ಕೊಲ್ಕತ್ತಾ: ಬಾಂಗ್ಲಾದೇಶದ ಬಿಕ್ಕಟ್ಟಿನ ನಡುವೆ, ನೂರಾರು ಬಾಂಗ್ಲಾದೇಶಿಯರು ಭಾರತದಲ್ಲಿ ಆಶ್ರಯ ಪಡೆಯಲು ಭಾರತ-ಬಾಂಗ್ಲಾದೇಶ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ್ದಾರೆ. ಆದರೆ, ಗಡಿ ಭದ್ರತಾ ಪಡೆಗಳು (BSF) ಯಾವುದೇ ಒಳನುಸುಳುವಿಕೆಯ ಪ್ರಯತ್ನಗಳನ್ನು ವಿಫಲಗೊಳಿಸಿದವು. ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮಾಣಿಕ್‌ಗಂಜ್ ಗಡಿಯಲ್ಲಿ ಇಂದು 500ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳು ನೆರೆದಿದ್ದರು. ವರದಿಗಳ ಪ್ರಕಾರ, ಜನರನ್ನು ನಿಯಂತ್ರಿಸಲು ಬಿಎಸ್ಎಫ್ ಸಿಬ್ಬಂದಿ ಕೂಡ ಗುಂಡು ಹಾರಿಸಿದರು.
ದಕ್ಷಿಣ ಏಷ್ಯಾದ ದೇಶದಲ್ಲಿ ಸೋಮವಾರ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ, ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆಯಿಂದ ಭಾರತದ ಗಡಿಯಲ್ಲಿ ಭದ್ರತೆ ಹೆಚ್ಚಿದೆ.
ಇದನ್ನೂ ಓದಿ: ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಮರಳಲಿದ್ದಾರೆ: ಮಗ ಸಜೀಬ್ ವಾಝೇದ್ ಜಾಯ್
ಬಾಂಗ್ಲಾದೇಶಿಗಳು ಚಿಲ್ದಂಗಾ ಗ್ರಾಮದ ಝೀರೋ ಪಾಯಿಂಟ್‌ಗೆ ಪ್ರವೇಶಿಸಲು ಪ್ರಯತ್ನಿಸಿದರು ಎಂದು ವರದಿಗಳು ಹೇಳುತ್ತವೆ. ಗಡಿ ದಾಟುವ ಮೊದಲು ಬಿಎಸ್ಎಫ್ ಪಡೆ ಸುಮಾರು 600 ರಿಂದ 1000 ನುಸುಳುಕೋರರನ್ನು ತಡೆದಿದ್ದಾರೆ. ಒಳನುಸುಳುವಿಕೆಯನ್ನು ತಡೆಯಲು ಬಿಎಸ್ಎಫ್ ಸಿಬ್ಬಂದಿ ಹಳ್ಳಿಗಳಿಗೆ ತೆರಳಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು.
#BREAKING: India’s Border Security Force (BSF) has foiled a major infiltration attempt by Bangladeshi infiltrators at Manikganj border where over 600 Bangladeshi nationals attempted to enter Indian territory. BSF North Bengal Frontier successfully sent them back to Bangladesh. pic.twitter.com/ukzaSvYo0z
— Aditya Raj Kaul (@AdityaRajKaul) August 7, 2024
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮುಂದಿನ ಸೂಚನೆ ಬರುವವರೆಗೆ ವೀಸಾ ಕೇಂದ್ರ ಮುಚ್ಚಿದ ಭಾರತ
ಶೇಖ್ ಹಸೀನಾ ಅವರು ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಬಾಂಗ್ಲಾದೇಶದ ಮಿಲಿಟರಿ ಮಧ್ಯಂತರ ಸರ್ಕಾರವನ್ನು ರಚಿಸುವುದಾಗಿ ಹೇಳಿದೆ. ಮಂಗಳವಾರ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಸಂಸತ್ತನ್ನು ವಿಸರ್ಜಿಸಿ, ಮಧ್ಯಂತರ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟರು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮತ್ತು ಶೇಖ್ ಹಸೀನಾ ಅವರ ಕಟ್ಟಾ ವಿಮರ್ಶಕ ಮುಹಮ್ಮದ್ ಯೂನಸ್ ಅವರು ಮಧ್ಯಂತರ ಸರ್ಕಾರವನ್ನು ಮುನ್ನಡೆಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ