಷನ್ ಮಾಡಬಹುದು. Co-Win ಪೋರ್ಟಲ್ ಸೌಲಭ್ಯವನ್ನು ಇಂದು (ಮಾರ್ಚ್ 1) 9 ಗಂಟೆಯಿಂದ ಆರಂಭಿಸಲಾಗಿದೆ. ಜತೆಗೆ, ಆರೋಗ್ಯ ಸೇತು ಆ್ಯಪ್ ಮೂಲಕವೂ ನಾಗರಿಕರು ರಿಜಿಸ್ಟರ್ ಆಗಬಹುದು ಎಂದು ಸರ್ಕಾರ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಈಗಾಗಲೇ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗಿದ್ದು, ಇದೀಗ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಹಾಗೂ 45 ವರ್ಷ ಮೇಲ್ಪಟ್ಟವರು ಕಾಯಿಲೆಯಿಂದ ಬಳಲುತ್ತಿದ್ದರೆ ಅವರಿಗೆ ಉಚಿತವಾಗಿ ಮಾರ್ಚ್ 1ರಿಂದ ಲಸಿಕೆ ನೀಡಲಾಗುತ್ತದೆ.
ಕೊರೊನಾ ಲಸಿಕೆ ಪಡೆಯಲು ಏನು ಮಾಡಬೇಕು?
45 ವರ್ಷ ಮೇಲ್ಪಟ್ಟವರು ಅನಾರೋಗ್ಯದ ಕುರಿತಾಗಿ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ
ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಏಡ್ಸ್ ರೋಗದಿಂದ ಬಳಲುತ್ತಿರುವ ಹೆಸರು ನೋಂದಾಯಿಸಬಹುದು. ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿ, ಕಳೆದ ಒಂದು ವರ್ಷದಲ್ಲಿ ಹೃದಯ ವೈಫಲ್ಯದಿಂದ ಬಳಲುತ್ತಿರುವ ಮತ್ತು ಆಸ್ಪತ್ರೆಗೆ ದಾಖಲಾದವರು, ತೀವ್ರವಾದ ಶ್ವಾಸಕೋಶದ ಅಪಧಮನಿ ಅಧಿಕ ರಕ್ತದೊತ್ತಡ (ಪಿಎಹೆಚ್), ಹೃದಯ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯಲು ಅರ್ಹರು. 10 ವರ್ಷಗಳಿಗಿಂತ ಹೆಚ್ಚು ಕಾಲ ಮಧುಮೇಹದಿಂದ ಬಳಲುತ್ತಿರುವ ಅಥವಾ ಮಧುಮೇಹದಿಂದ ಉಂಟಾಗುವ ತೊಂದರೆಗಳನ್ನು ಹೊಂದಿರುವವರು ನೋಂದಣಿ ಮಾಡಿಕೊಳ್ಳಬಹುದು. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವವರನ್ನು ಸಹ ಲಸಿಕೆ ಪಡೆಯುವ ಪಟ್ಟಿಯಲ್ಲಿ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Covid 19 Vaccination: ದೆಹಲಿಯ ಏಮ್ಸ್‌ನಲ್ಲಿ ಕೊರೊನಾ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ
Published On - 11:04 am, Mon, 1 March 21